ಪುಟ:ಬಾಳ ನಿಯಮ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ತಕ್ಷಣ ಪ್ರತಿಭಟನೆಯನ್ನು ತೋರಿಸುವಂಥ ಪ್ರತ್ಯುತ್ತರ ಹೊರಬಂತು“ನೀನು ಬಹಳ ನಿಧಾನಿ. ನನ್ನ ಷರತ್ತುಗಳಿಗೆ ತಕ್ಷಣ ಒಪ್ಪದಿದ್ದ ಕಾರಣ, ನೀನು ಔಷಧಿಯ ಬಗ್ಗೆ ಅಪರಾಧವನ್ನು ಮಾಡಿದಂತಾಯಿತು. ಆದುದರಿಂದ ಇನ್ನು ಹೆಚ್ಚಿಗೆ ಕೊಡಬೇಕಾಗುತ್ತದೆ. ನೂರು ಬೀವರ್‌ ಪ್ರಾಣಿಯ ಚರ್ಮಗಳು? (ಮಕಾಮುಕ್ ಮುಖ ವಿಕಾರ ಮಾಡಿದನು) “ ಒಂದು ನೂರು ಪೌಂಡಿನಷ್ಟು ಒಣ ಮಿಾನುಗಳು” (ಮಿಾನುಗಳು ಹೆಚ್ಚಾಗಿಯೂ ಅಲ್ಪ ಬೆಲೆಗೂ ಸಿಕ್ಕುತಿದ್ದು ದ ರಿಂದ ಮಕಾಮುಕ್ ಒಪ್ಪಿಗೆ ಸೂಚಿಸುವಂತೆ ತಲೆ ತೂಗಿದನು.” ಎರಡು ಸೈಜ್ ಗಾಡಿಗಳು; ಒಂದು ನನಗೂ, ಇನ್ನೊಂದು ತುಸುಳು ಚರ್ಮ ಮಿಾನುಗಳನ್ನು ತುಂಬುವುದಕ್ಕೆ ಬೇಕು. ಮತ್ತೆ ನನ್ನ ಬಂದೂಕವನ್ನು ವಾಪಸು ಕೊಡಬೇಕು. ಇಷ್ಟು ಬೆಲೆಯನ್ನು ನೀನು ಒಪ್ಪದಿದ್ದರೆ, ಸ್ವಲ್ಪ ಹೊತ್ತಿನಲ್ಲೇ ಇನ್ನೂ ಏರುವುದು.” ಯಕಾಗ ಮುಖಂಡನ ಕಿವಿಯಲ್ಲಿ ಗುಟ್ಟಾಗಿ ಏನನ್ನೋ ಹೇಳಿದನು. “ಆದರೆ ನಿನ್ನದು ನಿಜವಾದ ಔಷಧಿಯೆಂದು ನಾನು ಹೇಗೆ ನಂಬುವುದು ?” ಎಂದು ಮಕಾಮುಕ್ ಕೇಳಿದನು. “ಬಹಳ ಸುಲಭವಾಗಿ ತಿಳಿಯಬಹುದು. ಮೊದಲು ನಾನು ಕಾಡಿಗೆ ಹೋಗಬೇಕು” ಎಂದನು ಸುಬೆನ್ ಕೊವ್. ಪುನಃ ಯಕಾಗ ಮಕಾಮುಕನೊಂದಿಗೆ ಪಿಸುಮಾತನಾಡಿದನು. ಆಗ ಮಕಾಮುಕ್ ಸಂಶಯಗೊಂಡು ಅಸಮ್ಮತಿಯನ್ನು ಸೂಚಿಸಿದನು. ಸುಬೆನ್ ಕೊವ್ ಮತ್ತೆ ಪ್ರಾರಂಭಿಸಿದನು-“ನನ್ನೊಡನೆ ಇಪ್ಪತ್ತು ಬೇಟೆ ಗಾರರನ್ನು ಕಳುಹಿಸಿದರೂ ಚಿಂತೆಯಿಲ್ಲ. ಮುಖ್ಯವಾಗಿ, ಔಷಧಿಗೆ ಬೇಕಾಗುವ ಕಾಯಿಗಳನ್ನೂ ಕಂದಮೂಲಗಳನ್ನೂ ನಾನು ತರಲೇಬೇಕು. ಆಮೇಲೆ ನೀವು ಮಾಡುವ ಏರ್ಪಾಟಿನ ತನಕ ಕಾಯುತ್ತೇನೆ. ಎರಡು ಸ್ಟೇಜ್ಗಾಡಿ ಗಳನ್ನು ತನ್ನಿ, ಅದರ ಮೇಲೆ ಮಾನು, ಬೀವರ್‌ ಚರ್ಮ, ಬಂದೂಕಗಳನ್ನು ತುಂಬಿರಿ, ನನ್ನೊಡನೆ ಬರುವ ಆರು ಜನ ಬೇಟೆಗಾರರನ್ನು ಸಿದ್ದಪಡಿಸಿರಿ. ಆಗ ಔಷಧಿಯನ್ನು ಕತ್ತಿನ ಮೇಲೆ ತಿಕ್ಕಿಕೊಳ್ಳುತ್ತೇನೆ. ಮತ್ತೆ ಬಗ್ಗಿ ನನ್ನ ಕತ್ತನ್ನು ಮರದ ಕೊರಡಿನ ಮೇಲೆ ಇಡುತ್ತೇನೆ. ಆ ಸಮಯದಲ್ಲಿ ನಿಮ್ಮಲ್ಲಿರುವ ಅತಿ ಪ್ರಬಲನಾದ ಬೇಟೆಗಾರ ಕೊಡಲಿಯನ್ನು ತೆಗೆದುಕೊಂಡು ನನ್ನ ಕತ್ತಿನ ಮೇಲೆ ಮೂರು ಬಾರಿ ಹೊಡೆಯಲಿ. ಏಕೆ ? ನೀನೇ ಮೂರು ಬಾರಿ ಕೊಡಲಿ ಪೆಟ್ಟನ್ನು ಕೊಡಬಹುದು! » ಮಕಾಮುಕನು ತೆರದ ಬಾಯನ್ನು ಮುಚ್ಚದೆ ನಿಂತಿದ್ದನು. ಫರ್ ಕಳ್ಳರ