ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಎಂದಳು.

  • ಲಿಲೋಲಿಯೊ ಹಾಗೆ ಹೇಳಿದ್ದನೇನು ! ” ಎಂದು ಬೆಲ್ಲ ಆಶ್ಚರ್ಯ ಚಕಿತಳಾದಳು.

ಐವತ್ತು ವರ್ಷಗಳ ಹಿಂದೆ ಸತ್ತು ಬೂದಿಯಾಗಿಹೋಗಿದ್ದ ಪ್ರೇಮಿಯ ಮಾತುಗಳನ್ನು, ಈಗ ನೆನೆಸಿಕೊಳ್ಳುವುದೆಂದರೆ ಅವಳ ಮೈ ರೋಮಾಂಚನ ಗೊಂಡಿತು. ನಾಚಿಕೆಯಿಂದ ಮುಖ ಕೆಂಪೇರಿತು. ಕಂದು ಬಣ್ಣದ ವಿಶಾಲ ಕಣ್ಣುಗಳು ಮಿಂಚಿದವು. ಸಾಮಾನ್ಯವಾಗಿ ಎಲ್ಲ ಹವಾಯಿ ಹೆಂಗಸರಲ್ಲೂ ಸಹಜ ಗಾಂಭೀರ್ಯ ವಿತ್ತು. ಹಾಗೆಯೆ ಬೆಲ್ಲಳೂ ಕೂಡ ಅಕಸ್ಮಾತ್ ಹೃದಯ ಬಿಚ್ಚಿ ಹೋದುದನ್ನು ಮುಚ್ಚಿಕೊಳ್ಳಲು ಪ್ರಯತ್ನ ಪಟ್ಟಳು. ಮಾತು ಬದಲಾಯಿಸಲು ಮತ್ತೆ ಹಿಲೋ ಕುದುರೆಯ ಗುಣಗಾನಕ್ಕೆ ಆರಂಭಿಸಿದಳು. “ ಓ, ಹೇಗೆ ತಾನೆ ವರ್ಣಿಸಲಿ ? ಉದ್ದುದ್ದನೆಯ ಹುಲ್ಲು ಸೋಪಾನಗಳ ಮೇಲೆ, ಕೆಳಗೆ, ಓಡುತಿದ್ದಾಗ, ಕನಸಿನಲ್ಲಿ ಕುದುರೆ ಪಂದ್ಯವನ್ನು ಆಡಿದಂತಿತ್ತು. ಒಂದೊಂದು ನೆಗೆತವೂ ವಿಚಿತ್ರವಾಗಿತ್ತು. ಒಂದು ಸಾರಿ ಜಿಂಕೆಯಂತೆಯೂ, ಮತ್ತೊಂದು ವೇಳೆ ಮೊಲದಂತೆಯೂ, ಇನ್ನೊಂದು ಸಾರಿ ಟೆರಿಯರ್ ನರಿ ಯಂತೆಯೂ ಕಾಣುತಿತ್ತು. ಕುದುರೆ ವಿಷಯ ನಿನಗೆ ಗೊತ್ತಿದೆ. ಅದರಲ್ಲೂ ಹಿಲೋ ಕುದುರೆಯ ಬಗ್ಗೆ ನೀನೇ ಊಹಿಸಬಲ್ಲೆ. ಎಷ್ಟು ಚೆನ್ನಾಗಿ ಹಿಂಗಾಲು ಗಳಿಂದ ಕುಪ್ಪಳಿಸಿ ಮೇಲೇಳುತಿತ್ತು ! ನೆಪೋಲಿಯನ್ ಅಥವಾ ಕೆಶ್ನರ್ ನಂಥ ಮಹಾನಾಯಕರ ಸವಾರಿಗೆ ಯೋಗ್ಯವಾಗಿತ್ತು. ಅದರ ದೃಷ್ಟಿಯಂತೂ ನಮ್ಮನ್ನು ಗೇಲಿಯೆಬ್ಬಿಸುವಂತಿತ್ತು,

  • ಅಂಥ ಹಿಲೋ ಕುದುರೆ ಬೇಕೆಂದು ಜಾನ್ ಮಾವನನ್ನು ಕೇಳಿ ಕೊಂಡೆ ... ಜಾನ್ ಮಾವ ನನ್ನ ಕಡೆ ನೋಡಿದನು ; ನಾನೂ ಅವನ ಕಡೆ ನೋಡಿದೆ. ಅವನು ಮಾತನಾಡದಿದ್ದರೂ ಮುಖಭಾವ ಗೊತ್ತಾಯಿತು. ನನ್ನನ್ನು ನೋಡುತಿದ್ದ ಹಾಗೆಯೇ ನಿಮಿ ರಾಜಕುಮಾರಿಯ ದೃಶ್ಯ ಕಣ್ಣಿಗೆ ಕಟ್ಟಿರಬೇಕು ! * ಪ್ರಿಯ ಬೆಲ್ಲ' ಎಂದು ಕರೆಯದಿದ್ದರೂ, ಅಂತರಂಗದಲ್ಲಿ ಅನುಭವಿಸುತ್ತಿದ್ದನು ...

“ ಕಡೆಗೆ ಅವನು ಹೂಗುಟ್ಟಿದ. ಅಂತೂ ಪ್ರಸಂಗ ಹೀಗೆ ನಡೆಯಿತು....

  • ಹಿಲೋ ಕುದುರೆಯ ಮೇಲೆ ಪ್ರಯಾಣ ಮಾಡುವುದಕ್ಕಿಂತ ಮುಂಚೆ ಸ್ವಲ್ಪ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದೆಂದು ಜಾನ್ ಒತ್ತಾಯಪಡಿಸಿ