ಪುಟ:ಬಾಳ ನಿಯಮ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೭8 ಕರಿಗೆ ಅವನು ತುಂಬ ವಿಧೇಯನಾಗಿದ್ದನು. ಲೆಕ್ಕಾಚಾರದಲ್ಲಂತೂ ಒಂದು ಪೆನ್ನಿಯೂ ವ್ಯತ್ಯಾಸಬರುತ್ತಿರಲಿಲ್ಲ. ತನ್ನದಾಗಿದ್ದ ಕಾಲ, ಶಕ್ತಿ ಎಲ್ಲವನ್ನೂ ಮಾಲೀಕರಲ್ಲಿ ಅರ್ಪಿಸಿದಂತಿತ್ತು. ಬಹುಶಃ ಅದರಿಂದಲೇ ನಮ್ಮ ಜೀವನದಲ್ಲಿ ನಿರಾಶೆ ಹುಟ್ಟಿರಬೇಕು. ಆದರೆ ಮಾರ್ಥ, ಅವನೇನೂ ದುಂದುವೆಚ್ಚ ಮಾಡಿ ದವನಲ್ಲ ; ಇಲ್ಲಿ ಕೇಳು. ತನಗೆ ಬರುತಿದ್ದ ಸಾವಿರದ ಎಂಟುನೂರಿನಲ್ಲಿ ಪ್ರತಿ ವರ್ಷವೂ ಸಾವಿರದ ಆರುನೂರನ್ನು ಬೇರೆಯ ಕಡೆ ತೆಗೆದಿಡುತ್ತಿದ್ದನು. ನೀನೇ ಯೋಚನೆಮಾಡು ! ವರ್ಷಕ್ಕೆ ಇನ್ನೂರು ; ಅಷ್ಟರಲ್ಲಿ ನಾವಿಬ್ಬರೂ ಜೀವಿಸಿದ್ದು, ಅದೃಷ್ಟವಷಾತ್ ಅವನು ಕುಡಿಯುವ ಅಥವಾ ಸಿಗರೇಟು ಸೇದುವ ಹವ್ಯಾಸಕ್ಕೆ ಬೀಳಲಿಲ್ಲ .. ಉಡುಪುಗಳನ್ನು ಕೊಳ್ಳಲು ಸಾಧ್ಯವೇ ? ನಾನೇ ಹೊಲಿಯು ತಿದ್ದೆ.....ನಿನಗೆ ಊಹಿಸುವುದೂ ಅಸಾಧ್ಯವೆ ? ಇರಲಿ. ದನಕಾಯುವ ಹುಡುಗರು ಸೌದೆ ಒಡೆಯುತ್ತಿದ್ದಾಗ ಅವರಿಗೆ ಕಾಣದಂತೆ ನನ್ನ ಕೆಲಸ ಮಾಡಿಕೊಳ್ಳುತಿದ್ದೆ ; ಬೇಯಿಸಿ ಅಡಿಗೆಮಾಡುವುದು, ನೆಲ ತಿಕ್ಕುವುದು” - “ಸಾಕು, ನಾಕು. ಹುಟ್ಟಿದಾಗಿನಿಂದ ಕೆಲಸವೆಂದರೇ ತಿಳಿಯದ ನಿನಗೆ ಇದೆಲ್ಲಿ ಗಂಟುಬಿತ್ತು ! ಮಾತೆತ್ತಿದರೆ ಜವಾನರು ಓಡಿಬರುತಿತ್ತು ದು ಮಾತ್ರ ನಿನಗೆ ಗೊತ್ತಿತ್ತು ! ಅಷ್ಟೇಕೆ ? ಕಿಲೋಹನದಲ್ಲಿ ದೊಡ್ಡ ಸೈನ್ಯವೇ ಕೈ ಕೆಳಗೆ ಇದ್ದಂತಿತ್ತು ...” ಎಂದು ಮಾರ್ಥ ಕನಿಕರಪಟ್ಟಳು. “ಅಯ್ಯೋ, ನಾನು ನರಳಿದ್ದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಹೇಳಿದ್ದೇನೆ ! ಅಷ್ಟರಲ್ಲೇ ನಿನಗೆ ಬೇಸರವಾಯಿತು. ಇನ್ನೂ ಸ್ವಲ್ಪ ಕೇಳು. ಒಂದು ಪೌಂಡು ಕಾಫಿಯನ್ನು ಎಷ್ಟು ದಿನಗಳ ಮಟ್ಟಿಗೆ ಉಪಯೋಗಿಸಬೇಕಾಗಿತ್ತು; ಅದೂ ಬಲಾತ್ಕಾರವಾಗಿ! ಹಳೆಯ ಪೊರಕೆ ಸಂಪೂರ್ಣ ನಾಶವಾಗುವ ತನಕ ಹೊಸದು ಬರುತ್ತಿರಲಿಲ್ಲ! ಆ ಫ್ರೆಂಚ್ ಬೀಫ್ ! ಕೆಡದಂತೆ ಇಡುವುದಕ್ಕಾಗಿ ಉದ್ದುದ್ದ ವಾಗಿ ಸೀಳಿ ಬಿಸಿಲಲ್ಲಿ ಒಣಗಿಸುತಿದ್ದೆ ; ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಯಾವಾ ಗಲೂ ಅದೇ ! ಮೊದಲೂಟದ ಸಂಭ್ರಮವೇ ಇಲ್ಲ ; ಅಂಬಲಿಯೂ ದುರ್ಲಭ ವಾಗಿತ್ತು....” ಅವಳು ಥಟ್ಟನೆದ್ದು ಹತ್ತಾರು ಹೆಜ್ಜೆ ಮುಂದಕ್ಕೆ ಹೊರಟಳು. ಬಣ್ಣ ಬಣ್ಣದ ಕಲ್ಲುಗಳನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಳು. ಮನಸ್ಸಿನ ಉದ್ವೇಗ ಕಡಿಮೆಯಾಗಲು ಸ್ವಲ್ಪಕಾಲ ಹಿಡಿಯಿತು. ಹಿಂತಿರುಗಿ ಬಂದು ಆಸನದಲ್ಲಿ ಕುಳಿತಾಗ ಸೊಗಸಾಗಿ ಕಂಡಳು. ಎದೆಯ ಭಾಗವನ್ನು ಎತ್ತಿ ಕಟ್ಟಿ ದ್ದಳು. ಎಷ್ಟೇ ಕಷ್ಟ ಪಟ್ಟಿದ್ದರೂ ಹವಾಯಿ ಹೆಂಗಸುತನ ಮಾತ್ರ ಅವಳನ್ನು