ಪುಟ:ಬಾಳ ನಿಯಮ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಅದು ಇಂದ್ರಜಾಲ ವಿದ್ಯೆ ನಡೆಸಿ ನನ್ನನ್ನು ಸಂಪೂರ್ಣತೆಗೆ ಒಯ್ಯುತಿತ್ತು !.... “ ಯಾರೂ ಯಾವ ಮಾತನ್ನೂ ಆಡಲಿಲ್ಲ. ನನ್ನ ಮುಖವನ್ನು ಮೇಲೆತ್ತಿ ಹಿಡಿದಂತಿತ್ತು. ಮುಚ್ಚುಮರೆಯಿಲ್ಲದೆ ಉತ್ತರ ಹೇಳುತಿದ್ದೆ ! ನಿಜ; ಯಾವುದೋ ಸಂದೇಶ ನಿಶ್ಯಬ್ದದಲ್ಲೇ ಅಡಗಿತ್ತು ! ಅದರ ಗುಡುಗಾಟ ಜೋರಾಗಿತ್ತು ! ಅದಕ್ಕಾಗಿಯೇ ನಾನು ಅಂತರಾತ್ಮನಿಗೆ ಮರೆಹೋಗಿದ್ದೆ. ಆ ರಸನಿಮಿಷಕ್ಕಾಗಿ ಪ್ರಾಣವನ್ನೆ ಬಿಡಲು ಸಿದ್ಧನಿದ್ದೆ, ದೇಹಾದ್ಯಂತ ನನಗೆ ಎಂಥ ಬಹುಮಾನ ಸಿಕ್ಕಿತ್ತು; ಉಸಿರಾಡಲೂ ಪುರುಸೊತ್ತಿಲ್ಲ. " ಮಾರ್ಥ, ನಿಜ ಹೇಳು. ನಾನು ಇಪ್ಪತ್ತರ ಹೊಸ್ತಿಲಲ್ಲಿ ಹೇಗಿದ್ದೆ ? ಚೆನ್ನಾಗಿ, ತುಂಬ ಚೆನ್ನಾಗಿ ?....” ಅರುವತ್ತೆಂಟು ವರ್ಷದ ಬೆಲ್ಲಳನ್ನು ಅರುವತ್ತು ನಾಲ್ಕು ವಯಸ್ಸಿನ ಮಾರ್ಥ ದಿಟ್ಟಿಸಿನೋಡಿದಳು. ಬೆಲ್ಲ ಸಾಮಾನ್ಯ ಹವಾಯಿ ಹೆಂಗಸರಂತಲ್ಲ; ಅವಳದೆಲ್ಲವೂ ವಿಶಿಷ್ಟವಾಗಿತ್ತು. ಅವಳ ಪ್ರಶ್ನೆಗೆ ತಲೆದೂಗಿ ಸಂಪೂರ್ಣ ಒಪ್ಪಿಗೆಯನ್ನು ಮಾರ್ಥ ಸೂಚಿಸಿದಳು. ಬೆಲ್ಲ ನಗುತ್ತಾ ಹೇಳಿದಳು : “ ಪ್ರಾಯದ ಕಾಲ ಯಾರಿಗೆ ತಾನೆ ಬೇಡ? ಆದರೆ ಬರುವುದು ಒಂದೇ ಸಾರಿ !....ಅಲೋಲಿಯೊ ರಾಜಕುಮಾರನಿಗೆ ಆಗ ಆ ಕಾಲ; ಕೇಳಬೇಕೆ ? ಅವನ ಮುಖದ ನಾನಾ ಭಾವಗಳನ್ನು ಗ್ರಹಿಸಲು ನನಗೆ ಅವಕಾಶ ಸಿಕ್ಕಿತು....ಆದ್ದರಿಂದಲೇ ನಮ್ಮ ಹಗಲು ರಾತ್ರಿ ಆಶ್ಚರ್ಯಕರ ವಾಗಿತ್ತು. ಸರಾಗವಾಗಿ ಹಾಡುತ್ತ ಹರಿಯುತಿದ್ದ ನೀರಮೇಲೆ ಕಾಲಕಳೆದೆವು. ಅಲೆಗಳು ಬಂಡೆಯನ್ನು ನಿಧಾನವಾಗಿ ಬಡಿಯುತಿದ್ದುವು. ಪರ್ವತಕ್ಕೆ ಹೋಗುವ ಹಾದಿಯನ್ನೂ ನೋಡಿದೆವು. ಅವನ ಅಂದವಾದ ಸಾಹಸೀ ಕಣ್ಣುಗಳಲ್ಲಿ ಎಷ್ಟೋ ಅರ್ಥವಿತ್ತು. ಸ್ವಚ್ಛವಾದ ಬಾಯಿ ಪ್ರೀತಿಯೋಗ್ಯವಾಗಿತ್ತು.

  • * ಅವನ ದೇಹಸೌಷ್ಟವವನ್ನು ಹೇಗೆ ವರ್ಣಿಸಲಿ ? ವಿಪರೀತ ಅಂಗ ಸಾಧನೆ ಮಾಡಿದವನೆಂದು ತಕ್ಷಣ ಹೇಳಬಹುದು. ಮಲ್ಲರಾಜನಂತೆ ಕಂಗೊಳಿಸು ತಿದ್ದನು. ಮಾಟಗಾರಿ ಕೂದಲು, ಉಕ್ಕಿನಂಥ ಕಾಲುಗಳೇ ಸಾಕ್ಷಿ, ಪೈಲ್ಡರ್ ಮಹಾಶಯನ ಮೊಮ್ಮಕ್ಕಳಲ್ಲಿ ಒಬ್ಬನನ್ನು 'ಪ್ರಿನ್ಸ್ ಆಫ್ ಹಾರ್ವಡ್' ಎಂದು ಕರೆಯುತ್ತಿದ್ದರು ; ಅವನು ತನ್ನ ಸಂಗಡದವರನ್ನೆಲ್ಲ ಕರೆದುಕೊಂಡು ಬಂದು ಸ್ಪರ್ಧಿಸಿದರೂ, ಅಲೋವಿನ ಎದುರಿಗೆ ತೃಣಸಮಾನ! ಅಂದಮೇಲೆ ಲಿಲೋವಿಗೆ ಯಾವ ಬಿರುದು ಕೊಡುತ್ತಾರೊ ನನಗೆ ತಿಳಿಯದು !....”

ಬೆಲ್ಲ ಮಾತು ನಿಲ್ಲಿಸಿ, ಆಳವಾಗಿ ಉಸಿರೆಳೆದುಕೊಂಡಳು. ತನ್ನ ಅಂದ -- -