ಪುಟ:ಬಾಳ ನಿಯಮ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ಬಾಳ ನಿಮಯ ಹೆಂಗಸರೂ ಒಂದಲ್ಲ ಒಂದು ದಿನ ಮದುವೆಯಾಗಿದ್ದಾರೆ. ಅಂದ ಮೇಲೆ ಅದೊಂದು ಅವರ ಜೀವನದ ಹವ್ಯಾಸವಿರಬೇಕು. ಹಾಗೆಯೇ ಜಾರ್ಜ್ನನ್ನು ಮದುವೆಯಾಗುವುದು ನನ್ನ ಜೀವನದ ಹವ್ಯಾಸ. ರಾಬರ್ಟ್ ಮಾವ ಬುದ್ದಿ ಯಿಲ್ಲದೆ ಉಪದೇಶಮಾಡುವುದಿಲ್ಲ. ಅದೂ ಅಲ್ಲದೆ ರಾಬರ್ಟ್ ದೊಡ್ಡ ಬುದ್ದಿ ವಂತನೆಂದು ನನಗೆ ಗೊತ್ತಿದೆ.........ಅಂತೂ ನನ್ನ ಗಂಡನನ್ನೇ ಹಿಂಬಾಲಿಸಿ, ನಹಾಲದ ಬೇಸರದ ಹಾದಿಯನ್ನು ಹಿಡಿದೆ. “ನಿನಗೆ ಜ್ಞಾಪಕವಿದೆ. ಅಲ್ಲಿ ಮರಗಳೇ ಇರಲಿಲ್ಲ ; ಅಲ್ಲವೇ? ಬರಿಯು ಹುಲ್ಲುಗಾವಲು ; ಹಲ್ಲು ನುರಳಿ ಸುರುಳಿಯಾಗಿ ಹಬ್ಬಿತ್ತು. ಹಿಂದೆ ನೋಡಿದರೆ, ಎತ್ತರದ ಪರ್ವತಗಳು. ಕೆಳಗಡೆ ಸಮುದ್ರ. ಗಾಳಿಯಂತೂ ಜೋರಾಗಿ ಬೀಸುತ್ತಿತ್ತು. ವೈಮಿಯ, ನಹಾಲ ಗಾಳಿಗಳ ಜೊತೆಗೆ ಕೊನಾ ಗಾಳಿಯ ಬೀಸುತಿತ್ತು. ಅದರಿಂದ ನನಗೇನೂ ತೊಂದರೆಯಿರಲಿಲ್ಲ. ನಾನು ಆ ಕಡೆ ಲಕ್ಷವನ್ನೇ ಬೀರಲಿಲ್ಲ. ಕಿಲೋಹನ ಸ್ಥಳದಲ್ಲಿ ಎಷ್ಟೋ ಬಾರಿ ಅಂಥ ಗಾಳಿ ಗಳು ಬೀಸಿದ್ದವು. ಆಗ ನಾನೇನು ಬೇಸರಗೊಂಡಿರಲಿಲ್ಲ. ಆದರೆ ನಹಾಲ ಏಕೊ ಮಂಕು ಕವಿದಿತ್ತು. ಅಲ್ಲಿದ್ದುದು ನನ್ನ ಜಾಯಮಾನಕ್ಕೆ ಒಗ ದ ವಾತಾವರಣ. ಅದಕ್ಕೆ ತಕ್ಕಂತೆ ಗಂಡನಾದ ಜಾರ್ಜ್ ಕೂಡ ವಿಪರೀತ ನಿಸ್ಸಹನಾಗಿದ್ದನು. ಇನ್ನು ಯಾರ ಬಳಿ ಹೋಗಲಿ? ಆನಂದದ ಬುಗ್ಗೆ ಎಲ್ಲೂ ಕಾಣಲಿಲ್ಲ. ನಮ್ಮಿಬ್ಬರನ್ನು ಬಿಟ್ಟರೆ ಯಾರ ಸುಳಿವೂ ಇಲ್ಲ. ಅವನಿ ಗೇನೋ ಕೈ ತುಂಬ ಕೆಲಸವಿತ್ತು. ನ್ಯಾಬ್ಲೆಂಡಿಗೆ ಹೊರಟಿದ್ದ ಗ್ಲೆನ್ಸ್ ಅವರಿ ಗಾಗಿ ನಹಾಲದ ಆಡಳಿತವನ್ನು ಜಾರ್ಜ್ ನೋಡಿಕೊಳ್ಳುತ್ತಿದ್ದನು. ವರ್ಷಕ್ಕೆ ಸಾವಿರದ ಎಂಟುನೂರು ಬರುತ್ತಿತ್ತು. ಜೊತೆಗೆ ಬೀಫ್ ಮಾಂಸ ಅಷ್ಟಿಷ್ಟು ಸಿಗುತಿತ್ತು. ಒಡಾಡಲು ಕುದುರೆಗಳಿದ್ದುವು. ದೊಡ್ಡ ದನಗಾವಲು ಮತ್ತು ಅದಕ್ಕೆ ತಕ್ಕ ವ್ಯವಸ್ಥೆಯೂ ಇವನ ವಶದಲ್ಲೇ ಇದ್ದವು.” “ಆಗಿನ ಕಾಲಕ್ಕೆ ಜಾರ್ಜ್ ಪಡೆಯುತ್ತಿದ್ದ ಸಂಬಳ ಜಾಸ್ತಿಯೆಂದೇ ಹೇಳಬೇಕು....” ಎಂದಳು ಮಾರ್ಥ, “ಆದರೆ ಜಾರ್ಜ್ ಕ್ಯಾಸ್ಟನರ್‌ನಂಥ ಮನುಷ್ಯನಿಗೆ ಮತ್ತು ಆತನ ಸೇವಾ ಧುರೀಣತೆಗೆ ಆ ಸಂಬಳ ಬಹಳ ಕಡಿಮೆ ...” ಎಂದು ಬೆಲ್ಲ ತನ್ನ ಗಂಡನ ಪರ ವಾದಿಸುತ್ತಾ ಮುಂದುವರಿದಳು. “ ಅವನೊಡನೆ ನಾನು ಮೂರು ವರ್ಷಗಳು ಜೀವನ ಮಾಡಿದ್ದೇನೆ. ಏನೇ ಅಗಲಿ ಪ್ರತಿದಿನವೂ ಬೆಳಗಿನ ಝಾವ ನಾಲ್ಕೂವರೆ ಘಂಟೆಗೆ ಎದ್ದು ಬಿಡುತ್ತಿದ್ದನು. ತನ್ನ ಮಾಲೀ