ಪುಟ:ಬಾಳ ನಿಯಮ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಸ್ಯಾಕ್ಷನ್ ರಕ್ತವಿದ್ದರೂ, ಅವಳು ಹಳೆಯ ಕಾಲದ ಪದ್ಧತಿಗಳನ್ನೇ ಅನುಸರಿಸುವ ಅಚ್ಚಾ ಹವಾಯಿಯವಳೇ ಆಗಿದ್ದಳು. ಅವಳು ಪುನಃ ಹೌ ಮರದ ಕಡೆ ಬರುತಿದ್ದಾಗ, ಬೆಲ್ಲ ಅವಳನ್ನೇ ನೋಡುತಿದ್ದಳು. ತನ್ನ ತಂಗಿಯ ವಿಶ್ವಾಸಾರ್ಹತೆಯನ್ನು ಕಂಡು ಮೆಚ್ಚಿದಳು; ಅವಳ ರಕ್ತಗತ ಸ್ವಭಾವದಲ್ಲೇ ಪ್ರೀತಿಯನ್ನು ಉಕ್ಕಿಸುವಂಥ ಚಮತ್ಕಾರವಿದೆ ಯೆಂದು ಭಾವಿಸಿದಳು. ಅತ್ಯಂತ ಪ್ರೀತಿಯಿಂದ ಅವಳನ್ನು ಮತ್ತೊಮ್ಮೆ ಆಲಿಂಗಿಸಿದಳು. ಬೆಲ್ಲಳಿಗಿಂತ ಮಾರ್ಥ ಕುಳ್ಳಾಗಿದ್ದರೂ, ರಾಣಿಯ ಠೀವಿ ಕಡಿಮೆಯಿದ್ದರೂ, ಅವಳ ರೀತಿಯೇ ಬೇರೆ. ಅವಳ ಅಂಗವಿನ್ಯಾಸ, ಸೌಂದರ್ಯ ವನ್ನು ಮತ್ತಷ್ಟು ಹೆಚ್ಚಿಸಿತ್ತು. ದೇಹಾದ್ಯಂತ ಧಾರಾಳತನ ಎದ್ದು ಕಾಣುತಿತ್ತು. ವಯಸ್ಸಾಗಿದ್ದರೂ ಅವಳು ಕುಗ್ಗಿರಲಿಲ್ಲ. ಆದರೆ ವಯಸ್ಸು ಬರುತ್ತಿದ್ದಂತೆ ಅವಳ ಶೀಲಸ್ವಭಾವಗಳು ಒಂದು ಹದಕ್ಕೆ ಸೇರಿದ್ದವು. ಪಾಲಿನೀಶಿಯನ್ ನಾಯಕಿಗೆ ಒಪ್ಪುವಂಥ ಉಡುಪನ್ನೇ ಧರಿಸಿದ್ದಳು. ನಡುವಿನಿಂದ ನೆರಿಗೆ ನೆರಿಗೆಯಾಗಿ ಇಳಿಬಿಟ್ಟ ಕಪ್ಪು ಜರಿ ಅಂಚಿನ ಸಿಲ್ಕ್ ಗೌನ್ ಭವ್ಯವಾಗಿತ್ತು. ಅದರ ಬೆಲೆಯಂತೂ ಪ್ಯಾರಿಸ್ ಗೌನಿಗಿಂತಲೂ ದುಬಾರಿ, ಸೋದರಿಯರು ಪುನಃ ಮಾತಿಗೆ ಪ್ರಾರಂಭಿಸಿದರು. ಪಾರ್ಶ್ವದಿಂದ ನೋಡುವವರಿಗೆ ಇಬ್ಬರೂ ಒಂದೇ ತರಹ, ರೇಖಾಚಿತ್ರದಲ್ಲಿ ಬರೆದವರಂತೆ ಕಾಣುತಿದ್ದರು. ಇಬ್ಬರ ಕೆನ್ನೆಯೆಲುಬೂ ತುಂಬಿಕೊಂಡಿತ್ತು; ಹಣೆ ಎತ್ತರ ವಾಗಿಯೂ ವಿಶಾಲವಾಗಿಯೂ ಇತ್ತು; ಕಬ್ಬಿಣದ ಬೂದುಬಣ್ಣದಂತೆ, ಸೊಂಪಾಗಿ ಹರಡಿದ್ದ ಕೂದಲು ಹೊಳೆಯುತಿತ್ತು; ಬಾಯಿ ತುಂಬ ಸವಿ; ಹುಬ್ಬಿನ ಸಾಲು ಸಣ್ಣಗೆ ಕಾಮನ ಬಿಲ್ಲಿನಂತೆ ಬಗ್ಗಿತ್ತು; ವಿಶಾಲ ಕಣ್ಣು ಪ್ರೇಮಮಯವಾಗಿತ್ತು. ಇಬ್ಬರ ಕೈಗಳೂ ವಯಸ್ಸಿನಿಂದ ಸ್ವಲ್ಪ ಮಟ್ಟಿಗೆ ಬದ ಲಾಯಿಸಿದ್ದರೂ, ಬೆರಳ ತುದಿ ಮಾತ್ರ ಹಿಂದಿನಂತೆಯೆ ಪ್ರೇಮರಸವನ್ನು ಹೊರಚಿಮ್ಮಿಸುವಂತಿತ್ತು. ಬೆಲ್ಲ ಪ್ರಾರಂಭಿಸಿದಳು: * ಒಂದು ವರ್ಷ ಹಾಗೆ ಕಳೆದೆ, ಆಮೇಲೆ ಏನಾಯಿತು ಗೊತ್ತೆ? ಎಲ್ಲವೂ ಒಂದೊಂದಾಗಿ ಸ್ಥಿಮಿತಕ್ಕೆ ಬಂದವು. ನನ್ನ ಮನಸ್ಸು ಜಾರ್ಜ್ನ ಹತ್ತಿರ ಹತ್ತಿರ ಸರಿಯುತಿತ್ತು. ಹೆಂಗಸರೇ ಹಾಗೆಂದು ಕಾಣುತ್ತೆ ; ವಿರಸವಿದ್ದರೂ ಸಮರಸಗೊಳ್ಳುವ ಸ್ವಭಾವ. ನಾನಂತೂ ಅಂಥವಳೇ ಆಗಿದ್ದೆ; ಏಕೆಂದರೆ ಅವನು ಒಳ್ಳೆಯವನಾಗಿದ್ದನು ! ನ್ಯಾಯಕ್ಕೆ ತಲೆಬಾಗುವವನು! ಹಳೇ ಕಾಲದ ಪ್ರಾಮಾಣಿಕ ಪ್ಯೂರಿಟನರ ಗುಣಗಳೆಲ್ಲವೂ