ಪುಟ:ಬಾಳ ನಿಯಮ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಖ ಭಂಗ ೨೫

  • ಬೇಕಾದಷ್ಟು ಬೆರಳುಗಳು ಸತ್ತಲೂ ಇಲ್ಲವೇ ? ಈ ಹಿಮದಲ್ಲಿ ಎಷ್ಟು ಜನರನ್ನು ಸಾಯುವ ತನಕ ಹೊಡೆದು ಬೀಳಿಸಿಲ್ಲ? ” ಎಂದು ಯಕಾಗ ಆ ಕಡೆ ಸೂಚಿಸಿದನು.

ಸುಬೆನ್ಕೌವ್ ವಿರೋಧಿಸುತ್ತ, “ ನನಗೆ ಬೇಕಾದುದು ಜೀವಂತ ವ್ಯಕ್ತಿಯ ಬೆರಳು ” ಎಂದನು. “ ಹಾಗಿದ್ದರೆ ಜೀವಂತ ವ್ಯಕ್ತಿಯ ಬೆರಳನ್ನೇ ಒದಗಿಸುತ್ತೇನೆ' ಎನ್ನುತ್ತಾ ಯಕಾಗ ಬಿಗ್ ಇವಾನನ ಬೆರಳನ್ನು ಕತ್ತರಿಸಿದನು; “ ಬಿಗ್ ಇವಾನ್ ಇನ್ನೂ ಸತ್ತಿಲ್ಲ. ಅವನದು ಒಳ್ಳೆಯ ಬೆರಳು, ಏಕೆಂದರೆ ಅದು ದಪ್ಪ ನಾಗಿದೆ.” ಎಂದು ಇವಾನನ ರಕ್ತಮಯ ದೇಹವನ್ನು ವಿಜಯೋತ್ಸಾಹದಿಂದ ನುಬೆನ್ಕೌವ್‌ನ ಪಾದದ ಮೇಲೆ ಬೀಳುವಂತೆ ಒದ್ದನು. ಮಡಕೆಯ ಕೆಳಗೆ ಉರಿಯುತ್ತಿದ್ದ ಬೆಂಕಿಗೆ ಆ ಬೆರಳನ್ನು ಎಸೆದು ಸುಬೆಕೊವ್ ಹಾಡಲು ಪ್ರಾರಂಭಿಸಿದನು. ಅದೊಂದು ಫ್ರೆಂಚರ ಪ್ರಣಯ ಗೀತೆ. ಎಲ್ಲವೂ ಒಂದು ಹದಕ್ಕೆ ಬರುತ್ತಿದ್ದಂತೆ, ಅವನು ಗಂಭೀರವಾಗಿ ಹಾಡುತ್ತಿದ್ದನು. “ ನೋಡು, ಈ ರೀತಿ ಹಾಡದಿದ್ದರೆ, ಔಷಧಿ ಸತ್ವಯುತವಾಗುವುದಿಲ್ಲ. ಹಾಡಿನ ಪದಗಳು ಮುಖ್ಯ ಶಕ್ತಿದಾಯಕವಾದುವು....ಸರಿ, ಆಗಲೇ ಸಿದ್ದ ವಾಯಿತು.” ಎಂದು ಸುಬೆನ್ಕೌವ್ ವಿವರಿಸಿದನು. ಮಕಾಮುಕ್, “ ಪದಗಳನ್ನು ನಿಧಾನವಾಗಿ ಹೇಳು. ಏಕೆಂದರೆ ನಾನು ಅದನ್ನು ಕಲಿಯಬೇಕು.” ಎಂದನು. - “ ಇಲ್ಲ; ನನ್ನ ಪರೀಕ್ಷೆಯಾಗುವ ತನಕ ಹೇಳುವುದಿಲ್ಲ. ಮೂರು ಬಾರಿಯೂ ನನ್ನ ಕತ್ತನ್ನು ಕತ್ತರಿಸದೆ ಕೊಡಲಿಯು ಹಿಂದಕ್ಕೆ ಹಾರಿದಾಗ, ನಾನು ನಿನಗೆ ಪದಗಳ ಗುಟ್ಟನ್ನು ಹೇಳಿಕೊಡುತ್ತೇನೆ.” “ ಆದರೆ ಇದು ಒಳ್ಳೆಯ ಔಷಧಿಯಲ್ಲದಿದ್ದರೆ ? ” ಎಂದು ಮಕಾಮುಕ್ ಕಳವಳಗೊಂಡನು. ಸುಬೆನ್‌ಕೌವ್ ಕೋಪದಿಂದ ತಿರುಗಿಬಿದ್ದನು. “ ನನ್ನ ಔಷಧಿ ಯಾವತ್ತೂ ಸರಿಯಾದುದು. ಒಂದು ವೇಳೆ ಅತ್ಯುತ್ತಮ ವಾಗಿಲ್ಲದಿದ್ದರೆ, ಇತರರಂತೆ ನನಗೂ ನೀನು ಶಿಕ್ಷೆ ವಿಧಿಸಬಹುದು ; ಇವಾನ ನಿಗೆ ಮಾಡಿರುವಂತೆ ನನ್ನನ್ನೂ ತುಂಡು ತುಂಡಾಗಿ ಕತ್ತರಿಸಬಹುದು........ ಔಷಧಿ ತಣ್ಣಗಾಗುತ್ತಿದೆ. ಇದರ ಸ್ವಲ್ಪ ಭಾಗವನ್ನು ಕತ್ತಿನ ಮೇಲೆ ಸವರಿ