ಪುಟ:ಬಾಳ ನಿಯಮ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮ ಬಾಳ ನಿಯಮ ಅಲ್ಲಿಯ ತನಕ ಬದುಕಲಿ, ನೋಡೋಣ.”

  • ಜಾರ್ಜ್ ಸತ್ಯದ ಮಾತನ್ನೇ ಆಡಿದನು. ಸೋದರ ಹಾಲ್ ಸತ್ತು ಹೋದ. ಅಲೋಲಿಯೊ ರಾಜಕುಮಾರನೂ ಅದೇ ಹಾದಿ ಹಿಡಿದ. ಆದರೆ ಜಾಜ್ ಹೇಳಿದ್ದು ಸಂಪೂರ್ಣ ಸತ್ಯವಾಗಲಿಲ್ಲ. ಅವನೇನೊ ಒಂದು ದಿನವೂ ಕುಡಿಯಲಿಲ್ಲ ಅಥವಾ ಸಿಗರೇಟು ಸೇದಲಿಲ್ಲ ; ತೋಳ ಶಕ್ತಿಗೆ ಎಲ್ಲಿ ಕುಂದು ಬರುವುದೋ ಎಂಬ ಭಯದಿಂದ ಒಂದು ಸಾರಿಯೂ ಆಲಿಂಗನ ಮಾಡಿಕೊಳ್ಳ ಲಿಲ್ಲ ; ತುಟಿಗೆ ತುಟ ತಾಗಿಸುವುದೂ ಕೂಡ ಒಂದು ಸೆಕೆಂಡು ಮಾತ್ರ! ಮುತ್ತಾಡುವುದೆಂದರೆ ಅವನಿಗೆ ಮನಸ್ಸೇ ಬಾರದು ; ಸೀಮೆಎಣ್ಣೆ ಬುಡ್ಡಿ ಮಂಕಾಗುವ ತನಕ ಮಲಗಿರುವುದು ಮತ್ತು ಕೋಳಿ ಕೂಗುವ ಮುನ್ನ ಎದ್ದು ಬಿಡುವುದು ಅವನ ಸ್ವಭಾವ ; ಎಂದಿಗೂ ಸಾವಿನ ಯೋಚನೆಯನ್ನೇ ಮಾಡಿ ದವನಲ್ಲ ! ಅಂಥವನು ಹಾಲ್, ಲೀಲೋಲಿಯೊ ಇವರಿಗಿಂತಲೂ ಬಹು ಬೇಗ ಸತ್ತುಹೋದನು ! ...

“ಇಷ್ಟು ಬೇಗ ಕಥೆ ಮುಗಿಯಲಿಲ್ಲ.... ಜಾರ್ಜ್ ಇದ್ದಾಗ, ನಾನು ಬೇಸರ ದಿಂದಲೇ ಕಾಲ ತಳ್ಳುತಿದ್ದೆ. “ಅತುರ ಬೇಡ ಬೆಲ್ಲ' ಎಂದು ರಾಬರ್ಟ್ ಮಾವ ಹೇಳುತ್ತಲೇ ಇದ್ದನು. (ಜಾರ್ಜ್ ಕ್ಯಾಸ್ಟ್ನರ್ ಮುಂದೆ ಬರುವ ಮನುಷ್ಯ. ನಿನಗೆ ಒಳ್ಳೆಯವನನ್ನೇ ಗಂಟು ಹಾಕಿದ್ದೇನೆ. ಇಂದು ನೀನು ಕಷ್ಟ ಪಡುವುದ ರಿಂದಲೇ ಮುಂದೆ ಸೊಗಸಾದ ನಾಡೊಂದು ಕಾದಿದೆ. ಹವಾಯಿಯನ್ನು ಹವಾಯಿಗಳೇ ಆಳಬೇಕೆಂದು ನಿಯಮವಿಲ್ಲ. ಅದರ ಆಸ್ತಿಪಾಸ್ತಿಗಳು ಏನೇನೊ ಆಗಿ ಕೈಜಾರಿ ಬೀಳುತ್ತಿವೆ. ಹಾಗೆಯೇ ಆಡಳಿತ ಸೂತ್ರವೂ ಕಡಿದುಹೋಗುವುದರಲ್ಲಿ ಸಂಶಯವಿಲ್ಲ. ರಾಜಕೀಯದಲ್ಲಿ ಪ್ರಭಾವ ಬೀರುವ ಜನ ನಾಡನ್ನು ಆಕ್ರಮಿಸಬಲ್ಲರು. ಈಗ ಸಂದಿಗ್ಧ ಪರಿಸ್ಥಿತಿ ; ಎಷ್ಟೋ ಬದಲಾ ವಣೆಗಳೂ ಕ್ರಾಂತಿಗಳೂ ನಡೆಯಬಹುದು. ಎಂಥ ಸ್ವರೂಪವನ್ನು ತಾಳ ಬಹುದೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇಷ್ಟು ಮಾತ್ರ ಹೇಳ ಬಹುದು : ಕಡೆಗೆ ನಾಡು ಮತ್ತು ಅದರ ಅಧಿಕಾರ ಬಿಳಿಯ ಜನಕ್ಕೆ ಸೇರ ತಕ್ಕದ್ದು. ಆ ದಿವಸ ನೀನು ತಾನೆ ಹವಾಯಿಯ ಮೊದಲ ಹೆಂಗಸು ?? ಏಕೆಂದರೆ ಜಾರ್ಜ್ ಆಗ ಹವಾಯಿಯ ಆಡಳಿತವನ್ನು ನಡೆಸುವ ಪ್ರಥಮ ಪ್ರಜೆ ಯಾಗಿರುತ್ತಾನೆ! ಈ ಭವಿಷ್ಯ ಸುಳ್ಳಾಗುವುದಿಲ್ಲ; ಪುಸ್ತಕದಲ್ಲಿ ಬರೆದಿಡ ಬಹುದು. ಸಾಮಾನ್ಯ ಜನಾಂಗದೊಡನೆ ತಿಕ್ಕಾಟಮಾಡುವ ಬಿಳಿಯರು ಏನಾಗಬಲ್ಲರು ಎಂಬ ಅಂಶ ಚರಿತ್ರೆಯಿಂದಲೇ ಸ್ಪಷ್ಟವಿದೆ. ಈ ವಿಷಯದಲ್ಲಿ