ಪುಟ:ಬಾಳ ನಿಯಮ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಏನೂ ಮುಟ್ಟಿರಲಿಲ್ಲ. ಕಳವಳದಿಂದ ಗಂಡನನ್ನೇ ನೋಡುತ್ತ ನಿಶ್ಯಬ್ದವಾಗಿ ಕುಳಿತಿದ್ದಳು. ತೆಳ್ಳನೆಯ ಬಾಡಿಹೋಗಿದ್ದ ಹೆಂಗಸು ; ಕಾರ್ಮಿಕವರ್ಗದಿಂದ ಬಂದವಳು. ಆದರೂ ಒಂದು ಕಾಲದಲ್ಲಿ ಇದ್ದ ಸೌಂದರ್ಯದ ಛಾಯೆ ಇನ್ನೂ ಮುಖದಲ್ಲಿತ್ತು. ತೊಟ್ಟಿಯ ಆ ಕಡೆ ವಾಸಿಸುತ್ತಿದ್ದ ನೆರೆಯವರಿಂದ ಹಿಟ್ಟನ್ನು ಸಾಲ ತಂದಿದ್ದಳು. ಉಳಿದಿದ್ದ ಎರಡು ಅರ್ಧ ಪೆನ್ನಿಗಳು ರೊಟ್ಟಿಗಾಗಿ ಖರ್ಚಾಗಿತ್ತು.

  • ಟಾಮ್ ಕಿಂಗ್ ಶಿಥಿಲವಾದ ಕುರ್ಚಿಯ ಮೇಲೆ ಕಿಟಕಿಯ ಹತ್ತಿರ ಕುಳಿ ತಿದ್ದನು. ಅವನ ದೇಹಭಾರಕ್ಕೆ ಕುರ್ಚಿಯ ಕಾಲು ಜಗ್ಗುತಿತ್ತು. ಯಾಂತ್ರಿಕ ವಾಗಿ ಬಾಯಿಗೆ ಪೈಪ್ ಇಟ್ಟು ಕೊಂಡನು. ಆದರೆ ಜೇಬಿಗೆ ಕೈ ಹಾಕಿದಾಗ ಹೊಗೆಸೊಪ್ಪು ಇರಲಿಲ್ಲ. ಮುಖ ಗಂಟಾಯಿತು. ಮರೆವಿಗಾಗಿ ತನ್ನನ್ನು ತಾನೆ ಬೈದುಕೊಂಡನು. ಪೈಪನ್ನು ಆ ಕಡೆ ತೆಗೆದಿಟ್ಟನು. ಅವನು ಬಹು ನಿಧಾನವಾಗಿ ಚಲಿಸುತ್ತಿದ್ದನು. ಮಾಂಸಖಂಡಗಳ ಭಾರದಿಂದಲೇ ಕುಸಿದವ ನಂತೆ ಎಡವುತಿದ್ದನು. ದೇಹವೇನೊ ಗಟ್ಟಿಮುಟ್ಟಾಗಿತ್ತು; ಮನಸ್ಸಿಗೆ ಏನೂ ನಾಟದವನಂತೆ ನೋಡುತಿದ್ದನು. ಕಡುಬಡವನಾಗಿದ್ದರೂ ದೃಢಕಾಯನೂ ತೇಜೋವಂತನೂ ಆಗಿದ್ದನು. ಅವನ ದೊರಗು ಬಟ್ಟೆ ಹಳೆಯದಾಗಿ ಸಿಕ್ಕಾ ಪಟ್ಟೆ ಜೋತುಬಿದ್ದಿತ್ತು. ಹಳೆಯ ಶೂಗೆ ದಪ್ಪನೆಯ ಹೊಸಚರ್ಮ ಹೊಡೆಸಿ ಧ್ವನ; ಈಗ ಅದೇ ಭಾರವಾಗಿತ್ತು. ಅಗ್ಗವಾಗಿ ಎರಡು ಶಿಲಿಂಗಿಗೆ ಸಿಕ್ಕಿದ್ದ ಹತ್ತಿಯ ಅಂಗಿಯನ್ನು ಧರಿಸಿದ್ದನು. ಆಗಲೇ ಕಾಲರಿನ ಹೊಲಿಗೆ ಬಿಟ್ಟು ಹೋಗಿತ್ತು. ಬಟ್ಟೆಯ ಮೇಲೆ ಅಳಿಸಲಾಗದ ಬಣ್ಣದ ಕಲೆಗಳಿದ್ದುವು.

ಆದರೆ ಟಾಂಕಿಂಗನ ಮುಖ ಮಾತ್ರ ತನ್ನ ಹಿಂದಿನ ಸ್ಥಿತಿಯನ್ನು ಸಾರು ವಂತಿತ್ತು. ಮುಷ್ಠಿ ಕಾಳಗದಲ್ಲಿ ಭಾಗವಹಿಸುವವನ ಆದರ್ಶಯುತ ಮುಖ ತೇಜಸ್ಸು ಅವನಲ್ಲಿತ್ತು. ನಿಜ; ಟಾಂಕಿಂಗ್ ಮಲ್ಲಯುದ್ಧ ಮಾಡುತ್ತಾ ಎಷ್ಟೋ ವರ್ಷಗಳಕಾಲ ಜೀವಿಸಿದ್ದನು. ಅವನೊಬ್ಬ ಕಾದಾಟದ ಮೃಗ, ಅದಕ್ಕೆ ತಕ್ಕಂತೆ ಎಲ್ಲ ಅಂಶಗಳನ್ನೂ ಬೆಳೆಸಿಕೊಂಡಿದ್ದನು. ನಯವಾಗಿ ಕೌರಮಾಡಿ ಕೊಂಡಿದ್ದರಿಂದ ಆ ಲಕ್ಷಣಗಳು ಕಾಣುತಿದ್ದವು. ಎಷ್ಟಾದರೂ ಅವು ಇಳಿಮುಖ ವಾಗುತ್ತಿದ ಚಿಹ್ನೆಗಳು. ತುಟ ವಿಕಾರವಾಗಿತ್ತು. ಬಾಯಿಯಂತೂ ಮುಖ ದಲ್ಲಿನ ಸೀಳುಗಾಯದಂತಿತ್ತು. ದವಡೆಯು ಅಸಹ್ಯವಾಗಿತ್ತು. ಪೊದೆಗೂದ ಲಿನ ವಕ್ರರೇಖೆಯ ಹುಬ್ಬಿನ ಕೆಳಗೆ, ಕಣ್ಣುಗಳು ಯಾವುದನ್ನೂ ಸೂಚಿಸದೆ ನಿಧಾನವಾಗಿ ರೆಪ್ಪೆ ಬಡಿಯುತಿದ್ದುವು. ಕಣ್ಣುಗಳು ತೂಕಡಿಸುತಿದ್ದರೂ ಸಿಂಹ.