ಪುಟ:ಬಾಳ ನಿಯಮ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ತಾನೂ ಒಬ್ಬ ತೂಕದ ವ್ಯಕ್ತಿ ಎನ್ನುವ ಸಮರ್ಥನೆಗಾಗಿ ಒಂದೇ ದಿನದಲ್ಲಿ ಇಬ್ಬರು ರಷ್ಯನ್ ಸಾಹೇಬರೊಡನೆ ದ್ವಂದ್ವ ಯುದ್ಧ ಮಾಡಿದ್ದ. ಹಾಗೆಯೆ ಫರ್ ಕಳ್ಳರ ಗುಂಪಿನಲ್ಲಿ ಸ್ನಾನ ಸಂಪಾದಿಸಲು ಪ್ರಯತ್ನ ಪಟ್ಟು ದೊಡ್ಡ ವಿಜಯವನ್ನೇ ಗಳಿಸಿದ್ದ. ತನ್ನ ಹಿಂದೆ ಸಾವಿರಾರು ಮೈಲಿಗಳ ರಷ್ಯಾ ಮತ್ತು ಸೈಬೀರಿಯದ ಮಾರ್ಗವಿತ್ತು. ಅದೇ ದಾರಿಯಲ್ಲಿ ಹಿಂತಿರುಗಿ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದ ರಿಂದ ಕಪ್ಪನೆಯ ಹಿಮಮಯ ಬೆರಿಂಗ್ ಸಮುದ್ರವನ್ನು ಹಾದು ಅಲಾಸ್ಕ, ತಲುಪುವುದೊಂದೇ ಉಳಿದ ಮುಂದಿನ ಕರ್ತವ್ಯವಾಗಿತ್ತು. ಇದರಿಂದಾಗಿ, ಅನಾಗರಿಕತೆಯಿಂದ ಇನ್ನೂ ಹೆಚ್ಚಿನ ಅನಾಗರಿಕತೆಗೆ ಹೋಗಬೇಕಾಗಿತ್ತು. ಫರ್ ಕಳ್ಳರ ಕೀಳುಮಟ್ಟದ ನಾವೆಗಳಲ್ಲಿ ಆಹಾರ ನೀರಿಲ್ಲದೆ, ಕೊನೆಯಿಲ್ಲದ ಅತಿ ರಭಸದಿಂದಿರುವ ಅಲೆಗಳೊಡನೆ ಹೋರಾಡುತ್ತ ಮನುಷ್ಯರು ಪ್ರಾಣಿ. ಗಳಂತೆಯೆ ಮಾರ್ಪಟ್ಟಿದ್ದರು. ಕಮಚಟಕದ ಪೂರ್ವದಿಕ್ಕಿಗೆ ಮೂರು ಬಾರಿ ಸಮುದ್ರಯಾನ ಮಾಡಿದ್ದ. ನಾನಾ ಕಷ್ಟ, ನೋವುಗಳನ್ನು ಅನುಭವಿಸಿ ಜೀವ ಉಳಿಸಿಕೊಂಡು ಮರು ನಾ೦ಯೂ ಹಿಂದಿರುಗಿ ಬರಬೇಕಾಯಿತು. ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಕೊಂಡೆವು. ಅಂತೂ ತಾನು ಬಂದ ದಾರಿಯಲ್ಲಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸುರಂಗದ ಸಿಡಿಮದ್ದೂ, ಕಶಾ ಪ್ರಹಾರವೂ ಕಾದಿದ್ದ. ಕಡೆಗೆ ನಾಲ್ಕನೆಯ ಬಾರಿ ಪೂರ್ವಕ್ಕೆ ಪ್ರಯಾಣಮಾಡಿದ್ದ. ಕೇವಲ ಕಾಲ್ಪನಿಕವೆಂದಿದ್ದ ಸೀಲ್ ದ್ವೀಪಗಳನ್ನು ಮೊಟ್ಟ ಮೊದಲು ಕಂಡುಹಿಡಿದ ತಂಡ ದಲ್ಲಿ ತಾನೂ ಇದ್ದ. ಆದರೆ ತಾನು ಹಿಂದಿರುಗಲಿಲ್ಲ. ತುಪ್ಪುಳು ಚರ್ಮದ ಭಾಗ್ಯ ದಲ್ಲಿ ವಾಲಾಗಲು ಕಮ್ಚಟಕ್ ದ್ವೀಪದಲ್ಲಿ ನಡೆದ ಹುಚ್ಚು ಉಲ್ಲಾಸ ಕೋಲಾ ಹಲವು ತಾನು ಭಾಗವಹಿಸಿರಲಿಲ್ಲ. ಪುನಃ ವಾಪಸು ಹೋಗಕೂಡದೆಂದು ಪ್ರತಿಜ್ಞೆ ಮಾಡಿದ್ದ. ತನಗೆ ಪ್ರಿಯವಾದ ಯೂರೋಪಿನ ರಾಜಧಾನಿಗಳನ್ನು ತಲುಪಬೇಕಾದರೆ ಇನ್ನೂ ಮುಂದುವರಿಯಬೇಕೆಂದು ತಿಳಿದಿದ್ದೆ. ಆದ್ದರಿಂದ ನಾವೆಗಳನ್ನು ಬದಲಾಯಿಸಿ ಕತ್ತಲಿನ ಹೊಸ ರಾಜ್ಯದಲ್ಲಿ ನೆಲೆಸಿದ್ದ. ಸ್ಲಾವ್ ಕುಲದ ಬೇಟೆಗಾರರು, ರಷ್ಯದ ಸಾಹಸಿಗಳು, ಮಂಗೋಲರು, ಟಾಟಾರರು ಮತ್ತು ಸೈಬೀರಿಯದ ಮೂಲನಿವಾಸಿಗಳು ತನ್ನ ಸ್ನೇಹಿತರಾಗಿದ್ದರು. ಹೊಸ ಪ್ರಪಂಚದ ಅನಾಗರಿಕರೊಡನೆ ಅವರು ರಕ್ತದ ಕಾಲುವೆಯನ್ನೇ ಹರಿಸಿದ್ದರು. ಫರ್‌ ದಾನ ಮಾಡದ ಎಲ್ಲ ಹಳ್ಳಿಗಳ ಮೇಲೂ ಕಗ್ಗೂಲೆಯನ್ನು ಮಾಡಿದ್ದರು.