ಪುಟ:ಬಾಳ ನಿಯಮ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೮೧ ದೇನೆ....ಹುಚ್ಚನಂತಾದರೂ ಒಂದು ಸಾರಿ ಅವನು ತನ್ನ ತೋಳುಗಳ ಮಧ್ಯ ದಲ್ಲಿ ನನ್ನನ್ನು ಸೇರಿಸಿಕೊಂಡು ಅಪ್ಪಳಿಸಿದ್ದರೆ! ಒಂದು ಸಮಯದಲ್ಲಾದರೂ ವ್ಯಾಪಾರದ ಭರಾಟೆಯನ್ನು ಬಿಟ್ಟು, ಅಥವಾ, ತನ್ನ ಸಾಹುಕಾರರಲ್ಲಿ ನೆಟ್ಟಿದ್ದ ನಿಷ್ಠೆ ಯನ್ನು ಸಡಿಲಿಸಿ, ಐದು ನಿಮಿಷಗಳ ಮಟ್ಟಿಗೆ ನನ್ನೊಡನೆ ಕಾಲಕಳೆ ದಿದ್ದರೆ!ಎಲ್ಲವೂ ಕನಸಾಗಿತ್ತು. ಕೆಲವು ವೇಳೆ ಅರಚಿಬಿಡುವಷ್ಟು ಯಾತನೆ ಯಾಗುತಿತ್ತು. ಬಿಸಿ ಬಿಸಿ ಅಂಬಲಿಯನ್ನು ಅವನ ಮುಖಕ್ಕೆ ಎರಚಿಬಿಡಲೇ ಎಂದು ಎಷ್ಟೋ ಬಾರಿ ಯೋಚಿಸಿದ್ದೆ, ಹೊಲಿಗೆಯ ಯಂತ್ರವನ್ನು ನೆಲಕ್ಕೆ ಜಾಡಿಸಿ ಪುಡಿಪುಡಿಮಾಡಿ, ಅದರ ಮೇಲೆಯೇ ಕುಣಿಕುಣಿದಾಡುವಷ್ಟು ರೋಷ ವೇರಿತ್ತು. ಹೇಗಾದರೂ ಮಾಡಿ ಅವನು ನನ್ನ ಮೇಲೆ ಬೀಳುವಂತೆ ಮಾಡ ಬೇಕು ! ಕೋಪಗೊಂಡರೂ ಚಿಂತೆಯಿಲ್ಲ ; ಮನುಷ್ಯನಾದರೆ ಸಾಕು! ಅದೂ ಬೇಡ ; ಪ್ರಾಣಿಯಂತಾದರೂ ನನ್ನ ಕಡೆ ನೋಡಲಿ! ಮಂಕು ಕವಿದಂತೆ ಜಡವಾಗಿ ಬಿದ್ದಿರುವ ಈ ಅರ್ಧಂಬರ್ಧ ದೇವಾಂಶನಲ್ಲಿ ಏನನ್ನಾದರೂ ತುಂಬ ಬೇಕು !.... ಹೀಗೆ ಓಡಿತ್ತು ನನ್ನ ಮನಸ್ಸು.....” ಹಿಂದಿನ ನೆನಪುಗಳನ್ನು ಮೆಲಕುಹಾಕುವುದರಲ್ಲಿ ಅವಳಿಗೆ ಸಂತೋಷ ವಾಗಿರಬೇಕು. ತಕ್ಷಣ ನಕ್ಕಳು. ಜೋಲುಮುಖಿಯಾಗಿದ್ದವಳು ಹಸನ್ಮುಖಿ ಯಾದಳು. - “ನನ್ನ ಮನಸ್ಸು ಆ ರೀತಿ ಓಡುತಿದ್ದಾಗ, ಅವನು ನನ್ನನ್ನೇ ದಿಟ್ಟಿಸಿ ನೋಡುತಿದ್ದ. ಆತುರದಿಂದ ನಾಡಿ ಹಿಡಿದು ಪರೀಕ್ಷಿಸುತ್ತಿದ್ದ. ನಾಲಿಗೆ ಯನ್ನು ಚಾಚಿಸುತ್ತಿದ್ದ. ತೀವ್ರವಾಗಿ ಆಲೋಚಿಸುತ್ತಾ ಇದ್ದರೂ, ಎಣ್ಣೆಯ ಔಷಧಿಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದನು. ಸ್ಟವ್ ಹತ್ತಿರವಿಟ್ಟು ಮೈ ಬೆಚ್ಚಗೆ ಮಾಡಿಕೊಳ್ಳುವಂತೆ ಹೇಳಿ, ಮಲಗಿಸಿಬಿಡುತ್ತಿದ್ದನು. ಬೆಳಗಾಗು ವುದರೊಳಗೆ ಸರಿಹೋಗುವೆಯೆಂಬ ಆಶ್ವಾಸನೆಯನ್ನು ಬೇರೆ ನೀಡುತಿದ್ದ. ಆದಷ್ಟು ಬೇಗ ಮಲಗಬೇಕು ! ಎಂಟು ಘಂಟೆ ಆಯಿತೆಂದರೆ ತೀರಿತು ; ಸೀಮೆ. ಯೆಣ್ಣೆ ಉಳಿಸಬೇಕಲ್ಲ! ಒಂದು ದಿನವಾದರೂ ನಹಾಲದ ದೊಡ್ಡ ಮೇಜದ ಮೇಲೆ ಎಷ್ಟು ಸಾರಿ ಸಂತರ್ಪಣೆ ನಡೆದಿಲ್ಲ ? ಅವೆಲ್ಲವೂ ಜ್ಞಾಪಕಕ್ಕೆ ಬರುತಿತ್ತು ನಾನು ಜಾರ್ಜ್ನನ್ನು ಕಾಣುತಿದ್ದುದು ರಾತ್ರಿ ಊಟದ ಹೊತ್ತಿಗೆ ಊಟ ವಾದ ಮೇಲೆ ದೀಪದ ಹತ್ತಿರ ಕುಳಿತು, ಸಾಲತಂದಿದ್ದ ಹಳೆಯ ಪತ್ರಿಕೆ ಗಳನ್ನು ಅವನು ಓದುತಿದ್ದನು. ಸುಮಾರು ಒಂದು ಘಂಟೆಯ ಕಾಲ ಏನು ಓದುತ್ತಿದ್ದನೋ ದೇವರಿಗೇ ಗೊತ್ತು: ಆ ಸಮಯದಲ್ಲೇ ನಾನು ದೀಪದ ಹಿಂದೆ