ಪುಟ:ಬಾಳ ನಿಯಮ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೦ ಬಾಳ ನಿಯಮ ರಕ್ತ ಓಡಾಡುತ್ತಿದ್ದರೂ, ಹವಾಯಿಯ ಅಂಶ ಮಾತ್ರ ಬಿಸಿಯಾಗಿತ್ತು. ನನಗೆ ಏನು ತಾನೆ ಗೊತ್ತಿತು ? ಕಿಲೋಹನದಲ್ಲಿ ಬಾಲ್ಯದ ವೈಭವ ; ಇಲ್ಲವೇ (ರಾಯಲ್ ಚೀಫ್ ಸ್ಕೂಲ್ ನಲ್ಲಿ ಓದಿದ ಹೊನಲೂಲು ವಿದ್ಯಾಭ್ಯಾಸ ; ಅಷ್ಟೇ ಹಿಂದಿನ ನೆನಪು. ಮತ್ತೆ ಎದುರಿಗೆ ಕಾಣುತಿದ್ದವರು ನನ್ನ ಗಂಡ ಮತ್ತು ಮಕ್ಕಳಿಲ್ಲದ ಇಬ್ಬರು ಮಾವಂದಿರು, ಅನುದ್ವೇಗದಿಂದ ಮಿತಜೀವನ ನಡೆಸುತ್ತಿದ್ದ ನನ್ನ ಗಂಡ ಸುಮ್ಮನಿರದೆ ಬೋಧನೆ ಮಾಡುತಿದ್ದನು. ಅದು ಎಷ್ಟು ಉತ್ಸಾಹಭಂಗವಾಗಿತ್ತು! ಮಾವಂದಿರಲ್ಲಿ ಒಬ್ಬನದಂತೂ ಪ್ರೀತಿಶೂನ್ಯ ದೃಷ್ಟಿ ; ಮತ್ತೊಬ್ಬನ ಹೃದಯ ಒಡೆದಿತ್ತು ! ಸತ್ತಹೋದ ರಾಜಕುಮಾರಿಯ ಕನಸನ್ನೇ ಯಾವಾಗಲೂ ಕಾಣುತಿದ್ದನು. ಆ ಮನೆಯ ಬಗ್ಗೆ ಯೋಚಿಸುವುದಕ್ಕೂ ಭಯವಾಗುತ್ತದೆ ! ಸದಾ ನಗುತ್ತಾ ಆರಾಮು ಜೀವನ ನಡೆಸಿದವಳಿಗೆ ಎಂಥ ಗತಿ ? ಕಿಲೋಹನ ಪಾರ್ಕರ್ ಅಥವಾ ಪೂವಾದಲ್ಲಿದ್ದ ಮನೆಗಳಿಗೆ, ನಹಾಲದ ಮಂಕು ಮನೆಗೂ ಎಲ್ಲಿಯ ಸಂಬಂಧ ? ಅಗಿನ ಕಾಲದಲ್ಲಿ ನಾವು ವಾಸಿಸುತ್ತಿದ್ದ ಜಹ ಗೀರು ಎಷ್ಟು ವಿಶಾಲವಾಗಿತ್ತೆಂದು ನಿನಗೆ ನೆನಪಿರಬೇಕು...ನನ್ನಲ್ಲಿದ್ದ ಒಂದೇ ಒಂದು ಹೊಲಿಗೆ ಯಂತ್ರದ ಅವಸ್ಥೆಯನ್ನು ನೋಡಿದ್ದರೆ ನೀನು ಏನನ್ನು ತಿದೆ ಯೋ ? ಅದನ್ನು ಓಬೀರಾಯನ ಕಾಲದ ಪಾದ್ರಿಗಳು ತಂದಿರಬೇಕು. ಅದು ಎಷ್ಟು ಸಣ್ಣಗೆ ಹಗುರವಾಗಿ ಇತ್ತೆಂದರೆ ಮುಟ್ಟಿದರೆ ಅಲ್ಲಾಡುತಿತ್ತು ! “ರಾಬರ್ಟ್ ಮತ್ತು ಜಾನ್ ಇಬ್ಬರೂ ಪ್ರತ್ಯೇಕವಾಗಿ ನನ್ನ ಗಂಡನಿಗೆ ಮದುವೆಯ ಸಮಯದಲ್ಲಿ ಐದು ಸಾವಿರ ಡಾಲರುಗಳನ್ನು ಕೊಟ್ಟಿದ್ದರು. ಅದು ಗುಟ್ಟಾಗಿಯೇ ಇರಬೇಕೆಂದು ಅವನು ಕೇಳಿಕೊಂಡಿದ್ದನು. “ನಮ್ಮ ನಾಲ್ವರಿಗೆ ಮಾತ್ರ ಗೊತ್ತಿತ್ತು. ಹೆಚ್ಚು ಖರ್ಚಾಗದಂತೆ 'ಹೊಲಕು' ಬಟ್ಟೆ ಗಳನ್ನೇ ಆ ಕಚಡ ಯಂತ್ರದಲ್ಲಿ ನಾನು ಹೊಲಿಯಬೇಕಾಗಿತ್ತು; ಆದರೆ ಅವನು ಮಾತ್ರ ದುಡ್ಡು ತೆಗೆದುಕೊಂಡು ಹೊರಟಿದ್ದನು. ಅವನೇನೂ ಶೋಕಿ ಮಾಡಲಿಲ್ಲ, ಆ ದುಡ್ಡಿನಲ್ಲಿ ಭೂಮಿಯನ್ನು-ನಹಾಲದ ಮೇಲ್ಬಾಗ ನಿನಗೆ ಗೊತ್ತುಂಟು-ಸ್ವಲ್ಪ ಸ್ವಲ್ಪವಾಗಿ ಕೊಳ್ಳುತ್ತಾ ಬಂದನು. ಪ್ರತಿನಾರಿಯೂ ಕಷ್ಟ ಬಿದ್ದು ಚೌಕಾಶಿಮಾಡುತಿದ್ದನು. ಅವನ ಮುಖವಂತೂ ದಾರಿದ್ರದ ಪ್ರತಿಬಿಂಬವಾಗಿತ್ತು. ಇವತ್ತು ನಹಾಲದ ನೀರುಹಳ್ಳವೊಂದರಿಂದಲೇ ನನಗೆ ವರ್ಷಕ್ಕೆ ನಲವತ್ತು ಸಾವಿರ ಬರುತ್ತಿದೆ ! ಆದರೆ ಆಗ ಏನು ಬೆಲೆಯಿತ್ತು ? ನಾನಂತೂ ಉಪವಾಸ ಮಾಡಿ