ಪುಟ:ಬಾಳ ನಿಯಮ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ರಾಬರ್ಟ್ ಸೂಚಿಸಿ ಹೇಳಿದನು: ನೋಡು, ಹವಾಯಿ ಮುಖಂಡರು ತಾವಾ. ಗಿಯೆ ತಮ್ಮ ಪ್ರದೇಶಗಳನ್ನು ಬಿಟ್ಟುಕೊಡುತ್ತಿದ್ದಾರೆ. ಹವಾಯಿಯ ನಾಯಕಿ ಯರೇ ಬಿಳಿಯರನ್ನು ಮದುವೆ ಮಾಡಿಕೊಂಡಿದ್ದಾರೆ; ಅಂದಮೇಲೆ ಅವರ ಗಂಡಂದಿರ ಕೈಗಳಿಗೆ ಈ ನಾಡಿನ ಅಧಿಕಾರ ಕ್ರಮ ಕ್ರಮವಾಗಿ ಸೇರುತ್ತದೆ. ಬಿಳಿಯರ ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟು ನಡೆದು, ಉತ್ಪತ್ತಿ ವಿಪರೀತವಾಗಿ ಹೆಚ್ಚತೊಡಗಿವೆ. ಅಜ್ಜ ರೋಜರ್ ವಿಲ್ಬನ್ ಅಜ್ಜಿಯ ಭೂಮಿಯಷ್ಟು ಬಡ ಪ್ರದೇಶಗಳನ್ನೇ ವಿಸ್ತರಿಸಿ, ಅಲ್ಲೇ ದೊಡ್ಡ ದಾದ ಕಿಲೋಹನ ದನಗಾವಲನ್ನು ಕಟ್ಟಿಲ್ಲವೇ ?” “ ಆದರೂ ಅದು ಪಾರ್ಕರ್ ಕ್ಷೇತ್ರಕ್ಕಿಂತ ಎರಡನೆಯದೇ,” ಎಂದು ಮಾರ್ಥ ಜಂಭದಿಂದ ಮಾತಿನ ಓಟವನ್ನು ನಿಲ್ಲಿಸಿದಳು. ಬೆಲ್ಲ ಮತ್ತೆ ಪ್ರಾರಂಭಿಸಿದಳು : “ರಾಬರ್ಟ್ ಹೇಳುತ್ತಿದ್ದಂತೆ ನಮ್ಮ ತಂದೆಗೆ ಅಜ್ಜನಷ್ಟು ಮುಂದಾಲೋಚನೆಯಿರಲಿಲ್ಲ; ಏಕೆಂದರೆ ಪಾರ್ಕರ್ ಕ್ಷೇತ್ರದ ಅರ್ಧ ಭಾಗವನ್ನು ಕಿಲೋಹನಕ್ಕೆ ಸೇರಿಸಲು ಒಳ್ಳೆಯ ಅವಕಾಶವಿತ್ತು; ಆಗ ಕಿಲೋಹನವೇ ಎಲ್ಲಕ್ಕಿಂತಲೂ ದೊಡ್ಡದಾಗುತ್ತಿತ್ತು....ಐವತ್ತು ವರ್ಷಗಳ ಹಿಂದೆ ಹವಾಯಿಯ ಭವಿಷ್ಯ ಸಕ್ಕರೆಯಲ್ಲೇ ಅಡಗಿದೆ ಎಂದು ನಾನು ಹೇಳಿದ್ದೆ. ಈಗ ಎಲ್ಲವೂ ಸತ್ಯವಾಗಿದೆ. ನೋಡು ಬೆಲ್ಲ, ಜಾರ್ಜ್ ಕ್ಯಾಸ್ಟನರ್ ಎಂಬ ಯುವಕ ಬಿಳಿಯನಿದ್ದಾನೆ. ಅವನ ದೃಷ್ಟಿ ಬಹು ವರ್ಷಗಳ ಆಶೋತ್ತರ ಗಳನ್ನು ನೋಡಬಲ್ಲುದು. ಈಗ ನೀನೆ ಯೋಚಿಸು ; ನಮ್ಮಲ್ಲಿ ಹುಡುಗಿಯರು ಸಂಖ್ಯೆಯೇ ಜಾಸ್ತಿ. ಕಿಲೋಹನ ಪ್ರದೇಶಗಳು ಹುಡುಗರ ಹಕ್ಕಿಗೆ ಸೇರ ತಕ್ಕವು. ಆದ್ದರಿಂದ ನೀನು ಜಾರ್ಜ್ನನ್ನು ಮದುವೆಯಾದರೆ, ನಿನ್ನ ಭವಿಷ್ಯ ಉಜ್ವಲವಾಗಿದೆ....

  • “ರಾಬರ್ಟ್ ಆ ರೀತಿ ಉಪದೇಷಿಸಿದನು. ನನಗೆ ಆಗ ಕೇವಲ ಹತ್ತೊಂಬತ್ತು ವರ್ಷ. ಆಗತಾನೆ 'ರಾಯಲ್ ಛೀಫ್ ಸ್ಕೂಲಿ' ನಿಂದ ಬಂದಿದ್ದೆ. ಈಗಿನ ಹುಡುಗಿಯರಂತೆ ನಾವುಗಳು 'ಸ್ಟೇಟ್ಸ್ಗೆ' ವಿಧ್ಯಾಭ್ಯಾಸಕ್ಕಾಗಿ ಹೋದವ ರಲ್ಲ. 'ಮೇನ್ ಲ್ಯಾಂಡ್'ನಲ್ಲಿ ಪ್ರಪ್ರಥಮವಾಗಿ ವಿದ್ಯೆ ಕಲಿತವರಲ್ಲಿ ನೀನೂ ಒಬ್ಬಳಲ್ಲವೇ, ಮಾರ್ಥ ? ಆದರೆ ನಾನು ಮಾತ್ರ ಇದ್ದಲ್ಲಿಯೇ ಎಲ್ಲ ಮುಗಿಸಿ ದವಳು. ಹಾಗಿರುವಲ್ಲಿ ಪ್ರೇಮದ ವಿಷಯವಾಗಲೀ, ಪ್ರೇಮಿಗಳ ವರ್ತನೆ ಯಾಗಲಿ ಹೇಗೆ ತಾನೆ ನನಗೆ ತಿಳಿದೀತು ? ಇನ್ನು ಮದುವೆಯೆಂದರೆ ಸ್ಪಷ್ಟವಾಗಿ, ಏನೂ ಗೊತ್ತಾಗುತ್ತಿರಲಿಲ್ಲ. ಇಷ್ಟು ನನ್ನ ಮನಸ್ಸಿಗೆ ಹೊಳೆದಿತ್ತು : ಎಲ್ಲ