ಪುಟ:ಬಾಳ ನಿಯಮ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ “ ಅವಳೊಡನೆ ನದಿ ದಾಟಿ ಹೋಗುತ್ತೇನೆ. ನಿನ್ನ ಮಗಳು ನನ್ನ ಉತ್ತಮ ಹೆಂಡತಿಯಾಗಬಲ್ಲಳು. ನನ್ನ ಔಷಧಿಯ ಘನತೆಗೆ ತಕ್ಕಂತೆ ನಿಮ್ಮ ವಂಶದ ಸಂಬಂಧ ಬೆಳೆಸುವುದು ಗೌರವ ತರತಕ್ಕುದು.” ಎನ್ನುತ್ತಾ ಹುಡು ಗಿಯ ಕಡೆ ಶೋಧಕ ದೃಷ್ಟಿಯನ್ನು ಬೀರಿದನು. ಪುನಃ ಆ ಗಾಯಕಿ ನರ್ತಕಿಯನ್ನು ನೆನಪಿಗೆ ತಂದುಕೊಂಡನು. ಅವಳು ಹೇಳಿಕೊಟ್ಟ ಹಾಡನ್ನು ಅಸ್ಪಷ್ಟವಾಗಿ ಹಾಡಿದನು. ಯಾರದೋ ಜೀವನದ ಘಟನೆಗಳಂತೆ ತನ್ನ ಹಿಂದಿನ ಉತ್ಸಾಹೀ ಜೀವನವನ್ನು ಪ್ರತ್ಯೇಕಿಸಿ ನೋಡಿ ದನು. ಮುಖಂಡನು ಇದ್ದಕ್ಕಿದ್ದಂತೆ ಮೌನವನ್ನು ಭೇದಿಸಿದನು. ಅಂತೆಯೆ ಸುಬೇನ್ಕೊವ್ ಎಚತನು. “ ಹೇಳಿದಂತೆಯೇ ಆಗಲಿ; ಹುಡುಗಿ ನಿನ್ನೊಡನೆ ಬರುತ್ತಾಳೆ. ಆದರೆ ಒಂದು ಅಂಶ ತಿಳಿದಿರಲಿ : ಮೂರು ಬಾರಿಯೂ ಕೊಡಲಿಯಿಂದ ನಿನ್ನ ಕತ್ತಿನ ಮೇಲೆ ಹೊಡೆಯುವವನು ನಾನೇ ” ಎಂದನು ಮಕಾಮುಕ್. ಇಲ್ಲದ ಆತಂಕವನ್ನು ವ್ಯಕ್ತಪಡಿಸುತ್ತಾ, “ ಆದರೆ ನಾನು ಪ್ರತಿ ಸಾರಿಯೂ ಔಷಧವನ್ನು ಲೇಪಿಸಿಕೊಳ್ಳ ಬೇಕು....” ಎಂದನು ಸುಟೆನ್‌ಕೊವ್.

  • ಪ್ರತಿ ಹೊಡೆತವಾದ ಮೇಲೂ ನೀನು ಔಷಧಿಯನ್ನು ಹಚ್ಚಿಕೊಳ್ಳ ಬಹುದು. ಇಗೋ, ನೀನು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವ ಬೇಟೆಗಾರರು ಬಂದಿದ್ದಾರೆ. ಇನ್ನು ಕಾಡಿಗೆ ಹೋಗಿ ಔಷಧಿಗೆ ಬೇಕಾದುದನ್ನು ಶೇಖರಿಸು.”

ಸುಬೆನ್ ಕೊವ್ ನಾವಿನ ದವಡೆಯಲ್ಲಿ ಸಿಕ್ಕಿದ್ದರೂ ಧೈರ್ಯವಾಗಿ ವ್ಯವ ಹರಿಸುವ ರೀತಿಯನ್ನು ನೋಡಿ ಅವನ ಔಷಧಿಯಷ್ಟು ಘನವಾದುದು ಮತ್ತೊ೦ ದಿರಲಾರದೆಂದು ನಕಾಮುಕನು ಭಾವಿಸಿದನು. ಸುಬೆಕೊವ್‌ನ ಅತಿ ದುರಾಶೆಯ ಬೇಡಿಕೆಗಳು ಮಕಾಮುಕನಿಗೆ ಹಿತವೆನಿಸಿತು. ಅಂತೆಯೇ ಔಷ ಧಿಯ ಶಕ್ತಿಯ ಬಗ್ಗೆ ವಿಶ್ವಾಸ ಹುಟ್ಟಿತು. ಸುಬೆನ್‌ಕೌವ್ ತನ್ನ ಪರಿವಾರದೊಡನೆ ಸ್ಪೂನ್ ಮರಗಳ ಮಧ್ಯೆ ಮರೆಯಾದನು. ಆಗ ಮಕಾಮುಕನ ಕಿವಿಯಲ್ಲಿ ಯಕಾಗ “ ಜೊತೆಗೆ ಇನ್ನೊಂದು ವಿಷಯ ; ಔಷಧಿಯ ತಯಾರಿ ತಿಳಿದಮೇಲೆ ನೀನು ಸುಲಭ ವಾಗಿ ಅವನನ್ನು ತೀರಿಸಬಹುದು ! ” ಎಂದನು. ಮಕಾಮುಕ್ ತರ್ಕಿಸಿದನು. “ ಅದು ಹೇಗೆ ಸಾಧ್ಯ ? ಔಷಧಿ ಅವ