________________
೧೮೬ ಬಾಳಿ ನಿಯಮ ದಲ್ಲೇ ಇದ್ದಿದ್ದರೆ, ನಾನು ಓಣ ಆಹಾರ ತಿನ್ನುತಿದ್ದರೂ, ಸ್ವಲ್ಪಮಟ್ಟಿಗಾದರೂ ಹಣ ಕೊಡಬೇಕಿತ್ತು ; ಕಿಲೋಹನವಾದರೆ ತೊಂದರೆಯಿಲ್ಲ, ಅಷ್ಟನ್ನು ಮಿಗಿಸ ಬಹುದು ಅವನ ದೃಷ್ಟಿಯಲ್ಲಿ ! ಉಳಿದ ಹಣದಲ್ಲಿ ನಹಾಲದ ಒಂದೋ ಎರಡೋ ಎಕರೆಗಳನ್ನಾದರೂ ಕೊಳ್ಳಲು ಆಗಲೆ ಎಣಿಕೆಹಾಕಿದ್ದನು..... “ಕಿಲೋಹನದಲ್ಲಿ ನನ್ನನ್ನು ಬರಮಾಡಿಕೊಳ್ಳಲು ಜಾನ್ ಮಾವ ಸಂಪೂರ್ಣ ಒಪ್ಪಿಗೆಯಿತ್ತನು. ಕುದುರೆಯನ್ನೂ ಒದಗಿಸಿಕೊಟ್ಟನು; “ಅಲ್ಲಿದ್ದ ಕೆಲವೇ ದಿನಗಳಲ್ಲಿ ಸ್ವರ್ಗವನ್ನು ಕಂಡಂತೆ ಭಾಸವಾಯಿತು. ಪ್ರಪಂಚದ ಇತರ ಸ್ಥಳಗಳಲ್ಲಿ ಅಷ್ಟೊಂದು ಆಹಾರವಿದೆಯೆಂದು ನಂಬಲೂ ಕಷ್ಟ ವಾಯಿತು. ಅಡಿಗೆ ಮನೆಯಲ್ಲಿ ಕಸವಾಗಿ ಎಣಿಸುತ್ತಿದ್ದ ಬೇಕಾದಷ್ಟು ಪದಾರ್ಥಗಳನ್ನು ನೋಡಿ ನನಗೆ ಗಾಬರಿಯಾಯಿತು. ಎಲ್ಲೆಲ್ಲಿ ನೋಡಿದರೂ ವ್ಯರ್ಥ ಪದಾರ್ಥಗಳು ; ಜಾರ್ಜ್‌ನಿಂದ ತಯಾರಾದ ನನಗೆ ಎಲ್ಲವೂ ಹೊಸ ನೋಟವಾಗಿತ್ತು. ಅಷ್ಟೇಕೆ ? ಜವಾನರ ಮನೆಗಳಲ್ಲಿ ವಾಸಿಸುತಿದ್ದ ವೃದ್ದ ಸಂಬಂಧಿಕರೂ ಮತ್ತು ಜವಾನರನ್ನೇ ನಂಬಿಬಂದಿದ್ದ ಆಶ್ರಿತರೂ ಕೂಡ ಎಷ್ಟು ಜೋರಾಗಿ ತಿಂದು ತೇಗುತಿದ್ದರು ? ಅವರ ಹಾಗೆ ನಾನು, ಜಾರ್ಜ್ ಒಂದು ದಿನವೂ ಊಟಮಾಡಿರಲಿಲ್ಲ! ಕಿಲೋಹನದಲ್ಲಿ ನಡೆಯುತ್ತಿದ್ದ ಸಮಾರಾಧನೆ ನಿನಗೆ ನೆನಪಿರಬೇಕು ; ಪಾರ್ಕ‌್ರನಲ್ಲಿ ಇದ್ದ ಹಾಗೆಯೆ. ಪ್ರತಿಹೊತ್ತಿನ ಊಟಕ್ಕೂ ಒಂದೊಂದು ಹೊಸ ಮಾಂಸ ಬರುತ್ತಿತ್ತು. ವೈಸಿಯೊ ಮತ್ತು ಕೆಹೋಲೊ ಕೊಳಗಳಿಂದ ಆಗತಾನೆ ಮಿಾನುಗಳನ್ನು ಹಿಡಿದು ತರುತ್ತಿದ್ದರು. ಆಯಾಯ ಸಂದರ್ಭಕ್ಕೆ ತಕ್ಕಂಥ ಅತ್ಯುತ್ತಮವಾದ ಅಪರೂಪವಾದ ವಸ್ತು ಗಳೇ ಕಾಣಿಸುತ್ತಿದ್ದವು..... “ಇನ್ನು ನಮ್ಮ ವಂಶದ್ದೇ ಆದ ವಿಶಿಷ್ಟ ಪ್ರೀತಿಯಾಟಗಳನ್ನು ವರ್ಣಿಸ ಬೇಕಾದ್ದು ಅನವಶ್ಯಕ; ನಿನಗೆ ಗೊತ್ತೇ ಇದೆ. ಜಾನ್ ಮಾವನ ಏರ್ಪಾಟು ಕೇಳಬೇಕೆ ? ಸೋದರ ವಾಲ್ಕಾಟ್, ಎಡ್ವರ್ಡ್ ಮತ್ತು ನಿನ್ನನ್ನು ಬಿಟ್ಟು ಉಳಿದ ತಂಗಿಯರೂ ಅಲ್ಲಿದ್ದರು. ಸ್ಟಾಲಿ ಇರಲಿಲ್ಲ; ಅವಳಿಗೆ ಶಾಲೆಯಿತ್ತು. ಚಿಕ್ಕಮ್ಮಂದಿರಾದ ಎಲಿಸಬತ್, ಜ್ಯಾನೆಟ್ ಇಬ್ಬರೂ ತಮ್ಮ ತಮ್ಮ ಗಂಡಂದಿರು ಮಕ್ಕಳೊಡನೆ ಪ್ರವಾಸ ಹೊರಟಿದ್ದರು....ಎಲ್ಲೆಲ್ಲಿ ನೋಡಿದರೂ ತೋಳುಗಳ ಮಧ್ಯೆ ತೋಳುಗಳು ಸೇರಿಕೊಂಡಿದ್ದವು. ಮುತ್ತಿನ ಸುರಿಮಳೆಗೆ ಕೊನೆ ಮೊದಲಿಲ್ಲ. ನನ್ನ ಹನ್ನೆರಡು ತಿಂಗಳ ಬೇಸರ ಒಂದೇ ಕ್ಷಣದಲ್ಲಿ ಪರಿಹಾರ ವಾಯಿತು.