ಪುಟ:ಬಾಳ ನಿಯಮ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೨ ಬಾಳ ನಿಯಮ ಕುಳಿತು, ಅವನ ಕಾಲುಚೀಲ ಮತ್ತು ಇತರ ಒಳಉಡುಪುಗಳನ್ನು ರಫ್ ಮಾಡುತಿದ್ದೆ. ಹಿಂಜುಹೋಗುವ ಕಡಿಮೆ ಬೆಲೆಯ ಬಟ್ಟೆಗಳನ್ನೇ ಅವನು ಧರಿಸುತಿದನು. ಅವನು ಮಲಗಿದನೆಂದರೆ ನಾನು ಹಾಸಿಗೆ ಹಿಡಿಯುತಿದ್ದೆ ; ಏಕೆಂದರೆ ದೀಪ ಆರಿಸಿಬಿಡುತ್ತಿದ್ದನು. ಪ್ರತಿದಿನವೂ ಮಲಗುವ ಮುಂಚೆ ಅವನ ಅಭ್ಯಾಸ ಒಂದೇ ರೀತಿಯಾಗಿತ್ತು : ಗಡಿಯಾರಕ್ಕೆ ಕೀಲುಕೊಡುವುದು, ದಿನದ ಹವಾಮಾನವನ್ನು ಡೈರಿಯಲ್ಲಿ ಬರೆದು ಕೊಳ್ಳುವುದು ಮತ್ತು ಬಲ ಗಾಲಿನ ಹೂ ತೆಗೆಯುವುದು, ಆಮೇಲೆ ಎಡಗಾಲಿನ ಹೂ ; ಎರಡನ್ನೂ ಪಕ್ಕ ಪಕ್ಕದಲ್ಲಿ ಹಾಸಿಗೆಯ ತುದಿಯಲ್ಲೇ ಇಟ್ಟುಕೊಳ್ಳುವುದು,

  • * ಅವನಂಥ ಶುದ್ಧ ಮನುಷ್ಯನನ್ನು ನೋಡಿಲ್ಲ. ಒಂದೇ ಒಳಉಡು ಪನ್ನು ಎರಡು ಬಾರಿ ಎಂದಿಗೂ ಧರಿಸಿದವನಲ್ಲ. ನಾನೇ ಒಗೆಯುತಿದ್ದೆ. ಅವನ ಅತಿ ಚೊಕ್ಕಟತನ ನನಗೆ ಹಿಡಿಸುತ್ತಿರಲಿಲ್ಲ. ದಿನಕ್ಕೆ ಎರಡಾವರ್ತಿ ಮುಖಕ್ಷೌರಮಾಡಿಕೊಳ್ಳುತಿದ್ದ. ಕನಕ ಜನಾಂಗದವರನ್ನೂ ಮೀರಿಸುವಂತೆ ಮೈಮೇಲೆ ನೀರು ಸುರಿದುಕೊಳ್ಳುತಿದ್ದ. ಇಬ್ಬರ ಕೆಲಸ ಒಬ್ಬನೇ ಮಾಡು ತಿದ್ದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಹಾಲ ನೀರಿನ ಭವಿಷ್ಯತ್ತನ್ನು ಕಾಣು ತಿದ್ದ....”
  • “ ಅಂದರೆ ನನಗೆ ತೋರುವಂತೆ, ಅವನು ನಿನ್ನನ್ನು ಐಶ್ವರ್ಯವಂತ ಳನ್ನಾಗಿ ಮಾಡಿದ; ಆದರೆ ಸಂತೋಷಭರಿತಳನ್ನಾಗಿ ಮಾಡಲಿಲ್ಲ....” ಎಂದು ಮಾರ್ಥ ಸೂಚಿಸಿದಳು.

ಬೆಲ್ಲ ನಿಟ್ಟುಸಿರುಬಿಟ್ಟು ತಲೆದೂಗಿದಳು.

  • ಸೋದರಿ ಮಾರ್ಥ, ಬರಿಯ ಐಶ್ವರ್ಯವಿದ್ದರೆ ಏನು ಪ್ರಯೋಜನ ? ಎಷ್ಟಿದ್ದರೂ ಅದು ಒಬ್ಬ ಪ್ರೇಮಿಗೆ ಸಮವಾಗದು....ನಿಜ; ಪ್ರೇಮಿಯೆಂದರೆ ಒಬ್ಬನೇ ; ಅವನೇ ಮದುವೆಯಾಗುವವನು; ಸುಖದುಃಖಗಳಲ್ಲಿ ಒಂದಾಗು ವವನು; ಅಂಥ ಪ್ರಣಯಿ, ಅಂಥ ಗಂಡ ಸಿಕ್ಕ ಬೇಕಾದರೆ?

ಅವಳ ಉದ್ದಾರ ನಿಂತಿತು. ಇಬ್ಬರು ಸೋದರಿಯರೂ ಕನಸಿನಲ್ಲಿದ್ದಂತೆ ಮೌನತಾಳಿದರು. ಆಗ ಒಬ್ಬ ಹಣ್ಣು ಹಣ್ಣು ಮುದುಕಿ ಉದ್ಯಾನದ ಆಕಡೆ ಯಿಂದ 'ಕುಂಟುತ್ತಾ ಬಂದಳು. ಕೈಯಲ್ಲಿ ಊರುಗೋಲು ಹಿಡಿದಿದ್ದಳು. ನೂರುವರ್ಷ ಬಾಳಿದವಳು; ಅದರ ಹೊರೆಯಿಂದಲೇ ಬಗ್ಗಿ ಹೋಗಿದ್ದಳು. ಕಣ್ಣುಗಳಂತೂ ಕಳೆಗುಂದಿ ಇಣಿಕುಗಂಡಿಗಳಂತೆ ತೋರುತ್ತಿದ್ದುವು. ಆದರೂ ಮುಂಗುಸಿಯ ನೋಟದಂತೆ ತೀಕ್ಷವಾಗಿತ್ತು. ಅವಳು ಬಂದವಳೇ ಬೆಲ್ಲನ