ಪುಟ:ಬಾಳ ನಿಯಮ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧d ಹಿಲೋ. ನಿನಗೆ ಜ್ಞಾಪಕವಿರಲಾರದು ; ಏಕೆಂದರೆ ಆಗ ನೀನು ವಿದ್ಯಾಭ್ಯಾಸ ನಿಮಿತ್ತ ದೂರದಲ್ಲಿದ್ದಿ, ಮಾರನೆಯ ವರ್ಷ ಮನೆಗೆ ಬಂದಾಗ, ಆ ಕುದುರೆಯ ಸ್ಥಿತಿಯನ್ನು ನೋಡಿದ್ದರೂ ಇರಬಹುದು ; ದುಷ್ಟಮೃಗಗಳನ್ನು ಹಿಡಿಯಲು ಹೊರಟಾಗ ಕುದುರೆಯ ಬೆನ್ನು ಮುರಿದಿತ್ತು ಮತ್ತು ಸವಾರನ ಕುತ್ತಿಗೆಗೂ ಗಾಯವಾಗಿತ್ತು. ' ಮೌನ ಕೀ ' ನಲ್ಲಿ ಅಪಾಯ ಸಂಭವಿಸಿದ್ದು, ಅದರ ಬಗ್ಗೆ ಕೇಳಿದ್ದೀಯೆ. ಏಕೆಂದರೆ ಆ ಯುವಕ ಸವಾರನೇ ಅಮೇರಿಕನ್ ನೌಕಾಧಿ ಕಾರಿಯಾಗಿದ್ದವನು.... ” “ ಹೌದು, ಹೌದು ; ಅವನೇ ಲೆಫ್ಟಿನೆಂಟ್ ಬೌಸ್ ಫೀಲ್ಡ್ ” ಎಂದು ಮಾರ್ಥ ತಲೆದೂಗಿದಳು, “ ಅದಿರಲಿ ; ಹಿಲೋ ಕುದುರೆಯೆಂದರೆ ಸಾಮಾನ್ಯವೇ ? ಅದರ ಮೇಲೆ ಹತ್ತಿದ ಪ್ರಥಮ ಹೆಂಗಸು ನಾನೇ. ಹಿಲೋಗೆ ಮೂರು ಅಥವಾ ನಾಲ್ಕು ವರ್ಷವಿರಬಹುದು. ಚರ್ಮದ ಬಣ್ಣ ಸುತ್ತಲ ಬೆಳಕಿನಿಂದ ಮಿನುಗುತಿತ್ತು. ಜಾನ್ ಅದನ್ನು ಕೆಲವೇ ವಾರಗಳ ಹಿಂದೆ ತಂದಿದ್ದನು. ನಮ್ಮ ಕ್ಷೇತ್ರದ ಸವಾರಿ ಪ್ರಾಣಿಗಳೆಲ್ಲವನ್ನೂ ಮಾರಿಸಿತ್ತು, ಆ ಕುದುರೆ. ಅಂಥ ಸುಂದರ ಕುದುರೆಯನ್ನು ನಾನು ನೋಡಿಯೇ ಇರಲಿಲ್ಲ. ಅದರ ಮೈಕಟ್ಟನ್ನು ಗಮನಿಸಿ ದರೆ, ಪರ್ವತ ಪ್ರದೇಶದ ಸಣ್ಣ ತಳಿಯ ಕುದುರೆಗಳ ಜ್ಞಾಪಕ ಬರುತಿತ್ತು. ಹಿಲೋದ ವಂಶ ಸಾಮಾನ್ಯವಲ್ಲ; ರಾಜನ ಹತ್ತಿರವಿರುವ 'ಸ್ವಾರ್ಕ್ಲಿಂಗ್ಡೊ' ವಿನ ಸಂಪರ್ಕದಿಂದ ಹುಟ್ಟಿದ್ದು-ಎಂದ ಮೇಲೆ ಕೇಳಬೇಕೆ ? ತೆಳ್ಳಗಿದ್ದರೂ ಮೈ ತುಂಬಿಕೊಂಡಂತೆ ಕಾಣುತಿತ್ತು. ಚುರುಕಾದ ಕಿವಿಗಳು ಮುದ್ದಾಡು ವಂತಿತ್ತು ; ಮೋಸವನ್ನು ಸೂಚಿಸುವಷ್ಟು ಸಣ್ಣದಾಗಿರಲಿಲ್ಲ. ಅಥವಾ ಮೊಂಡುತನದ ಹೇಸರಗತ್ತೆಯ ಕಿವಿಯಂತೆ ದೊಡ್ಡದಾಗಿಯೂ ಇರಲಿಲ್ಲ. ಜೇನು ಹಾಕಿದ ತಕ್ಷಣ ಕುದುರೆಯ ಉತ್ಸಾಹ ಹೇಳತೀರದು. ಚುಂಚುಕಾ ಲಿಗೂ, ಗೊರಸಿಗೂ ಮಧ್ಯೆ ಇರುವ ಭಾಗ ಮೇಲ ಮೇಲಕ್ಕೆ ಜಿಗಿಯುತಿತ್ತು, ಸರಾಗವಾಗಿ ಓಡುತಿತ್ತು.... ” ಮಾರ್ಥ, ಮಧ್ಯೆ ಬಾಯಿ ಹಾಕಿ, “ ಹೌದು ; ಲಿಲೋಲಿಯೊ ರಾಜ ಕುಮಾರ ಜಾನ್ ಮಾವನಿಗೆ ಹೇಳುತ್ತಿದ್ದ ಮಾತುಗಳನ್ನು ನಾನು ಯಾರಿಂದಲೋ ಕೇಳಿದ ಜ್ಞಾಪಕವಿದೆ. ನಿನ್ನಂಥ ಸ್ತ್ರೀ ಸವಾರರು ಹವಾಯಿ) ಯಲ್ಲಿಯೇ ಇಲ್ಲ ಎಂದು ಹೇಳುತಿದ್ದನಂತೆ ! ಯಾವಾಗೆಂದರೆ, ನಾನು ಶಾಲೆ ಯನ್ನು ಬಿಟ್ಟು ಎರಡು ವರ್ಷವಾಗಿತ್ತು ; ಆಗ ನೀನು ನಹಾಲದಲ್ಲೇ ಇದ್ದಿ...” 14