________________
ಬಾಳ ನಿಯಮ ನನ್ನನ್ನು ಸುತ್ತುಗಟ್ಟಿತು. ರಾಜಕುಮಾರಿಯೇ ಸ್ವತಃ ನನಗೆ ಆಹ್ವಾನ ವಿತ್ತಳು; 'ಮಾನ'ದಲ್ಲಿ ಗುಂಪು ಎರಡು ದಿನಗಳ ತನಕ ಇರುವುದರಿಂದ, ಅಲ್ಲಿಗೇ ನಾನು ಬರುವಂತೆ ಸೂಚಿಸಿದಳು. 'ಮಾನ'ದಿಂದಲೇ ಮುಂದಿನ ಪ್ರಯಾಣವೆಂದು ಗೊತ್ತಾಗಿತ್ತು... * “ರಾಜಕುಮಾರಿಯ ಮಾತುಗಳು ನನ್ನನ್ನು ಹುಚ್ಚಳನ್ನಾಗಿ ಮಾಡಿ ದವು. ದರಿದ್ರ ನಹಾಲದಲ್ಲಿ ಹನ್ನೆರಡು ತಿಂಗಳ ಜೈಲುವಾಸ ಮಾಡಿದವಳ ಬೇಸರವೆಲ್ಲ ಬಿಟ್ಟು ಹೋಯಿತು. ಆಗ ನನಗೆ ಹತ್ತೊಂಬತ್ತು ವಯಸ್ಸು; ಇಪ್ಪತ್ತು ವರ್ಷವಾಗಲು ಇನ್ನೊಂದೇವಾರವಿತ್ತು, “ಅಯ್ಯೋ, ಮುಂದೇನಾಗಬಹುದೆಂಬ ಯೋಚನೆಯೂ ನನಗೆ ಇರಲಿಲ್ಲ. ಹೆಂಗಸರ ಮಧ್ಯೆ ಸೇರಿಹೋಗಿದ್ದೆ; ಲಿಲೋಲಿಲೊ ಕಡೆ ದೃಷ್ಟಿ ಬೀರಲೂ ಅವ ಕಾಶವಿಲ್ಲ. ಎಲ್ಲೋ ಅವನನ್ನು ದೂರದಲ್ಲಿ ನೋಡಿದ ಜ್ಞಾಪಕ; ಎಲ್ಲರಿ ಗಿಂತಲೂ ಎತ್ತರವಾಗಿಯೂ ದಪ್ಪವಾಗಿಯೂ ಕಂಡನು.... “ಎಂದೂ ನಾನು ಪ್ರವಾಸ ಹೊರಟವಳಲ್ಲ. ಕಿಲೋಹನ ಮತ್ತು ಮಾನ ಸ್ಥಳಗಳಲ್ಲಿ ಅನೇಕರ ಗೌರವಾರ್ಥ ನಡೆಸುತ್ತಿದ್ದ ಸಂತೋಷ ಸಮಾ ರಂಭಗಳನ್ನು ಮಾತ್ರ ನೋಡಿದ್ದೆ. ಅವರೊಡನೆಯೆ ಮುಂದೆ ಮುಂದೆ ಪ್ರಯಾಣ ಮಾಡಲು ಯಾವತ್ತೂ ನನಗೆ ಆಹ್ವಾನ ಬಂದಿರಲಿಲ್ಲ ; ಬಹುಶಃ ನನ್ನ ಚಿಕ್ಕ ವಯಸ್ಸೇ ಕಾರಣವಿರಬೇಕು....ಸರಿ ; ವಿದ್ಯಾಭ್ಯಾಸ ಮುಗಿದ ತಕ್ಷಣ ಮದುವೆಯೂ ಆಗಿಹೋಯಿತು.... “ವಿಹಾರಿಗಳ ಸ್ಥಳವೆಂದರೆ ಸ್ವರ್ಗಲೋಕದಂತೆಯೆ-ಎಂದು ತಿಳಿದಿದ್ದೆ. ಎರಡುವಾರಗಳ ಮಟ್ಟಿಗಾದರೂ ಜಗತ್ತನ್ನೇ ಮರೆಸಿಬಿಡುವಂಥ ಸುಖ ಸಾಮಾಜ! ಮುಂದೆ ಯಥಾಪ್ರಕಾರ ನಹಾಲದ ಜೀವನ ಇದೇಯಿದೆ : ಅದಕ್ಕೆ ಮುಂಚೆಯಾದರೂ ಸ್ವರ್ಗಲೋಕವನ್ನು ನೋಡಿಬಿಡೋಣವೆಂದು ಮನಸ್ಸು ಮಾಡಿದೆ.
- ಮುಂದಿನ ಕಾರ್ಯ-ಒಂದು ಕುದುರೆಬೇಕೆಂದು ಜಾನ್ ಮಾವ ನನ್ನು ಕೇಳಿದೆ. ಅಂದರೆ, ಮೂರು ಕುದುರೆಗಳನ್ನು ಕೇಳಿದಂತೆಯೇ ಆಯಿತು ; ಒಂದು, ಗೊಲ್ಲರ ಹುಡುಗನಿಗೆ ಮತ್ತು ಇನ್ನೊಂದು, ಹೊರೆ ಹೊತ್ತು ನನ್ನನ್ನೇ ಹಿಂಬಾಲಿಸಿ ಬರಲು ಬೇಕಾಗುತ್ತದೆಯಲ್ಲವೇ ?
೧ ಆಗ ಸರಿಯಾದ ಮಾರ್ಗಗಳೇ ಇರಲಿಲ್ಲ. ವಾಹನಗಳೂ ಸಿಗುತ್ತಿರ ಲಿಲ್ಲ. ಆದರೂ ನನ್ನ ಸ್ವಂತ ಪ್ರವಾಸಕ್ಕೆ ಕುದುರೆ ಸಿಕ್ಕಿತು ! ಅದರ ಹೆಸರು