________________
೧೭೬ ಬಾಳ ನಿಯಮ ಬಿಗಿಹಿಡಿದಿತ್ತು. ಆದರೂ ಅವಳಲ್ಲಿ ಬಿಳಿಯರ ಅಂಶವನ್ನು ಪ್ರತಿಬಿಂಬಿಸಲು ಅವಳ ಚರ್ಮವೇ ಸಾಕ್ಷಿ; ನೆಯ್ದ ಬಟ್ಟೆಯಂತೆ ರಂಗು ರಂಗಾಗಿತ್ತು. ಸಣ್ಣ ಬಾಯಿಯ ಸುತ್ತಲೂ ಮೃದುವಾಗಿ ನೇವರಿಸಿದ್ದ ಗೆರೆಗಳು ಏನನ್ನೋ ಸೂಚಿಸು ವಂತಿದ್ದುವು ; ಅರುವತ್ತೆಂಟು ವರ್ಷಗಳಾದ ಮೇಲೆ ಮುತ್ತಿನ ಸವಿಯನ್ನು ನೆನಸಿಕೊಂಡು ಹಾಡುತ್ತಿರಬಹುದು. ಒಟ್ಟಿನಲ್ಲಿ ಆ ಭಂಗಿ ಮನಮೋಹಕ ವಾಗಿತ್ತು. ಬಿಳಿಯರ ಉತ್ಸಾಹೀ ರಕ್ತವನ್ನು ಚಿಮ್ಮುತ್ತಾ ಬರುವ ಹಳೆಯ ಕಾಲದ ಹವಾಯಿ ನಾಯಕಿಯಂತೆ ಕಂಡಳು. ಸೋದರಿ ಮಾರ್ಥಳಿಗಿಂತ ಇವಳು ಎತ್ತರವಾಗಿದ್ದಳು; ರಾಣಿಯಲ್ಲಿರುವಂಥ ಠೀವಿಯಿತ್ತು. - “ನಿನಗೆ ತಿಳಿದಿರಬಹುದು, ನಾವು ಬಡತನದ ಉಣಿಸಿನವರೆಂದು ಪ್ರಸಿದ್ದ ರಾಗಿದ್ದೆವು....” ಬೆಲ್ಲ ಸಾಕಷ್ಟು ಹಗುರವಾಗಿ ನಕ್ಕಳು. “ನಹಾಲದ ಅಕ್ಕ ಪಕ್ಕದಲ್ಲಿ ಮತ್ತೊಂದು ಮನೆಯಿರಲಿಲ್ಲ ; ಎಷ್ಟೋ ಮೈಲಿಗಳು ಹೋಗಬೇಕಾ ಗಿತ್ತು. ಪ್ರಯಾಣದಲ್ಲಿ ತಡವಾದ ಅಥವಾ ಬಿರುಗಾಳಿ ಮಳೆಯ ದೆಸೆಯಿಂದ ಪ್ರಯಾಣವನ್ನು ಮುಂದುವರಿಸಲಾಗದ ಜನ ಇದ್ದಕ್ಕಿದ್ದಂತೆ ನಮ್ಮಲ್ಲಿ ಇಳಿದುಬಿಡುತ್ತಿದ್ದರು. ಎಷ್ಟೋ ರಾತ್ರಿಗಳು ನಮ್ಮ ಪಾಡುಬೇಡ. ಆಗಿನ ಕಾಲದ ದನಗಾವಲುಗಳಲ್ಲಿ ಲೆಕ್ಕವಿಲ್ಲದ ಹಾಗೆ ನಡೆಯುತ್ತಿದ್ದ ಖರ್ಚು ನಿನಗೆ ಗೊತ್ತಿದೆ. ಆದರೆ ನಾವು ಆ ರೀತಿ ಮಾಡಲು ಸಾಧ್ಯವೇ? ಸರಿ ; ನಾವು ಎಲ್ಲರಿಗೂ ನಗೆಪಾಟಲು ! 'ಅವರು ನಕ್ಕರೆ ನಮಗೇನಂತೆ?” ಎನ್ನುತ್ತಿದ್ದ ಜಾರ್ಜ್; 'ಅವರು ಇವತ್ತು ಈ ಘಳಿಗೆಯಲ್ಲಿ ಮಾತ್ರ ಜೀವಿಸುವವರು. ಈಗಿನಿಂದ ಇಪ್ಪತ್ತು ವರ್ಷಗಳ ಲೆಕ್ಕ ಹಾಕು ; ಆಗ ನಮ್ಮ ಸರದಿ. ಬೆಲ್ಲ, ಹೆದರಬೇಡ. ಅವರು ಎಲ್ಲಿದ್ದಾರೋ ಅಲ್ಲಿಯೇ ಇರುತ್ತಾರೆ; ನಮ್ಮ ಕೈಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಕಾಲ ಬರುತ್ತದೆ. ಅವರ ಅವಶ್ಯಕತೆ ಯನ್ನು ಪೂರೈಸಲು, ನಾವು ಆಹಾರವನ್ನು ನೀಡಲೇಬೇಕಾಗುತ್ತದೆ. ಆಗ. ಅವರಿಗೆ ಚೆನ್ನಾಗಿಯೇ ಸತ್ಕಾರ ಮಾಡೋಣ ! ಬೆಲ್ಲ, ಹೇಗಿದ್ದರೂ ನಾವು ಶ್ರೀಮಂತರಾಗಿರುತ್ತೇವೆ; ಎಷ್ಟರ ಮಟ್ಟಿಗೆ ಎಂದು ಹೇಳಲು ನನಗೇ ಹೆದರಿಕೆಯಾಗುತ್ತದೆ. ಆದರೆ ನನ್ನ ಕಾರ್ಯದಲ್ಲಿ ನನಗೆ ಸಂಪೂರ್ಣ ಭರವಸೆ ಯಿದೆ; ಹಾಗೆಯೆ ನೀನು ಕೂಡ ನನ್ನಲ್ಲಿ ನಂಬಿಕೆಯಿಡಬೇಕು....' ಹೀಗೆಲ್ಲಾ ಹೇಳುತ್ತಿದ್ದನು, ಮಾರ್ಥ.......
- ಜಾರ್ಜ್ ಹೇಳಿದ್ದು ನಿಜ. ಇಪ್ಪತ್ತು ವರ್ಷಗಳ ನಂತರ ಪಾಪ ; ಅಲ್ಲಿಯತನಕ ಅವನು ಬದುಕಲೇ ಇಲ್ಲ. ನನ್ನ ವರಮಾನ ತಿಂಗಳಿಗೆ ಒಂದು