ಪುಟ:ಬಾಳ ನಿಯಮ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೮೩ ಪಾದದ ಹತ್ತಿರ ಕುಸಿದಳು. ಚೊಕ್ಕು ಬಾಯಿಂದ ಹವಾಯಿ ಗೀತವನ್ನು ಒದರುತಿದ್ದಳು. ಬೆಲ್ಲ ಮತ್ತು ಅವಳ ವಂಶಾವಳಿಯನ್ನು ಹಾಡುತ್ತಾ ಥಟ್ಟನೆ ಸ್ಫೂರ್ತಿಯಿಂದ ಸ್ವಾಗತ ಬಯಸಿದಳು; ದೊಡ್ಡ ಸಮುದ್ರವನ್ನು ದಾಟಿ ಕ್ಯಾಲಿ ಫೋರ್ನಿಯಕ್ಕೆ ಹೋದವಳು ಮತ್ತೆ ಹವಾಯಿಗೆ ಬಂದಳಲ್ಲಾ ಎಂದು ಕುಣಿ ದಾಡಿದಳು, ರೇಷ್ಮೆಯ ಕಾಲುಮುಚ್ಚಿಗೆಯನ್ನು ಸವರಿದಳು. ತನ್ನ ಸೂಕ್ಷ, ಬೆರಳುಗಳಿಂದ ಬೆಲ್ಲಳ ಪಾದದ ಮುಂಭಾಗ, ಹಿಂಭಾಗ, ಮೊಣಕಾಲು, ತೊಡೆ ಎಲ್ಲವನ್ನೂ ನೀವಿದಳು. ಆ ಮುದುಕಿಯು ಬಹುಕಾಲದಿಂದ ಮಾರ್ಥಳ ವಂಶಸ್ಥರಲ್ಲಿ ಆಶ್ರಿತೆ ಯಾಗಿ ಕೆಲಸಮಾಡಿದವಳು. ಅವಳ ಹಾಡನ್ನು ಕೇಳಿದೊಡನೆ ಬೆಲ್ಲ ಮಾರ್ಥ ಇಬ್ಬರೂ ಆನಂದಭಾಷ್ಪವನ್ನು ಸುರಿಸಿದರು. ಹಳೇ ಕಾಲದ ಶೈಲಿಯಲ್ಲೇ ಮಾತನಾಡಿಸಿದರು. ಎಷ್ಟೋ ಪುರಾತನ ಪ್ರಶ್ನೆಗಳನ್ನು ಕೇಳಿದರು. ಅವಳ ವಯಸ್ಸು, ಆರೋಗ್ಯ, ಮೊಮ್ಮಕ್ಕಳು, ಮರಿಮಕ್ಕಳ ಸಮಾಚಾರ-ಎಲ್ಲವನ್ನೂ ವಿಚಾರಿಸಿದ್ದಾಯಿತು. ತಾವು ಮಗುವಾಗಿದ್ದಾಗಿನಿಂದ ಆ ಮುದುಕಿಯು ತಮ್ಮನ್ನು ಕಿಲೊಹನದ ಭವ್ಯ ಭವನದಲ್ಲಿ ಎತ್ತಿ ಆಡಿಸಿದ್ದು ಜ್ಞಾಪಕಕ್ಕೆ ಬಂತು. ಮುದುಕಿಯ ವಂಶಸ್ಥರೆಲ್ಲರೂ ಎಷ್ಟೋ ಕಾಲದಿಂದ ತಮ್ಮ ಮನೆತನದವರ ಸೇವೆಗಾಗಿಯೆ ಹುಟ್ಟಿದಂತಿದ್ದರು. ಮಾರ್ಥ ಮೇಲೆದ್ದು ಮುದುಕಿಯನ್ನು ಬಂಗಲೆಯ ತನಕ ಹಿಂಬಾಲಿಸಿ ದಳು. ಅವಳ ಕೈಗೆ ಥಳಥಳ ನಾಣ್ಯವನ್ನು ಹಾಕಿದಳು. ಜಂಭದಿಂದ ಸೌಂದರ್ಯ ಬೀರುತ್ತಾ ನಲಿದಾಡುತ್ತಿದ್ದ ಹೆಣ್ಣಾಳುಗಳನ್ನು ಕರೆದು, ಅತಿ ವೃದ್ದೆಯಾದ ಮೂಲನಿವಾಸಿಗೆ 'ಪಾಟ್' ಆಹಾರವನ್ನು ಸಿದ್ಧಪಡಿಸಲು ಆಜ್ಞೆ ಮಾಡಿದಳು. 'ಸಾಯ್' ತಯಾರಿಸುವುದು ಸುಲಭದ ಕೆಲಸವಲ್ಲ. ನೀರಿನಲ್ಲಿ ಬೆಳೆಯುವ ನೈದಿಲೆಯ ಗೆಡ್ಡೆಗಳನ್ನು ಆರಿಸಬೇಕು; ಸಮುದ್ರದಿಂದ ಆಗತಾನೆ ತೇಲಿಬರುವ “ಅಯನಾಕ' ಮಾನನ್ನು ಹಿಡಿಯಬೇಕು; 'ಕುಕುಯಿ,' “ಲಿಮು' ಮುಂತಾದ ಪುದೀನ ಜಾತಿಯ ಸಮುದ್ರದ ಜೊಂಡುಗಳನ್ನು ಚೆನ್ನಾಗಿ ಕುಟ್ಟಿ ಹಲ್ಲಿಲ್ಲದವ ರಿಗೂ ಸರಾಗವಾಗಿ ಜೀರ್ಣಿಸುವಂತೆ ಮಾಡಬೇಕು. ಈ ಮೂರುಭಾಗಗಳನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿದರೆ 'ಸಾಯ್' ತಯಾರಾಗುತ್ತದೆ. ಅದನ್ನು ಸಾಮಾನ್ಯರಿಗೆ ಹಂಚುವುದು ನಾಯಕರ ಜವಾಬ್ದಾರಿ; ಅದರಲ್ಲಿ ಸಾಮಾನ್ಯರು ನಾಯಕರಲ್ಲಿ ಡುವ ನಿಷ್ಠಾ ಭಕ್ತಿಯ ಪ್ರತಿಬಿಂಬಿತವಾಗಿವೆ. ಮಾರ್ಥಳಲ್ಲಿ ಮುಕ್ಕಾಲುಭಾಗದಷ್ಟು ನ್ಯೂ ಇಂಗ್ಲೆಂಡಿನ ಆಂಗ್ಲೋ