ಪುಟ:ಬಾಳ ನಿಯಮ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೬ ಮೋಹದ ಬಲೆಯಲ್ಲಿ ಸಾವಿರವಾಗಿತ್ತು. ಅಬ್ಬ ! ಈಗ ಎಷ್ಟಾಗಿದೆಯೋ ನನಗೇ ಗೊತ್ತಿಲ್ಲ. ಆದರೆ ಆಗಿನ ವಯಸ್ಸು ಹತ್ತೊಂಬತ್ತು, ನನ್ನ ಮನಸ್ಸು ಸ್ಥಿಮಿತಕ್ಕೇ ಬರು ತಿರಲಿಲ್ಲ. ಸುಮ್ಮನೆ ಜಾರ್ಜ್ನ ನ್ನು ಪೀಡಿಸುತಿದ್ದೆ : ' ಈಗ! ಈಗ ! ಈಗ ಜೀವಿಸೋಣ. ಇಪ್ಪತ್ತು ವರ್ಷಗಳಾದ ಮೇಲೆ ನಾವು ಇರುತ್ತೇವೆಯೋ ಇಲ್ಲವೋ !.... ಕಸಗುಡಿಸುವ ಹೊಸ ಪೊರಕೆ ಈಗಲೇ ಬೇಕಾಗಿದೆ. ಮೂರನೆ ದರ್ಜೆಯ ಕಾಫಿ ಪುಡಿಯನ್ನಾದರೂ ತನ್ನಿ ; ಪೌಂಡಿಗೆ ಎರಡು ಸೆಂಟು ಜಾಸ್ತಿಯಷ್ಟೆ. ಉಪಯೋಗಿಸುತ್ತಿರುವ ಹಿಟ್ಟು, ವಾಕರಿಕೆ ಬರಿಸುವಂತಿದೆ ! ಇದಕ್ಕಿಂತಲಾದರೂ ಅದು ಮೇಲಲ್ಲವೇ ? ಈಗಲಾದರೂ ಮೊಟ್ಟೆಯನ್ನು ತುಪ್ಪದಲ್ಲೇಕೆ ಕರಿಯಬಾರದು ? ಕಡೆಯಪಕ್ಷ ಒಂದಾದರೂ ಒಳ್ಳೆಯ ಟೇಬಲ್ ಕ್ಲಾತ್ ಬೇಡವೇ? ನಮ್ಮ ಬಟ್ಟೆಯೋ ! ಚಾಪೆಯೋ ! ಹರಿದುಹೋದ ಚಾಪೆಯ ಮೇಲೆ ಅತಿಥಿಯನ್ನು ಕೂಡಿಸಲು ನನಗೆ ನಾಚಿಕೆಯಾಗುತ್ತದೆ ; ಅಪರೂಪವಾಗಿ ಬರುವವರಿಗೆ ಎಂಥ ಮರ್ಯಾದೆ !' C ( ಸ್ವಲ್ಪ ಸಮಾಧಾನ ತಂದುಕೊ, ಬೆಲ್ಲ' ಎಂದು ಅವನು ಉತ್ತರ ಹೇಳುತ್ತಿದ್ದನು. ' ಇಷ್ಟರಲ್ಲೇ, ಕೆಲವು ವರ್ಷಗಳಲ್ಲೇ, ನೀನೇ ನೋಡುತ್ತೀಯೆ. ಇಂದು ನಮ್ಮ ಟೇಬಲ್ಲಿನ ಹತ್ತಿರ ಕುಳಿತುಕೊಳ್ಳಲು ಅಥವಾ ಚಾಪೆಯ ಮೇಲೆ ಮಲಗಲು ಹಾಸ್ಯ ಮಾಡುವವರಲ್ಲಿ ಕೆಲವರಾದರೂ ಅಂದು ಇರುತ್ತಾರೆ ; ನಮ್ಮ ಆಹ್ವಾನವೇ ದೊಡ್ಡದೆಂದು ಬಾಯಿಬಿಡುತ್ತಾರೆ. ಹೋದ ವರ್ಷ ಸತ್ತುಹೋದ ಸ್ಟೀವನ್ಸ್ ಜ್ಞಾಪಕವಿದೆಯೇ ?-ಇರುವ ತನಕ ಚನ್ನಾಗಿ ಉಡಾಯಿಸಿಬಿಟ್ಟ ; ಎಲ್ಲರಿಗೂ ಅವನು ಸ್ನೇಹಿತನೇ ! ಆದರೆ ತನಗೆ ತಾನೆ ಕೈಕೊಟ್ಟ ! ಕೊಹಾಲದ ಜನ ಅವನನ್ನು ಗೋರಿಮಾಡಬೇಕಾಯಿತು ; ಏಕೆಂದರೆ ಸಾಯುವಾಗ ಅವನಲ್ಲಿ ಒಂದು ಕಾಸೂ ಇರಲಿಲ್ಲ ; ಸುತ್ತಲೂ ಸಾಲ. ಇತರರೂ ಅದೇ ದಾರಿಯನ್ನು ಹಿಡಿಯುವುದು ಕಾದುನೋಡಬೇಕು. ನಿನ್ನ ಸೋದರ ಹಾಲ್ ಕೂಡ ಅಷ್ಟೆ ; ಈಗಿರುವಂತೆ ಇನ್ನು ಐದುವರ್ಷಗಳೂ ನಡೆಯುವುದಿಲ್ಲ. ಈಗಲೇ ಸೋದರ ಮಾವಂದಿರ ಎದೆಯನ್ನು ಕೆರೆಯುತ್ತಿದ್ದಾನೆ .... ಮತ್ತೆ ಅಲೋಲಿಯೊ ರಾಜ ಕುಮಾರ. ನನ್ನ ಎದುರಿಗೆ ಥಳಕುಮಾಡುತಿದ್ದಾನೆ. ಅವನ ಹಿಂದೆ ಐವತ್ತು ಜೋರಾದ ಕುದುರೆ ಸವಾರರಿದ್ದಾರೆ. ಅವರೆಲ್ಲರೂ ಕಂಠಪೂರ್ತಿ ಕುಡಿಯುವ 'ಕನಕ' ಜನಾಂಗದವರು. ಕಷ್ಟಪಟ್ಟು ದುಡಿಯುವುದನ್ನು ಬಿಟ್ಟು, ತಮ್ಮ, ಭವಿಷ್ಯತ್ತನ್ನು ಹಾಳುಮಾಡಿಕೊಳ್ಳುತಿದ್ದಾರೆ; ಏಕೆಂದರೆ, ಅವರು ತಿಳಿದಿರುವಂತೆ ಲೀಲೋಲಿ ಎಂದಿಗೂ ಹವಾಯಿ ರಾಜನಾಗುವುದಿಲ್ಲ. ಅಷ್ಟೇಕೆ, ಅವನು - 12