ಪುಟ:ಬಾಳ ನಿಯಮ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ “ನಿನ್ನ ಪ್ರಾಣವನ್ನು ಉಳಿಸುತ್ತೇನೆ.” ಎಂದು ಮಕಾಮುಕ್ ದ್ವಿಭಾಷಿಯ ಮೂಲಕ ಉತ್ತರಕೊಟ್ಟನು. ಸುಬೆನ್ ಕೊವ್ ತಿರಸ್ಕಾರ ಭಾವದಿಂದ ನಕ್ಕನು. “ಮತ್ತು ನೀನು ಸಾಯುವತನಕ ನನ್ನ ಮನೆಯಲ್ಲಿ ಸೇವಕನಾಗಿರ ಬೇಕು.” ಪೋಲೆಂಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸುಬೆನ್ ಕೊವ್ ಮತ್ತಷ್ಟು ತಿರಸ್ಕಾರದಿಂದ ನಕ್ಕನು. ಅವನು ಹೇಳಿದನು, “ಮೊದಲು ನನ್ನ ಕೈ ಕಾಲುಗಳ ಕಟ್ಟನ್ನು ಬಿಚ್ಚಿರಿ. ಆಮೇಲೆ ಮಾತನಾಡೋಣ.” ಮುಖಂಡನ ಆಜ್ಞೆಯಂತೆ ಬೇಡಿಗಳು ಸಡಿಲಗೊಂಡವು. ಆಗ ಸುಬೆನ್ ಕೋವ್ ಹೆದರದೆ ಸಿಗರೇಟನ್ನು ಹಚ್ಚಿ ಸೇದತೊಡಗಿದನು. “ಇದೆಲ್ಲವೂ ಹುಚ್ಚು ಹರಟೆ. ಅಂಥ ಔಷಧಿಯೇ ಇಲ್ಲ ; ಇರಲಾರದು. ಕತ್ತರಿಸುವ ಹರಿತವಾದ ಖಡ್ಡದಲ್ಲಿ ಇರುವಷ್ಟು ಶಕ್ತಿ ಯಾವ ಔಷಧಿಯಲ್ಲೂ ಇಲ್ಲ” ಎಂದನು ಮಕಾಮುಕ್, ಮಕಾಮುಕ್ನಂಥ ಮುಖಂಡ ಯಾವುದರಲ್ಲೂ ನಂಬಿಕೆಯಿಲ್ಲದವನು ; ಆದರೂ ಅವನ ಮನಸ್ಸು ಡೋಲಾಯಮಾನವಾಗಿತ್ತು. ಫರ್ ಕಳ್ಳರು ಮಾಡು ತಿದ್ದ ಬೇಕಾದಷ್ಟು ಇಂದ್ರಜಾಲ ವಿದ್ಯೆಯನ್ನು ನೋಡಿದನು. ಆಮದರಿಂದ ಇದೆಲ್ಲವನ್ನೂ ಸಂಪೂರ್ಣ ನಂಬದಿರಲು ಸಾಧ್ಯವಾಗಲಿಲ್ಲ. “ನಿನ್ನ ಜೀವವನ್ನು ಉಳಿಸುತ್ತೇನೆ. ಮಾತ್ರವಲ್ಲ, ನೀನು ನನ್ನ ಸೇವಕ ನಾಗಿರಬೇಕೆಂಬ ಶಾಸನವನ್ನೂ ತೆಗೆದುಬಿಡುತ್ತೇನೆ” ಎಂದು ಮಕಾನುಕ್ ಘೋಷಿಸಿದನು. “ಇದೊಂದೂ ಸಾಲದು.” ನರಿಯ ಚರ್ಮವನ್ನು ವ್ಯಾಪಾರಮಾಡುವ ರೀತಿಯಲ್ಲಿ ಸುಬೆನ್ ಕೊವ್ ನಿಧಾನವಾಗಿ ತನ್ನ ನಾಟಕವನ್ನಾಡಿದನು. “ಮತ್ತೆ ಹೇಳುತ್ತೇನೆ. ನನ್ನ ಔಷಧಿ ಅಸಾಮಾನ್ಯವಾದುದು. ಅದು ಅನೇಕ ವೇಳೆ ನನ್ನ ಜೀವವನ್ನು ಉಳಿಸಿದೆ. ಇರಲಿ. ಈಗ ನನಗೆ ಬೇಕಾ ದುದು ಇಷ್ಟು ; ನಾಯಿಗಳು ಎಳೆದುಕೊಂಡು ಹೋಗುವ ಸೈಜ್ ಗಾಡಿ ಯೊಂದು, ಜೊತೆಗೆ ಆರು ಜನ ಬೇಟೆಗಾರರು ನನ್ನೊಡನೆ ನದಿ ದಾಟ ಬರಬೇಕು. ಏಕೆಂದರೆ ಅವರಿಂದ ಮಿಕೆಯೊಲವ್ಸ್ಕಿ ಕೋಟೆಯಲ್ಲಿ ನಾನು