ಪುಟ:ಬಾಳ ನಿಯಮ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ನಾನು ಅಧಿಕಾರಿಯುತವಾಗಿ ಮಾತನಾಡಬಲ್ಲೆ ; ಏಕೆಂದರೆ ನನ್ನಲ್ಲಿ ಹವಾಯಿ ಮತ್ತು ಬಿಳಿಯ ರಕ್ತ ಎರಡೂ ಒಂದೇ ಪ್ರಮಾಣದಲ್ಲಿ ಸೇರಿವೆ. ಬೆಲ್ಲ, ಎಷ್ಟಾ ದರೂ ನಾನು ನಿನ್ನ ಮಾವ ರಾಬರ್ಟ್, ಸಮಾಧಾನವಿರಲಿ, ಬೆಲ್ಲ, ಸಮಾಧಾನ ವಿರಲಿ.' “ “ಪ್ರಿಯ ಬೆಲ್ಲ' ಎಂದು ಜಾನ್ ಮಾವ ನನ್ನನ್ನು ಕರೆಯುತ್ತಿದ್ದ. ನನ್ನ ಬಗ್ಗೆ ಅವನ ಹೃದಯದಲ್ಲಿ ಕನಿಕರವಿತ್ತು. ಅದೃಷ್ಟವಶಾತ್, ಅವನು ಮಾತ್ರ ಎಂದಿಗೂ ನನ್ನನ್ನು ಸಮಾಧಾನವಾಗಿರು ಎಂದು ಹೇಳಿದವನೇ ಅಲ್ಲ. ಅತಿ ಬುದ್ದಿವಂತನಾದ ಅವನಿಗೆ ಗೊತ್ತಿತ್ತು. ಅವನು ರಾಬರ್ಟ್ ಮಾವ, ಜಾರ್ಜ್ ಕ್ಯಾನರ್ ಇಬ್ಬರಿಗಿಂತಲೂ ಬುದ್ದಿವಂತ ! ಏಕೆಂದರೆ ಅವನಿಗೆ ಮನಸ್ಸಿನ ಬಿಸಿ' ತಿಳಿದಿತ್ತು, ಎಷ್ಟಾದರೂ ಮನುಷ್ಯನಲ್ಲವೇ ? ರಾಬರ್ಟ್ ಮತ್ತು ಜಾರ್ಜ್ರಂತೆ ಹೃದಯಾಂತರಾಳದ ಭಾವಗಳನ್ನು ಬದಿಗೊತ್ತಿ ಹಣಕ್ಕಾಗಿ ಹೊಡೆದಾಡುವವನಲ್ಲ ; ಎದೆ ಹಾರುವಂತೆ ತೀಡುತಿದ್ದ ಹೃದಯದ ಬಡಿತವನ್ನು ಲೆಕ್ಕ ಹಾಕುವುದು ಬಿಟ್ಟು ಒಣ ಲೆಡ್ಡರುಗಳನ್ನು ಬರೆಯುತ್ತಿರಲಿಲ್ಲ ; ಆಲಿಂಗನ, ಕಣ್ಣಿನ ಮೋಹ, ಮಾತಿನ ಮಾಧುರ, ಸ್ಪರ್ಶದ ದಿವ್ಯಾನುಭವ-ಇವು ಗಳನ್ನೊಳಗೊಂಡ ಮುದ್ದಾಟಗಳನ್ನು ನೆನಸಿಕೊಳ್ಳುವುದು ಬಿಟ್ಟು ಬರಿಯ ಅಂಕಿಗಳನ್ನು ಕೂಡಿ ಕೂಡಿ ಸಾಕಾಗುತ್ತಿರಲಿಲ್ಲ.... “ “ಪ್ರಿಯ ಬೆಲ್ಲ,' ಎಂದು ಜಾನ್ ಮಾವ ಕರೆಯುತ್ತಲೇ ಇದ್ದ. ಪಾಪ ; ಅವನು ನಿಮಿ ರಾಜಕುಮಾರಿಯನ್ನು ಎಷ್ಟರಮಟ್ಟಿಗೆ ಪ್ರೀತಿಸು ತಿದ್ದ ಎಂಬುದನ್ನು ನೀನು ಕೇಳಿರಬೇಕು. ಅವನು ನಿಜವಾದ ಪ್ರೇಮಿ. ಇಡೀ ಜೀವಮಾನದಲ್ಲಿ ಅವನು ಪ್ರೇಮಿಸಿರುವುದು ಒಂದು ಸಾರಿ ಮಾತ್ರ, ಅವಳು ಸತ್ತ ಮೇಲೆ ಜನ ಅವನನ್ನು ವಿಚಿತ್ರವಾಗಿ ಕಂಡರು. ನಿಜ ; ಅವನು ಹುಚ್ಚನಂತಿದ್ದನು. ಕಾರಣ, ಪ್ರೇಮಿಸಿದ್ದು ಒಬ್ಬಳನ್ನೇ, ಇರಲಿ ಇಲ್ಲದಿರಲಿ ಯಾವಾಗಲೂ ಒಬ್ಬಳನ್ನೇ, ಅವನು ಸತ್ತಾಗಲೇ ನಾವು ಕಿಲೋಹನದ ಕೊಠಡಿ ಯನ್ನು ಪ್ರವೇಶಿಸಿದ್ದು ; ತನ್ನ ಪ್ರೇಯಸಿಯನ್ನು ಪವಿತ್ರ ಭಾವದಿಂದ ಪೂಜಿಸು ತಿದ್ದ ಬಗೆ ಆಶ್ಚರ್ಯಕರವಾಗಿತ್ತು, ಅವಳಿಗಾಗಿ ಅವನು ಮಾಡಿಟ್ಟ ಸ್ಮಾರಕ ನಿನಗೆ ಜ್ಞಾಪಕವಿರಬೇಕು. “ಪ್ರಿಯ ಬೆಲ್ಲ' ಎಂದು ಮಾತ್ರ ನನ್ನನ್ನು ಕರೆ ಯುತಿದ್ದನು. ಆ ಎರಡು ಪದಗಳಲ್ಲಿ ಅವನ ಅವ್ಯಕ್ತ ನೋವು ಹೊರಬರು ತಿದ್ದುದು ನನಗೊಬ್ಬಳಿಗೆ ಗೊತ್ತಿತ್ತು. “ಸರಿ ; ಆಗ ಹತ್ತೊಂಬತ್ತು ವರ್ಷ. ಮುಕ್ಕಾಲು ಭಾಗದಷ್ಟು ಬಿಳಿಯರ