________________
ಬಾಳ ನಿಯಯ ವನೋ ಎಂಬ ಯೋಚನೆ ಬೇಸರ ತರುತ್ತಿತ್ತು, ಎಲ್ಲರಿಗಿಂತಲೂ ಮುಖ್ಯಸ್ಥನಾಗಿದ್ದ ನಕಾಮುಕನನ್ನು ಕಂಡು ಕವೆ ಕೇಳಲೇ ಎಂದು ಸುಬೆನ್ ಕೊವ್ ಯೋಚಿಸಿದನು. ಆದರೆ ಅದು ಪ್ರಯೋಜನ ವಿಲ್ಲವೆಂದು ತನ್ನಲ್ಲಿ ತಾನೇ ತೀರ್ಮಾನಿಸಿದನು. ಹೋಗಲಿ; ಬೇಡಿಗಳನ್ನು ಕಿತ್ತೊಗೆದು ಹೋರಾಡುತ್ತ ಸಾಯೋಣವೆಂದರೆ, ಈ ಪಟ್ಟಿಗಳು ತನಗಿಂತಲೂ ಶಕ್ತಿಯುತವಾಗಿವೆ. ಹೀಗೆಯೆ ಎಣಿಕೆ ಹಾಕುತ್ತ ಸುಬೆನ್ಕೊವ್ ಮತ್ತೊಂದು ರೀತಿಯಲ್ಲಿ ಯೋಚಿಸಿದನು ! ಮಕಾಮುಕನ ಪತ್ರಕ್ಕೆ ರುಜು ಹಾಕಿದನು. ವಿಲಕ್ಷಣವಾದ ಆ ಜನರ ಭಾಷೆಯನ್ನು ತಿಳಿದ ದ್ವಿಭಾಷಿಯೊಬ್ಬನನ್ನು ಕರೆ ತರಬೇಕೆಂದು ಕೇಳಿಕೊಂಡನು. “ಓ, ನಕಾಮುಕ್, ನಾನು ಸಾವಿಗೆ ಗಮನ ಕೊಡುವವನಲ್ಲ. ದೊಡ್ಡ ವ್ಯಕ್ತಿಯಾದ ನನಗೆ ಸಾವೆಂದರೆ ತಿಳಿಗೇಡಿತನದ ಮಾತು. ಸತ್ಯವಾಗಿಯೂ ಸಾಯುವುದಿಲ್ಲ. ಇತರರಂತೆ ನಾನು ಕೇವಲ ಮಾಂಸದ ಮುದ್ದೆಯಲ್ಲ.” ಎಂದು ಸುಬೆನ್ ಕೊವ್ ಎದುರಿಗೆ ನರಳಾಡುತಿದ್ದ ಬಿಗ್ ಇವಾನ್‌ನನ್ನು ತುಟ್ಟಿ ಕರಿಸುವಂತೆ ಕಾಲ್ಪೆರಳಿನಿಂದ ತಿವಿದನು. “ನಾನು ಸಾಯುವಷ್ಟು ದಡ್ಡನಲ್ಲ. ಇಲ್ಲಿ ನೋಡು, ನನ್ನಲ್ಲಿ ಪ್ರಖ್ಯಾತ ಔಷಧಿಯಿದೆ. ಈ ಔಷಧಿ ನನಗೊಬ್ಬನಿಗೆ ಮಾತ್ರ ಗೊತ್ತು. ನಾನು ಸಾಯದೆ ಇರುವುದರಿಂದ, ಈ ಔಷಧಿಯನ್ನು ನಿನಗೆ ವಿನಿಮಯ ಮಾಡಿಕೊಡುತ್ತೇನೆ.” “ಈ ಔಷಧಿ ಯಾವುದು ?” ಎಂದು ಕಾಮುಕ ಆರ್ಭಟಿಸಿದನು. ಇದೊಂದು ಆಶ್ಚರ್ಯಕರವಾದುದು.” ಯಾವುದೋ ಗುಟ್ಟನ್ನು ಬಿಟ್ಟು ಕೊಡುವವನಂತೆ ಸುಬೆನ್‌ಕೊವ್ ತನ್ನಲ್ಲಿ ತಾನೇ ಚರ್ಚಿಸತೊಡಗಿದನು. “ಹೇಳುತ್ತೇನೆ ಕೇಳು. ನನ್ನ ಔಷಧಿಯ ಸ್ವಲ್ಪ ಭಾಗವನ್ನು ಚರ್ಮದ ಮೇಲೆ ತಿಕ್ಕಿದರೆ, ಆ ಚರ್ಮ ಕಲ್ಲಿನಂತೆ ಅಥವಾ ಕಬ್ಬಿಣವಂತೆ ಗಟ್ಟಿಯಾಗು ತದೆ. ಆಗ ಯಾವ ಶಸ್ತ್ರವೂ ಚರ್ಮವನ್ನು ಸಿಗಿಯಲಾರದು. ದೊಣ್ಣೆಯ ಅತ್ಯಂತ ಜೋರಾದ ಹೊಡೆತವೂ ಯಾವ ಪರಿಣಾಮವನ್ನೂ ಮಾಡಲಾರದು. ಮೂಳೆಯಂತಹ ಚಾಕು ಮಣ್ಣಿನ ಮುದ್ದೆಯಂತಾಗುತ್ತದೆ. ನಿಮ್ಮಿಂದ ನಾವು ಪಡೆದ ಕಬ್ಬಿಣದ ಕತ್ತಿಗಳಿವೆಯಲ್ಲ, ಅವುಗಳಿಂದ ಚುಚ್ಚಿದರೆ ಕತ್ತಿಯ ಬಾಯಿ ಮೊಂಡಾಗುತ್ತದೆ. ಇಂತಹ ಔಷಧಿಯ ಗುಟ್ಟನ್ನು ಹೇಳಿದರೆ ನೀನು ನನಗೆ ಏನನ್ನು ಕೊಡುತ್ತಿ?”