ಪುಟ:ಬಾಳ ನಿಯಮ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ ಮುಖ ಭಂಗ ಸತ್ತರು. ನಾಯಕನು ಶೋಧನೆಯನ್ನು ನಿಲ್ಲಿಸಿ ಉತ್ತರಮುಖವಾಗಿ ಹೊರಟನು. ವರ್ಷಗಳು ಉರುಳಿದವು. ಮಿಕೆಯೋಲವ್ ಎಂಬ ಹೆಂಗಾಮಿ ಹೊರಕೋಟೆ ನಿರ್ಮಾಣವಾದಾಗ, ತಾನು ಟಿಬೆನ್‌ಕಾಫ್ ಕೈಕೆಳಗೆ ಕೆಲಸ ಮಾಡಿದ್ದ. ಕಸೊ ಸ್ವಿಮ್ ದೇಶದಲ್ಲಿ ಎರಡು ವರ್ಷ ತಳ್ಳಿದ್ದ. ಬೇಸಿಗೆಯಲ್ಲಿ ಕಾಬ್ಜಿಬ್ಯೂ ಜಲಸಂಧಿಯ ಮೇಲ್ವಿಚಾರಕನಾಗಿದ್ದ. ಅದೇ ಸಮಯದಲ್ಲಿ ಮೂಲನಿವಾಸಿಗಳ ಸಾಮಾನುಗಳ ವಿನಿಮಯಕ್ಕೆ ಗುಂಪಾಗಿ ಸೇರುತ್ತಿದ್ದರು. ಅಲ್ಲಿ ನಾನಾ ದೇಶಗಳಿಂದ ಬಂದ ವಸ್ತುಗಳಿದ್ದವು; ಸೈಬೀರಿಯದ ಕಲೆಗಳುಳ್ಳ ಜಿಂಕೆಯ ಚರ್ಮ, ಡಯಾಮೆಡಿಸದ ದಂತ, ಆರ್ಟಕ್ ತೀರದ ಸೀಲ್ ಸಸ್ಯ ಪ್ರಾಣಿಗಳ ಚರ್ಮ, ಆಶ್ಚರ್ಯಕರ ಕಲ್ಲು ದೀಪಗಳು ಮುಂತಾದವು. ಆ ವಸ್ತು ಗಳು ಒಂದು ತಂಡದಿಂದ ಮತ್ತೊಂದಕ್ಕೆ ಕೈ ತಪ್ಪಿ, ಯಾವಾಗ ಒಂದೆಡೆ ಸೇರಿತು ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ. ಒಂದು ಸಾರಿಯಂತೂ ಇಂಗ್ಲ ದಿನ ಬೇಟೆಯ ಚಾಕು ಸಿಕ್ಕಿತು ! ಭೂಗೋಳ ಅರ್ಥ ಮಾಡಿಕೊಳ್ಳಲು ಇದೇ ಸರಿಯಾದ ಶಾಲೆ ಎಂದು ಸುಬೆನ್ಕೋವ್ ಭಾವಿಸಿದ. ಏಕೆಂದರೆ ಇಲ್ಲಿ ನಾರ್ಟನ್ ತೀರ, ಕಿಂಗ್ ದ್ವೀಪ, ಸೇಂಟ್ ಲಾರೆನ್ ದ್ವೀಪ, ಪ್ರಿನ್ಸ್ ಆಫ್ ವೇಲ್ಸ್ ಭೂಶಿರ, ಬ್ಯಾರೋ ಮುಂತಾದ ಕಡೆಗಳಿಂದ ಎಸ್ಕಿಮೋ ಜನರನ್ನು ಭೇಟಿಮಾಡಿದ್ದ. ಬೇರೆಯ ಹೆಸರುಳ್ಳ ಇತರ ಪ್ರದೇಶಗಳನ್ನು ಪ್ರಯಾಣದ ಕಾಲಮಾನದಿಂದ ತಿಳಿಯಬೇಕಾಗಿತ್ತು. - ಈ ವ್ಯಾಪಾರಸ್ಥ ಅನಾಗರಿಕರು ಬಹು ವಿಶಾಲ ಪ್ರದೇಶಗಳನ್ನು ದಾಟ ಬರುತ್ತಿರಬೇಕು ; ಆದ್ದರಿಂದಲೇ ಅವರು ಒಂದೇ ರೀತಿಯ ಸಾಮಗ್ರಿಗಳನ್ನು ಪುನಃ ಪುನಃ ತರುತಿದ್ದರು. ಅವುಗಳನ್ನು ತಾನು ಬೆಲೆಯೇರಿಸಿ, ಪುಸಲಾಯಿಸಿ ಲಂಚ ಕೊಟ್ಟು ವಶಪಡಿಸಿಕೊಂಡಿದ್ದ. ದೂರದೇಶದ ಆಕ್ಷಯಭರಿತರಾದ ಹೊಸ ತಂಡದವರು ಯಾರಾದರೂ ಬಂದರೆ ಅವರನ್ನು ತನ್ನ ಮುಂತೆ ಹಾಜರು ಪಡಿಸುತ್ತಿದ್ದರು. ಕಾಡು ಮೃಗಗಳು, ಶತ್ರು ತಂಡಗಳು, ಒಳಹೊಗಲಾಗದ ಅರಣ್ಯಗಳು, ಅದ್ಭುತ ಪರ್ವತ ಶ್ರೇಣಿಗಳು ಮತ್ತು ಅಸಂಖ್ಯಾತ ಊಹಾತೀತ ವಾದ ಗಂಡಾಂತರಗಳು ಹೇಳಲ್ಪಡುತ್ತಿದ್ದುವು. ಆದರೆ ಒಂದು ವದಂತಿ ಯಾವಾಗಲೂ ಹೊರಗಿನವರಿಂದ ಕೇಳಿಬಂತು ....... ಪೂರ್ವ ದಿಕ್ಕಿನ ತುದಿಯಲ್ಲಿ ಬಿಳೀ ಮನುಷ್ಯರಿದ್ದಾರೆಂದು ಅವರ ಕಣ್ಣು ನೀಲಿಯಾಗಿಯೂ, ಕೂದಲು ನುಣುಪಾಗಿಯೂ ಇರುವುದಂತೆ. ಯಾವಾಗಲೂ ತುಪ್ಪುಳು ಚರ್ಮಕ್ಕಾಗಿ