ಪುಟ:ಬಾಳ ನಿಯಮ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ “ಆಗಲೇ 'ಅವರು' ಬಂದದ್ದು. (ಕವೈಹ' ತನಕ ರಾಜವಂಶಕ್ಕೆ ಸೇರಿದ ಕ್ರೀಡಾ ನೌಕೆಯಲ್ಲಿ ಪ್ರಯಾಣಮಾಡಿದ್ದರು ; ಅಲ್ಲಿಂದ ಕುದುರೆ ಸವಾರಿ, ಸೊಗಸಾದ ಪಾರ್ಕರ್ ಕುದುರೆಗಳು. ಒಟ್ಟು ಮೂವತ್ತು ಸವಾರರು ಜತೆ ಜತೆಯಾಗಿ ಹೊರಟಿದ್ದರು. ಯೌವನದ ಮದವೇರಿ ಸಂತೋಷ ಭರಿತರಾಗಿದ್ದರು. ಹೂವಿನ ಹಾರಗಳನ್ನು ಹಾಕಿಕೊಂಡಿದ್ದರು. ಪಾರ್ಕರ್ ಕ್ಷೇತ್ರದ ನೂರು ಹುಡುಗರೂ ಮತ್ತು ಇತರ ಆಶ್ರಿತ ಜನರೂ ಹಿಂಬಾಲಿ ಸಿದ್ದರು. ಒಟ್ಟಿನಲ್ಲಿ ಹೇಳುವುದಾದರೆ, ಅದು ರಾಜಕುಮಾರಿ ಲಿಹೂಳ ಮೆರವಣಿಗೆ, “ವಿಹಾರ ಸ್ಥಳಗಳನ್ನೇ ಹುಡುಕಿಬರುತಿದ್ದ ಲಿಹೂಳ ಆರೋಗ್ಯ ಸರಿ ಯಾಗಿರಲಿಲ್ಲ; ಅವಳ ಮುಖ ಪ್ರಜ್ವಲಿಸುತ್ತಿದ್ದರೂ ಭೀಕರ ಕ್ಷಯ ರೋಗ ದಿಂದ ಪೀಡಿತಳಾಗಿದ್ದಳು. ಅದರ ಶಮನಾರ್ಥವಾಗಿಯೆ ಪ್ರವಾಸಹೊರಟಂತೆ ಕಂಡಿತು. ಅವಳ ಸೋದರ ಮಾವಂದಿರೂ ಜೊತೆಯಲ್ಲಿ ಬಂದಿದ್ದರು ; ಮೊದಲನೆಯವನೇ ಲಿಲೋಲಿಯೊ ರಾಜಕುಮರ. ಅವನೇ ಮುಂದೆ ರಾಜ ನಾಗುತ್ತಾನೆಂದು ಎಲ್ಲ ಕಡೆಯೂ ಸುದ್ದಿ ಹರಡಿತ್ತು. ರಾಜಕುಮಾರಿಯ ಜೊತೆ " ಎಲ್ಲಹಿಗಿನ್ಸ್ ವರ್ತ್' ಎಂಬಾಕೆಯೂ ಇದ್ದಳು ; ಆಳುತ್ತಿದ್ದ ರಾಜ ವಂಶಕ್ಕಿಂತಲೂ ತನ್ನ ಕಟ್ಟೆ ಮನೆತನವೇ ಉನ್ನತ ಮಟ್ಟದ್ದೆಂದು ಅವಳು ಸರಿ ಯಾದ ರೀತಿಯಲ್ಲೇ ಹಕ್ಕನ್ನು ಚಲಾಯಿಸುತಿದ್ದಳು. ಡೊರಾ ನೈಲ್ಸ್, ಎಮಿಲಿ ಲೌಕ್ರಾಫ್ಟ್ ಇತ್ಯಾದಿ ಎಷ್ಟೋ ಪ್ರಮುಖರು ಇದ್ದರು ! ಆ ಗುಂಪಿನಲ್ಲಿ ನನಗೆ ಪರಿಚಯವಿದ್ದವಳು, ಎಲ್ಲಹಿಗಿನ್ಸ್ ವರ್ತ್. ಅವಳೂ, ನಾನೂ ಇಬ್ಬರೂ 'ರಾಯಲ್ ಛೀಫ್ ಸ್ಕೂಲ್'ನಲ್ಲಿ ಓದುತಿದ್ದಾಗ, ಒಂದೇ ರೂಮಿನಲ್ಲಿದ್ದು ವ್ಯಾಸಂಗ ಮಾಡಿದವರು, “ರಾಜಕುಮಾರಿಯ ಗುಂಪಿಗೆ ವಿಶ್ರಾಂತಿ ಪಡೆಯಲು ಅವಕಾಶವಿರಲಿಲ್ಲ. ಕೇವಲ ಒಂದು ಘಂಟೆಯ ಹೊತ್ತು ನಮ್ಮಲ್ಲಿದ್ದರು. ಬೀರ್ ಮತ್ತು ಇತರ ಮದ್ಯಸಾರವುಳ್ಳ ಪಾನೀಯಗಳನ್ನು ಗಂಡಸರಿಗೆ ಹಂಚಲಾಯಿತು. ಗಜ ನಿಂಬೆಹಣ್ಣಿನ ಪಾನಕ, ಕಿತ್ತಲೇ ರಸ, ಆಯಾಸಪರಿಹಾರಕವಾದ ಕಲ್ಲಂಗಡಿ ಹಣ್ಣು-ಇವುಗಳನ್ನು ಹೆಂಗಸರಿಗೆ ನೀಡಲಾಯಿತು. “ಎಲ್ಲಹಿಗಿನ್ಸ್‌ವರ್ತ್ ನನ್ನನ್ನು ಆಲಿಂಗಿಸಿದಳು. ರಾಜಕುಮಾರಿಗೆ ನನ್ನ ಗುರುತು ಗೊತ್ತಾಯಿತು ; ಅಷ್ಟರಲ್ಲೇ ನಾನಿದ್ದ ಸಮಾಚಾರವನ್ನು ಹಿಗಿನ್ಸ್‌ವರ್ತ್ ತಿಳಿಸಿದ್ದಳು. ತಕ್ಷಣ ಚಿಕ್ಕ ದೊಡ್ಡ ಹುಡುಗಿಯರ ತಂಡ