ಪುಟ:ಬಾಳ ನಿಯಮ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೮೩ ಅವನಲ್ಲಿ ತ್ತು. ಮನಸ್ಸು ಆ ಕಡೆ ಎಳೆದಂತೆ ವ್ಯಕ್ತಿಯಲ್ಲಿ ವಿಶ್ವಾಸ ಬೆಳೆಯಿತು. ಕಡೆಗೆ ಅವನನ್ನು ಪ್ರೇಮಿಸುವ ಮಟ್ಟ ಕ್ಕೂ ಹೋಗಿದ್ದೆ! ಆದರೆ ?....ಜಾನ್ ಮಾವ ನನಗೆ ಕುದುರೆಯನ್ನು ಸಾಲವಾಗಿ ಕೊಡದೆ ಇದ್ದಿದ್ದರೆ, ಖಂಡಿತ ವಾಗಿಯೂ ಜಾರ್ಜ್ನನ್ನು ಪ್ರೇಮಿಸಿ, ಸುಖವಾಗಿ ಶಾಂತವಾಗಿ ಜೀವಿಸು ತಿದ್ದೆ....

  • “ ಮನುಷ್ಯನು ವ್ಯಾಪಾರದಲ್ಲಿ ಮುಂದಿದ್ದ ನೊ ಹಿಂದಿದ್ದನೋ ಯಾವುದೂ ನನಗೆ ತಿಳಿಯುತ್ತಿರಲಿಲ್ಲ. ಊಟಮಾಡಿ ಮಲಗುವುದಕ್ಕಿಂತ ಮುಂಚೆ ಸ್ವಲ್ಪ ಹೊತ್ತು ಅವನಿಗೆ ಓದುವ ಅಭ್ಯಾಸವಿತ್ತು; ಆ ಸಮಯದಲ್ಲಿ ಅವನನ್ನು ನೋಡಲು ನನಗೆ ಸಂತೋಷವಾಗುತಿತ್ತು. ಅದಕ್ಕಾಗಿಯೇ ಕಾದು ಮೇಜಿನ ಎದುರು ಭಾಗದಲ್ಲಿ ಕುಳಿತುಕೊಳ್ಳುತಿದ್ದೆ. ಅಷ್ಟು ಹೊತ್ತಿಗೆ ಸರಿ ಯಾಗಿ ಬಹುದೂರದ ಪ್ರಯಾಣ ಮುಗಿಸಿಕೊಂಡು, ನೆಗೆಯುತ್ತಾ ಓಡಿಬರು ತಿದ್ದ ಕುದುರೆಯ ಸಪ್ಪಳ ಕೇಳಲು ನನಗೆ ಕರ್ಣಾನಂದ....ಹೆಚ್ಚು ಮಾತಿಲ್ಲದೆ ನನ್ನ ಕಾರ್ಯಗಳನ್ನು ಮೆಚ್ಚಿ ಹೊಗಳುತಿದ್ದನು. ಅದನ್ನು ಕೇಳಿದೊಡನೆಯೆ ನನ್ನ ಮುಖ ನಾಚಿಕೆಯಿಂದ ಕೆಂಪೇರುತಿತ್ತು; ಆನಂದದಿಂದ ಮೈ ಪುಲಕಿತ ವಾಗುತಿತ್ತು....

“ಯಾವ ಏರುಪೇರೂ ಇಲ್ಲದೆ ಹಾಗೆಯೇ ಮುಂದುವರಿದಿದ್ದರೆ, ನಮ್ಮಿಬ್ಬರ ಜೀವನ ಸುಖಮಯವಾಗುತಿತ್ತೊ ಏನೊ ! ಆದರೆ ಅವನು ಹೊನಲುವಿಗೆ ಹೋಗಬೇಕಾಯಿತು. ಹಡಗನ್ನು ಹತ್ತಲು ಸಿದ್ದನಾದನು. ವ್ಯಾಪಾರದ ನಿಮಿತ್ತ ಎರಡು ವಾರಗಳಿಗೂ ಜಾಸ್ತಿ ಹೋಗಲೇಬೇಕಿತ್ತು, ದನಗಾವಲಿನ ವಿಷಯದಲ್ಲಿ, ಗ್ಲೆನ್ಸ್ ಅವರ ಪರವಾಗಿ, ವ್ಯವಹಾರ ನಡೆಸಬೇಕಾಗಿತ್ತು, ಎರಡನೆಯದಾಗಿ ಸ್ವಂತ ಕೆಲಸ ಬೇರೆ ; ಅಂದರೆ ನಹಾಲದ ಮೇಲುಭೂಮಿ ಯನ್ನು ಮತ್ತಷ್ಟು ಕೊಂಡುಕೊಳ್ಳಲು ಏರ್ಪಾಟುಮಾಡುವುದು....ಅವನು ತೆಗೆದುಕೊಳ್ಳುತಿದ್ದ ಭೂಭಾಗಗಳನ್ನು ನೋಡಿ ನೋಡಿ ನನಗೆ ಆಶ್ಚರ್ಯವಾಗು ತಿತ್ತು ; ನಡೆಯಲೂ ಅಸಾಧ್ಯವಾದ ಕೆಲಸಕ್ಕೆ ಬಾರದ ನೆಲ ; ನೀರೊಂದನ್ನು ಬಿಟ್ಟರೆ ಮತ್ತೇನೂ ಇಲ್ಲ. ನೀರಿನಿಂದ ಸುತ್ತಲ್ಪಟ್ಟ ಮಧ್ಯಭೂಮಿಗಳನ್ನೂ ಕೊಂಡನು. ಆಗ ಅದರ ಬೆಲೆ ಎಷ್ಟು ಕಡಿಮೆ ! ಎಕರೆಗೆ ಐದೋ ಅಥವಾ ಹತ್ತು ಸೆಂಟುಗಳು....ಊರು ಬಿಡುವುದಕ್ಕಿಂತ ಮುಂಚೆ ನನ್ನನ್ನು ಕಿಲೋಹನ ದಲ್ಲಿ ಬಿಡಲು ನಿಶ್ಚಯಿಸಿದನು. ಅವನಿಗೆ ಅದರಲ್ಲಿ ಎರಡು ರೀತಿಯ ಲಾಭ ವಿತ್ತು ; ನನ್ನ ಹಳೆಯ ಮನೆಗೇ ಹೋಗುವುದರಲ್ಲಿ ಖರ್ಚಿಲ್ಲವಲ್ಲ ! ನಹಾಲ 13.