________________
ಬಾಳ ನಿಯಮ ಪುನಃ ಪ್ರತಿಫಲವಾಗಿ ಅವರೇ ಹಡಗು ಕಂಪೆನಿಯವರಿಂದ ಸಾಮೂಹಿಕವಾಗಿ ಸಂಹರಿಸಲ್ಪಟ್ಟಿದ್ದರು. ಉಳಿದವರೆಂದರೆ ನಾನು ಮತ್ತು ಇನ್ನೊಬ್ಬ ಫಿನ್ ಜನಾಂಗದವ. ಹಸಿವಿನ ಮತ್ತು ಏಕಾಂತದ ಚಳಿಗಾಲವನ್ನು ಯಾವ ಸಂಪರ್ಕವೂ ಇಲ್ಲದ ಅಲ್ಲೂ ಟನ್ ದ್ವೀಪಗಳಲ್ಲಿ ಕಳೆದಿದ್ದರು. ವಸಂತಕಾಲದಲ್ಲಿ ಯಾವುದಾದರೂ ಫರ್ ಹಡಗು ತಮ್ಮ ರಕ್ಷಣೆಗೆ ಬರುವ ಸಂಭವ ಸಾವಿರದಲ್ಲಿ ಒಂದರಷ್ಟು ಅದೃಷ್ಟದ ಮೇಲೆ ನಿಂತಿತು. ಆದರೆ ಸದಾ ಭೀಕರ ಕ್ರೌರ್ಯ ತನ್ನನ್ನು ಸುತ್ತುಗಟ್ಟಿತು. ಹಿಂದಿರುಗದೆ ನಾವೆಯಿಂದ ನಾವೆಗೆ ಸಂಚರಿಸುತ್ತಾ, ಕಡೆಗೆ ದಕ್ಷಿಣ ದಿಕ್ಕಿನಲ್ಲಿ ಶೋಧನೆಗಾಗಿ ಹೊರಟ ಹಡಗನ್ನು ಸೇರಿದ್ದ. ಅಲಾಸ್ಕದ ತೀರದಲ್ಲಿ ಇಳಿಯುತ್ತಿದ್ದಂತೆ ಕಾಡು ಮನುಷ್ಯರ ತಂಡದ ಪ್ರತಿಭಟನೆಯನ್ನು ಮಾತ್ರ ಎದುರಿಸಬೇಕಾಗಿತ್ತು. ನಿರುತ್ಸಾಹಜನಕವಾದ ಮತ್ತು ಕಡಿದಾದ ಬಂಡೆಗಳಿಂದ ಆವೃತವಾಗಿದ್ದ ದ್ವೀಪ ಗಳಲ್ಲಿ ಲಂಗರು ಹಾಕಿ ನಿಲ್ಲಿಸಬೇಕಾದರೆ ಅಲ್ಲೋಲ ಕಲ್ಲೋಲ್ಲದ ಯುದ್ಧವನ್ನೇ ಮಾಡಿದಂತಾಗಿತ್ತು. ಎರಡು ರೀತಿಯ ಶತ್ರುಗಳನ್ನು ಎದುರಿಸಬೇಕಾಗಿತ್ತು. ಒಂದು ವಿನಾಶವನ್ನು ಸೂಚಿಸುವಂತೆ ಬೀಸುತ್ತಿದ್ದ ಚಂಡಮಾರುತ, ಎರಡನೆ ಯಮ, ತೋಡು ದೋಣಿಗಳಲ್ಲಿ ಕೂಗಾಡುತ್ತ ಬರುತಿದ್ದ ಕಾಡು ನಿವಾಸಿಗಳು ; ಅವರ ಮುಖದ ಮೇಲೆ ಯುದ್ಧಾಸಕ್ತಿಯು ಎದ್ದು ಕಾಣುತಿತ್ತು. ಸಮುದ್ರದ ಮೇಲೆ ಓಡಾಡುವವರ ಬಳಿಯಲ್ಲಿ ಸಾಮಾನ್ಯವಾಗಿ ಇರುತಿದ್ದ ಸಿಡಿಮದ್ದಿನ ಕ್ರೂರ ಶಕ್ತಿಯನ್ನು ತಿಳಿಯಲು ಅವರು ಬರುತ್ತಿದ್ದರು. ದಕ್ಷಿಣದ ಕರಾವಳಿ 'ಯಲ್ಲೇ ಹೆಚ್ಚು ಕಾಲ ಸಂಚಾರಮಾಡಿ, ಕಡೆಗೆ ಪುರಾತನ ನಾಡೆನಿಸಿದ್ದ ಕ್ಯಾಲಿ ಫೋರ್ನಿಯಕ್ಕೆ ಬಂದಿದ್ದರು. ಇಲ್ಲಿ ಸ್ಪೇನ್ ಸಾಹಸಿಗಳು ಮೆಕ್ಸಿಕೋಗೆ ಹೋಗಲು ಸುಗಮ ದಾರಿಯನ್ನು ನಿರ್ಮಿಸುತ್ತಿದ್ದಾರೆಂಬ ವದಂತಿಯಿತ್ತು. ಈ ಅಂಶದ ಮೇಲೆ ತಾನು ತುಂಬ ನಂಬಿಕೆಯಿಟ್ಟಿದ್ದ. ಏಕೆಂದರೆ ಅವರೊಡನೆ ತಪ್ಪಿಸಿಕೊಂಡು ಹೊರಟರೆ, ಉಳಿದದ್ದು ಸುಲಭ. ಹೆಚ್ಚು ಕಡಿಮೆ ಒಂದು ಅಥವಾ ಎರಡು ವರ್ಷಗಳಲ್ಲಿ ಮೆಕ್ಸಿಕೋ ತಲಪಬಹುದು ; ಅಲ್ಲಿಂದ ಹಡಗನ್ನೇರಿ ಮತ್ತೆ ಯೂರೋಪ್ ಸೇರಬಹುದು. ಆದರೆ ಅವರಿಗೆ ಸ್ಪೆಯ್ ಸಾಹಸಿಗಳ ಭೇಟಿಯಾಗಲಿಲ್ಲ. ಬದಲಾಗಿ ಹಿಂದಿನಂತೆಯೆ ಅನಾಗರಿಕ ಕೂರಿಗಳ ಅಭೇದ್ಯ ಕೋಟೆಯನ್ನೆದುರಿಸಬೇಕಾಗಿತ್ತು. ಪ್ರಪಂಚದ ಎಲ್ಲೆಗೆ ತಮ್ಮದೇ ಆದ ಮಿತಿ ಕಲ್ಪಿಸಿದ್ದ ಮತ್ತು ಯುದ್ಧಕ್ಕಾಗಿಯೆ ಹುಟ್ಟಿದಂತಿದ್ದ ಆ ನಿವಾಸಿಗರು ಅವರನ್ನು ದಡದ ಹತ್ತಿರವೇ ಸೇರಿಸಲಿಲ್ಲ. ದೋಣಿ ಚೂರಾಯಿತು. ಎಲ್ಲರೂ