ಪುಟ:ಬಾಳ ನಿಯಮ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ದೆವ್ವದಂತೆ ಹೋರಾಡುತ್ತಾರಂತೆ ...ಇಷ್ಟಾಗಿ ಯಾರೂ ಅವರನ್ನು ನೋಡಿರಲಿಲ್ಲ. ಬೀದಿಯ ಮಾತು ಮಾತ್ರ ಒಬ್ಬರಿಂದೊಬ್ಬರಿಗೆ ಹರಡಿತ್ತು. ಈ ವಿಚಿತ್ರ ಶಾಲೆ ಯಲ್ಲಿ ಸತ್ಯಾಂಶವನ್ನು ಅಪರಿಚಿತ ಭಾಷೆಯ ವಾದ ವಿವಾದದ ಮೂಲಕ ತಿಳಿ ಯಲು ಸಾಧ್ಯವಿರಲಿಲ್ಲ. ಜನರ ಮೆದುಳೋ ವಿಚಾರ ಬೆಳಕಿಲ್ಲದ ಕತ್ತಲಕೋಣೆ ಯಂತಿತ್ತು. ಅವರ ಮಾತಿನಲ್ಲಿ ನಿಜಾಂಶವೂ ಕಲ್ಪನೆಯೂ ಬೆರೆಸಿಹೋಗಿದ್ದವು. ದೂರವನ್ನು ನಿರ್ಧರಿಸುವ ಪ್ರಮಾಣ 'ನಿದ್ರೆ': ವ್ಯಕ್ತಿ ದಾರ್ಡ್ಯದ ಮೇಲೆ ಅವ ಲಂಬಿಸಿರುವ ಸಿದ್ರೆಯನ್ನು ಪ್ರಮಾಣವೆಂದು ನಂಬುವುದು ಹೇಗೆ ? ಆದರೂ 'ಪೂರ್ವದಲ್ಲಿ ದೊಡ್ಡ ನದಿಯೊಂದಿದೆ ; ಅಲ್ಲೇ ಈ ನೀಲಿ ಕಣ್ಣಿನ ಜನರಿದ್ದಾರೆ. ಆ ನದಿಯೇ ಯೂಕಾನ್.' ಎಂಬ ಪಿಸುಮಾತು ನನಗೆ ಧೈರ್ಯ ತಂದಿತು. ರಷ್ಯನರು ಕ್ವಿಕ್ಪಾಕ್ ಎನ್ನುವ ದೊಡ್ಡ ನದಿ ಮಿಕಿಲೊವಸ್ತಿ ಕೋಟೆಯ ದಕ್ಷಿಣದಲ್ಲಿ ವಿಲೀನವಾಗುತ್ತದೆಂಬ ಸುದ್ದಿ ಜನಜನಿತವಾಗಿತ್ತು. (ಆ ಕ್ರಿಕ್ ಪಾಕ್" ನದಿಯೇ ಯೂಕಾನ್' ಎಂಬ ಪಿಸುಮಾತು ಮೆಲ್ಲಗೆ ಹರಡ ತೊಡಗಿತು. ಸುಬೆನ್ಕೋವ್ ಮಿಕೆಯೊಲವ್‌ಸ್ಕಿಗೆ ಮರಳಿ ಹೊರಟಿದ್ದ. ಕ್ವಿಕ್ ಪಾಕ್ ಯಾತ್ರೆಗಾಗಿ ಒಂದು ವರ್ಷ ಕಾಲ ಹಾತೊರೆದಿದ್ದ. ಕಡೆಗೊಬ್ಬ ಸಿಕ್ಕಿದ್ದ. ಆತನೇ ಮೆಲಕಾಫ್ ಎಂಬುವನು. ಮಿಶ್ರಜಾತಿಯವನಾದರೂ ರಷನರ ಸಂಪರ್ಕದಿಂದ ಹುಟ್ಟಿದವನು, ಕಮ್ಚಟಕಾ ದಾಟಿ ಬಂದಿದ್ದ ಕಾರರೂ ಹಿಂಸ್ರ ಪುರುಷರೂ ಆದ ತಾಡಾಡಿಗಳ ಗುಂಪಿನ ಮುಖಂಡನಾಗಿದ್ದನು. ತಾನು ಅವನ ಕೈಕೆಳಗೆ ನಾವಿಕರ ಸೇನಾಧಿಕಾರಿಯಾದನು. ಕ್ವಿಕ್ಪಾಕ್ ನದೀ ಮುಖಜಭೂಮಿ ಬಹು ವಿಶಾಲವಾಗಿತ್ತು. ಅಲ್ಲಿ ದಿಗ್ರಮೆ ಹಿಡಿಸುವಂತಿರುವ ಅನೇಕ ತೊಳಸು ಬಳಸು ಹಾದಿಯಲ್ಲಿ ಪ್ರಯಾಣಮಾಡಿದ್ದರು. ಉತ್ತರ ತೀರದ ಸಣ್ಣ ಬೆಟ್ಟಗಳನ್ನು ಹತ್ತಿದ್ದರು. ತೋಡುದೋಣಿಗಳ ಪಕ್ಕದ ಮೇಲಂಚಿನಲ್ಲಿ ಯುದ್ಧ ಸಾಮಗ್ರಿಗಳನ್ನು ತುರುಕಿದ್ದರು. ಎರಡರಿಂದ ಹತ್ತು ಮೈಲಿಗಳಷ್ಟು ಅಗಲ, ವಿದ ನದಿಯ ನಾಲೆ ತುಂಬ ಆಳವಾಗಿತ್ತು, ಸುಮಾರು ಐನೂರು ಮೈಲಿಗಳ ವರೆಗೆ ಅವರು ದೊಡ್ಡ ಪ್ರವಾಹಗಳನ್ನು ದಾಟಿದರು. ಮೆಲಕಾಫ್ ನ್ಯುಲಾಟೋ ಪ್ರದೇಶದಲ್ಲಿ ವ್ಯಾಪಾರಕ್ಕಾಗಿ ಕೋಟೆಯೊಂದನ್ನು ಕಟ್ಟಲು ನಿಶ್ಚಯಿಸಿದನು. ಸುಬೆನ್ ಕೊವ್ ಇನ್ನೂ ಮುಂದೆ ಹೋಗೋಣವೆಂದು ಪ್ರೇರೇಪಿಸಿದನು. ಆದರೆ ಮರುಕ್ಷಣ ನ್ಯಲಾಟೋವಲ್ಲೇ ನಿಲ್ಲಲು ಒಪ್ಪಿಕೊಂಡನು. ಬಹು ದಿನ ಕಾಡುವ ಚಳಿಗಾಲ ಬರುತ್ತಿದ್ದುದರಿಂದ, ಒಂದು ನೆಲೆಯಲ್ಲಿ ನಿಲ್ಲುವುದು ಉತ್ತಮವೆಂದು.