ಪುಟ:ಬಾಳ ನಿಯಮ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

of ೫ ಮೋಹದ ಬಲೆಯಲ್ಲಿ ವಾದ ಸಣ್ಣ ಕೈಗಳನ್ನು ಸಿಲ್ಕ್ ನೆರಿಗೆಗಳ ಮಧ್ಯೆ ಮುಚ್ಚಿಕೊಂಡಳು. ಆದರೂ ಅವಳ ಚರ್ಮ ಅವ್ಯಕ್ತ ನೋವಿನಿಂದ ನಸುಗೆಂಪಾಗಿತ್ತು. ಮತ್ತೆ ಯಾವನದ ವೈಭವವನ್ನು ನೆನೆಸಿಕೊಳ್ಳಲು ಪ್ರಾರಂಭಿಸಿದಳು. ಕಣ್ಣುಗಳಲ್ಲಿ ಕಾವೇರಿತು. * * ಸರಿ- ನೀನು ಊಹಿಸಿದ್ದಿ, ಮುಂದಿನ ಕಥೆಯನ್ನು ? ...ಇರಲಿ; ನಾನೇ ಹೇಳುತ್ತೇನೆ. ಸುಂದರ “ಮಾನಾ' ಪ್ರದೇಶವನ್ನು ಬಿಟ್ಟು ನಮ್ಮ ಸವಾರಿ ಹೊರಟಿತು. ದಾರಿಯುದ್ದಕ್ಕೂ ಉಲ್ಲಾಸ, ಗೆಲವು, ನಗುಮುಖ-ಜ್ವಾಲಾ ಮುಖಿಯ ತಗ್ಗುಗಳಲ್ಲಿ ಇಳಿಯುತ್ತಿದ್ದೆವು. 'ಕಿಹೊಲೊ' ದಲ್ಲಿ ಮನತಣಿಯು ವಂತೆ ಈಜಿದೆವು. ಬೇಕಾದಷ್ಟು ಮಿಾನುಗಳನ್ನು ಹಿಡಿದೆವು. ಹಬ್ಬದೂಟ ವಾಯಿತು. ತೆಂಗಿನ ಮರದ ಕೆಳಗೆ ಬೆಚ್ಚಗಿದ್ದ ಮರಳುರಾಶಿಯ ಮೇಲೆ ಮಲಗುತಿದ್ದೆವು. ಅಲ್ಲಿಂದ 'ಪುನಾವ' ಹತ್ತಿದೆವು; ಕುದುರೆಯ ಲಗಾಮನ್ನು ಭದ್ರವಾಗಿ ಹಿಡಿದೆಳೆದು ಪ್ರಾಣಿಗಳ ಬೇಟೆಯಾಡಿದೆವು. ಮೇಲ್ಬಾಗದ ಹುಲ್ಲು ಗಾವಲಲ್ಲಿ ಕುರಿಮಾಂಸ ಧಾರಾಳವಾಗಿ ಸಿಕ್ಕಿತು. ಇನ್ನೂ ಎಷ್ಟೋ ಸ್ಥಳಗಳಲ್ಲಿ ಪ್ರವಾಸ ಬೆಳೆಸಿದೆವು. ಎಲ್ಲೆಲ್ಲಿ ಹೋದರೂ ಜನ ನಮ್ಮನ್ನು ನೋಡಲು ಗುಂಪು ಗುಂಪಾಗಿ ಬರುತ್ತಿದ್ದರು; ಕೈಯಲ್ಲಿ ಹೂ ಗೊಂಚಲು, ರಸಪೂರಿತ ಫಲಗಳು ಮುಂತಾದುವನ್ನು ಹಿಡಿದಿದ್ದರು. ಪ್ರೇಮಪೂರಿತ ಹೃದಯ ಗೀತವನ್ನು ಹಾಡುತಿದ್ದರು. ರಾಜಮನೆತನದವರಿಗೆ ಗೌರವ ಸೂಚಿಸಲು ಬಗ್ಗಿ ನನ ಸ್ಮರಿಸುತಿದ್ದರು. ನಮ್ಮ ವೇಷಭೂಷಣಗಳನ್ನು ನೋಡಿ ಆಶ್ಚರ್ಯದಿಂದ ತುಟ ಕಚ್ಚುತಿದ್ದರು. ಅವರ ಹಾಡುಗಳಲ್ಲಿ ಹಳೆಯ ಕಾಲದ ಮರೆತುಹೋದ ದಿನ ಗಳು ಜ್ಞಾಪಕಕ್ಕೆ ಬರುತಿದ್ದವು.

  • ಸೋದರಿ ಮಾರ್ಥ, ಏನು ತಾನೆ ಮಾಡುವುದು ? ಹವಾಯಿಯವರ ರೀತಿನೀತಿಗಳು ನಿನಗೆ ಗೊತ್ತಿದೆ. ಐವತ್ತು ವರ್ಷಗಳ ಹಿಂದೆ ಹೇಗಿದ್ದರೆಂದು ಊಹಿಸಬಹುದು. ಲಿಲೋಲಿಯೊ ನಿಜವಾಗಿಯೂ ದೃಷ್ಟಿ ಬಡಿಯುವಂತಿದ್ದನು. ಅವನ ಪ್ರಭಾವದಿಂದ ನನಗೆ ಎಚ್ಚರಿಕೆಯ ತಪ್ಪಿ ಹೋಗಿತ್ತು. ಯಾವ ಹೆಂಗ ಸಾದರೂ ಅಷ್ಟೆ; ಆದರೆ ನಾನು ಇಮ್ಮಡಿಯಾಗಿ ತಲೆಕೆಡಿಸಿಕೊಂಡಿದ್ದೆ ಏಕೆಂದರೆ, ಮಂಕುಕವಿದ ನಹಾಲದ ನೆನಪು ಬಂದೊಡನೆ ತಲೆ ಗಿರನೆ ತಿರುಗು ತಿತ್ತು; ಆಗ ಎದುರಿಗಿದ್ದ ಲಿಲೋಲಿ ರಾಜಕುಮಾರನೇ ಸರ್ವಸ್ವವಾಗಿ ಕಾಣುತಿದ್ದನು. ಆದರೆ ಕಾಲಸ್ಪಿತಿ ಬೇರೆಯಾಗಿತ್ತು. ನಾನು ಯಾವ ಭರ ವಸೆಯನ್ನು ಹೊಂದಲೂ ಸಾಧ್ಯವಾಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ವಿವಾಹ ವಿಚ್ಛೇದನ ಕನಸಿನಲ್ಲೂ ಭಾವಿಸಲು ಅಸಾಧ್ಯವಾಗಿತ್ತು. ರಾಬರ್ಟ್ ಮಾವನ