ಪುಟ:ಬಾಳ ನಿಯಮ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಒಂದು ದಿನದ ಮಟ್ಟಿಗಾದರೂ ಸುರಕ್ಷಿತನಾಗಿ ನಿದ್ರಿಸುತ್ತಿರಬೇಕು....” ಆದರೆ ಮಕಾಮುಕ್ ಒಪ್ಪದೆ, “ನೀನು ಇಲ್ಲೇ ಇದ್ದುಕೊಂಡು ನಮಗೆಲ್ಲ ಆ ಅದ್ಭುತವಾದ ಇಂದ್ರಜಾಲ ವಿದ್ಯೆಯನ್ನು ಹೇಳಿಕೊಡು” ಎಂದನು. ಸುಬೆಕೊವ್ ತನ್ನ ಭುಜಗಳನ್ನು ಕುಗ್ಗಿಸುತ್ತಾ ಮೌನವಾಗಿದ್ದನು. ಸಿಗರೇಟು ಹೊಗೆ ಬಿಡುತ್ತಾ, ಬಿಗ್ ಇವಾನನ ಸ್ಥಿತಿ ಎಲ್ಲಿಯ ತನಕ ಬಂದಿರ ಬಹುದು ಎಂದು ಕುತೂಹಲದಿಂದ ನೋಡಿದನು. ಮಕಾಮುಕ್ ಇದ್ದಕ್ಕಿದ್ದಂತೆ ಸುಬೆನ್ಕೋವಿನ ಕತ್ತಿನ ಕಡೆ ತೋರಿ ಸುತ್ತಾ, “ಗಾಯದ ಕಲೆ !” ಎಂದು ಕೂಗಿದನು. ನಿಜ ; ಅಲ್ಲಿ ನೀಲಿಗಟ್ಟಿದ ಗುರುತು ಎದ್ದು ಕಾಣುತ್ತಿತ್ತು, ಕಮ್ಚಟಕದ ಕಾದಾಟದಲ್ಲಿ ಸುಬೆನ್ ಕೊವ್ ಚಾಕುವಿನಿಂದ ಏಟು ತಿಂದಿದ್ದನು. ಮಕಾನುಕ್ ಮತ್ತೆ ಹೇಳಿದನು-ಔಷಧಿ ಪ್ರಯೋಜನವಿಲ್ಲ. ಔಷಧಿ ಗಿಂತ ಕತ್ತಿಯ ಹರಿತವಾದ ಧಾರೆಯೆ ಶಕ್ತಿಯುತವಾದುದು.” ಸುಬೆನ್ಕೊವ್, ತಕ್ಕ ಸಮರ್ಥನೆ ಕೊಡಬೇಕಾದ ಸಂದಿಗ್ಧ ಪರಿಸ್ಥಿತಿ ಒದಗಿತು. “ ನನ್ನೊಡನೆ ಹೊಡೆದಾಡಿದವನು ಅತ್ಯಂತ ಬಲಶಾಲಿ....ಆತ ನಿನ ಗಿಂತಲೂ, ನಿಮ್ಮಲ್ಲಿರುವ ಅತಿ ಪ್ರಬಲ ಬೇಟೆಗಾರನಿಗಿಂತಲೂ ಶಕ್ತ ನಾಗಿದ್ದನು....” ಪುನಃ ತನ್ನ ಪಾದರಕ್ಷೆಯಿಂದ ಬಿಗ್ ಇವಾನ್‌ನನ್ನು ಮುಟ್ಟಿದನು. ಜ್ಞಾನವಿಲ್ಲದ ಇವಾನನ ಸ್ಥಿತಿಯೋ ಹೇಳ ತೀರದು. ಅದೊಂದು ಘೋರ ದೃಶ್ಯ. ಆದರೂ ಅಂಗಚ್ಚೇದವಾದ ಶರೀರದಲ್ಲಿ ನರಳಾಡುತಿದ್ದ ಜೀವ ಬಿಟ್ಟು ಹೋಗುವ ಇಷ್ಟವಿಲ್ಲದೆ ಅಂಟಿಕೊಂಡಿತ್ತು. ಅದೂ ಅಲ್ಲದೆ ಅಲ್ಲಿ ತಯಾರಿಸಿದ ಔಷಧಿಯಲ್ಲಿ ಹೆಚ್ಚು ಸತ್ಯವಿರಲಿಲ್ಲ. ಏಕೆಂದರೆ ಆ ಸ್ಥಳದಲ್ಲಿ ನಮಗೆ ಬೇಕಾಗಿದ್ದ ಬೆರೀ ಜಾತಿಯ ಕಾಯಿಗಳು ಸಿಗು ತಿರಲಿಲ್ಲ. ಇಲ್ಲಾದರೋ ಅವು ಬಹಳವಾಗಿರುವುದನ್ನು ನೋಡಿದ್ದೇನೆ, ಆದ್ದರಿಂದ ಇಲ್ಲಿ ತಯಾರಾಗುವ ಔಷಧಿ ಪ್ರಭಾವಯುತವಾಗುವುದರಲ್ಲಿ ಅನುಮಾನವಿಲ್ಲ.” (ಆಗಲಿ, ನೀನು ನದಿಯ ಬಳಿ ಹೋಗಲು ಆವಕಾಶಕೊಡುತ್ತೇನೆ. ಹಾಗೆಯೆ ಸೈಜ್ ಗಾಡಿ ಮತ್ತು ನಾಯಿಗಳು ಜೊತೆಗೆ ಬರುತ್ತವೆ. ಆರು ಜನ ಬೇಟೆಗಾರರು ನಿನ್ನ ರಕ್ಷಣೆಗಾಗಿ ಇರುತ್ತಾರೆ....” ಎಂದು ಮಕಾಮುಕ್ ಅಪ್ಪಣೆ ಕೊಟ್ಟನು.