ಪುಟ:ಬಾಳ ನಿಯಮ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ಭಾವಿಸಿದನು. ಬೇಸಿಗೆಯಲ್ಲಿ ಮಂಜು ಕಡಿಮೆಯಾಗುತ್ತದೆ; ಆಗ ಕ್ಲಿಕ್ಪಾಕ್ ನದಿಯ ಮೇಲೆ ಯಾರಿಗೂ ತಿಳಿಯದಂತೆ ಪ್ರಯಾಣ ಬೆಳೆಸಿ, ಹಡ್ರನ್ ಕೊಲ್ಲಿಯ ಪಾಳೆಯಗಳಿಗೆ ಸೇರಲು ಪ್ರಯತ್ನ ಪಡಬಹುದು ! ಕ್ರಿಕ್ಪಾಕ್ ನದಿಯೇ ಯಕಾನ್ ಎಂಬ ಪಿಸುಮಾತನ್ನು ಮೆಲೆಕಾಫ್ ಕೇಳಿರಲಿಲ್ಲ. ತಾನು ಕೂಡ ಅವನಿಗೆ ಹೇಳಲಿಲ್ಲ! ವ್ಯಾಪಾರದ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದರು. ಬಲಾತ್ಕಾರ ದಿಂದ ಕೆಲಸಮಾಡಬೇಕಾಯಿತು. ನ್ಯುಲಾಟೋ ಇಂಡಿಯನರ ನಿಟ್ಟುಸಿರನ್ನೂ ನರಳಾಟವನ್ನೂ ಪ್ರತಿಬಿಂಬಿಸುವಂತೆ ಒಂದರಮೇಲೊಂದು ಮರದ ದಿಮ್ಮಿಗಳು ಏರಿಸಲ್ಪಟ್ಟವು. ಕೆಲವೊಮ್ಮೆ ಚಾಟಿಯ ಏಟು ಬೀಳುತಿತ್ತು. ಆ ಕಾರ್ ವನ್ನು ಕೈಗೊಂಡವರು ಕಡಲುಗಳ್ಳರೇ ! ಕೆಲವು ಇಂಡಿಯನರು ಓಡಿಹೋದರು. ಕೈಗೆ ಸಿಕ್ಕಿ ಬಿದ್ದಾಗ ಅವರ ಕೈಕಾಲುಗಳನ್ನು ಕಟ್ಟಿ ಕೋಟೆಯ ಮುಂದೆ ಬೀಳಿ ಸುತ್ತಿದ್ದರು. ಹಡಗಿನ ಹಗ್ಗಗಳಿಂದ ಬಂಧಿಸುತ್ತಿದ್ದರು. ಮತ್ತು ಕಲಾ ಪ್ರಹಾ ರದ ಪ್ರಭಾವವನ್ನು ಚೆನ್ನಾಗಿ ಅನುಭವಿಸುತಿದ್ದರು. ಕೋಟೆಯ ನಿರ್ಮಾಣ ಕ್ಕಿಂತ ಮುಂಚೆ ಹಿಮ ವಾತಾವರಣ ಕಡಿಮೆಯಾಯಿತು. ಇನ್ನು ತುಪ್ಪುಳು ಚರ್ಮಕ್ಕಾಗಿ ಹೋರಾಡುವ ಕಾಲ. ಇಂಡಿಯನರು ತುಂಬ ಕಾಣಿಕೆಯನ್ನು ನೀಡಬೇಕೆಂದು ಘೋಷಿಸಲಾಯಿತು. ಒದೆತ ಕಶಾಪ್ರಹಾರ ಜೋರಾಗಿ ಮುಂದು ವರಿಯಿತು. ಹೆಂಗಸರು ಮಕ್ಕಳು ಫ‌ಕಳ್ಳರ ಬಂದಿಗಳಾದರು. ನಿಜ; ರಕ್ತದಿಂದ ಅಂಕುರಾರ್ಪಣವಾಯಿತು. ಈಗ ಅದರ ಪ್ರತಿಫಲ ವನ್ನು ಅನುಭವಿಸುವ ಸಮಯ. ವ್ಯಾಪಾರ ಕೋಟೆ ಬಿದ್ದು ಹೋಗಿತ್ತು. ಸುಟ್ಟು ಹೋಗುತ್ತಿರುವ ಅದರ ಬೆಳಕಲ್ಲಿ ಅರ್ಧದಷ್ಟು ಫ‌ ಕಳ್ಳರು ಕೊಲೆಗೀಡಾದರು. ಉಳಿದವರು ನರಳಾಟಕ್ಕೆ ಸಿಕ್ಕಿದರು. ಕಡೆಗೆ ಸುಬೆನ್ ಕೊವ್ ಮಾತ್ರ ಉಳಿ ದಿದ್ದ. ಅಲ್ಲ; ಹಿಮದಲ್ಲಿ ಬಿದ್ದು ಹಲುಬುತ್ತಿರುವ ಆ ದೈತ್ಯಾಕಾರದ ಬಿಗ್ ಇವಾನ್‌ನನ್ನೂ ಸೇರಿಸಿದರೆ ಇಬ್ಬರು ಉಳಿದ ಹಾಗಾಯಿತು. ಯಕಾಗ ತನ್ನ ಕಡೆ ತಿರಸ್ಕಾರಭಾವದಿಂದ ನೋಡಿ ಹಲ್ಲುಕಿರಿಯುತ್ತಿದ್ದಾ ನೆಂದು ಸುಬೆನ್ಕೊಗೆ ತಿಳಿಯಿತು. ಸುಬೆನ್ ಕೊವ್ಗೆ ಯಕಾಗನನ್ನು ಚಾಟಿ ಯಿಂದ ಹೊಡೆದದ್ದು ಜ್ಞಾಪಕವಾಯಿತು. ಆ ಗುರುತು ಯಕಾಗನ ಮುಖದ ಮೇಲೆ ಇನ್ನೂ ಇದ್ದಿತು. ಅವನು ಯಕಾಗನನ್ನು ಬಯವ ಪ್ರಸಂಗ ವಿಲ್ಲ. ಆದರೆ ಯಕಾಗ ಆ ಸೇಡನ್ನು ತೀರಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳು