ಪುಟ:ಬಾಳ ನಿಯಮ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ನಲ್ಲಿರುವಾಗ ನಾನು ಅವನನ್ನು ನಾಶಪಡಿಸುವ ಸಂಭವವಿಲ್ಲ.” ಆದರೆ ಯಕಾಗ ಹೇಳಿದನು. ಅವನು ಮೈಗೆಲ್ಲ ಔಷಧಿ ಹಚ್ಚಿ ಕೊಳ್ಳು ವುದಿಲ್ಲ. ಆದ್ದರಿಂದ ಹಚ್ಚಿಕೊಳ್ಳದ ಭಾಗವನ್ನು ಗಮನಿಸಬೇಕು. ಅದು ಕಿವಿಗಳೆಂದೇ ಇಟ್ಟುಕೊಳ್ಳೋಣ. ಇನ್ನೂ ಒಳ್ಳೆಯದಾಯಿತು ; ಈಟಿಂ ದನ್ನು ಈ ಕಿವಿಯಿಂದ ಆ ಕಿವಿಯ ತನಕ ತೂರಿಸಿಬಿಡಬಹುದು. ಅಥವಾ ಕಣ್ಣು ಗಳಿರಬಹುದು. ಏಕೆಂದರೆ ಅಂಥ ಔಷಧಿಯನ್ನು ಕಣ್ಣಿನ ಮೇಲಂತೂ ತಿಕ್ಕಿಕೊಳ್ಳಲಾರ....”

  • ಮುಖಂಡನು ತಲೆದೂಗಿದನು. “ ಯಕಾಗ, ನೀನು ನಿಜವಾಗಿಯೂ ಬುದ್ಧಿವಂತ. ಅವನಲ್ಲಿ ಇನ್ಯಾವ ಇಂದ್ರಜಾಲ ವಿದ್ಯೆ ಇಲ್ಲದಿದ್ದ ಪಕ್ಷದಲ್ಲಿ ನಾವು ಅವನನ್ನು ಖಂಡಿತವಾಗಿಯೂ ತೀರಿಸಿಬಿಡಬಹುದು.”

ಸುಬೆನ್ಕೊನ್ ಔಷಧಿಗೆ ಬೇಕಾದ ಸಾಮಗ್ರಿಗಳನ್ನು ಶೇಖರಿಸುವುದರಲ್ಲಿ ಹೆಚ್ಚು ಕಾಲ ವ್ಯಯಮಾಡಲಿಲ್ಲ. ಕೈಗೆ ಯಾವುದು ಸಿಕ್ಕಿತೋ ಅದನ್ನು ಸಂಗ್ರ ಹಿಸಿದನು. ಸ್ಕೂಸ್ ಮುಳ್ಳುಗಳು, ವಿಲೋ ಮರದ ತೊಗಟೆ, ಭೂರ್ಜದ ತುಂಡು, ಸ್ವಲ್ಪ ನಳ್ಳಿಗಳು ಮೊದಲಾದುವನ್ನು ಬೇಟೆಗಾರರು ಹಿಮವನ್ನ ಗೆದು ತೆಗೆಯಬೇಕಾಯಿತು. ಜೊತೆಗೆ ಚಳಿಯ ಹೊಡೆತದಿಂದ ಸುರುಟಿಹೋಗಿದ್ದ ಕೆಲವು ಕಂದ ಮೂಲಗಳನ್ನು ಆಯ್ದು ಸುಬೆನ್ಕೌವ್ ತಿಬಿರದ ಕಡೆ ತಿರು ಗಿದನು. ನುಬೆನ್ಕೊನ್ ತಂದಿದ್ದ ಎಲ್ಲ ರೀತಿಯ ಘಟಕಾಂಶಗಳನ್ನು ಕುದಿಯುವ ನೀರಿನ ಮಡಕೆಗೆ ಸುರಿಯುತ್ತಾ ಬಂದನು. ಮಕಾಮುಕ್ ಮತ್ತು ಯಕಾಗ ಇಬ್ಬರೂ ಅವನ ಹತ್ತಿರ ಬಗ್ಗಿ ನಿಂತು ಸೂಕ್ಷ್ಮವಾಗಿ ನೋಡುತ್ತಿದ್ದರು. “ ಹುಷಾರಾಗಿರಬೇಕು. ಮೊದಲು ನಳ್ಳಿಗಳನ್ನು ಹಾಕಬೇಕು. ಆಮೇಲೆ? ಎರಡನೆಯದಾಗಿ, ಮನುಷ್ಯನ ಬೆರಳು. ಆದ್ದರಿಂದ, ಯಾಗ, ನಿನ್ನ ಬೆರ ಳನ್ನು ಕತ್ತರಿಸಲು ಅವಕಾಶ ಕೊಡು....” ಎಂದನು ಸುಬೆನ್ಕೌವ್, ಆದರೆ ಯಕಾಗ ಕೈಗಳನ್ನು ಹಿಂದಕ್ಕೆಳೆದುಕೊಂಡು ಮುಖ ಗಂಟು ಹಾಕಿದನು. “ ಏನಿಲ್ಲ ; ಸಣ್ಣ ಬೆರಳು ಮಾತ್ರ” ಎಂದು ಸುಬೆನ್‌ಕೌವ್ ಮತ್ತೆ ಬೇಡಿಕೊಂಡನು. “ಯಕಾಗ, ಅವನಿಗೆ ನಿನ್ನ ಬೆರಳನ್ನು ಕೊಡು” ಎಂದು ಮಕಾನುಕ್ ಅಪ್ಪಣೆಮಾಡಿದನು.