ಪುಟ:ಬಾಳ ನಿಯಮ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ಬಾಳ ನಿಯಮ ಸದೃಶವಾಗಿದ್ದು ವು. ಉಬ್ಬಿದ ಮುಂದೆಲೆಯ ಹಿಂದೆ ಕೂದಲು ದಟ್ಟವಾಗಿ ಬೆಳೆದಿತ್ತು. ಎರಡು ಬಾರಿ ನುಜ್ಜುಗುಜ್ಜಾಗಿದ್ದ ಮೂರು ಲೆಕ್ಕವಿಲ್ಲದ ಹೊಡೆತ ಗಳಿಂದ ವಿವಿಧ ರೂಪಗಳನ್ನು ತಾಳಿತ್ತು. ಕಿವಿ ಕಾಲಿಫ್ಲವರಿನಂತೆ ಉಬ್ಬಿ ಕೊಂಡಿತ್ತು. ಗಡ್ಡ ಬೋಳಿಸಿದ್ದರೂ ಪುನಃ ಚಿಗುರಿ, ಮುಖದ ಮೇಲೆ ಕಪ್ಪು ನೀಲಿಯ ಛಾಯೆಯು ತೋರುತಿತ್ತು, ಒಟ್ಟಿನಲ್ಲಿ, ಕತ್ತಲ ಅಥವಾ ಏಕಾಂತ ಸ್ಥಳಗಳಲ್ಲಿ ಅವನ ಮುಖ ನೋಡಿ ದರೆ ಹೆದರಿಕೆಯಾಗುತಿತ್ತು. ಆದರೂ ಬಾಂಕಿಂಗ್ ಕೊಲೆಪಾತಕಿಯಲ್ಲ. ಎಂದೂ ಅಪರಾಧವನ್ನು ಮಾಡಿದವನೇ ಅಲ್ಲ. ಮಲ್ಲಯುದ್ಧರಂಗದ ಹೊರಗೆ ತೊಂದರೆಪಡಿಸಿ ಯಾರಲ್ಲೂ ಜಗಳವಾಡಿಲ್ಲ. ಅವನು ಮುಷ್ಟಿ ಕಾಳಗವನ್ನು ಜೀವನದ ವೃತ್ತಿಯಾಗಿ ಅವಲಂಬಿಸಿದ್ದನು. ಕಾದಾಟದ ಬಿರುಸು, ಪ್ರದರ್ಶನ ಗಳಿಗೆ ಮಾತ್ರ ಮಾಸಲಾಗಿತ್ತು. ಯುವಕನಾಗಿದ್ದಾಗ ಬೇಕಾದಷ್ಟು ಹಣ ಸಂಪಾದಿಸಿದ್ದನು. ಆಗಲಂತೂ ತನ್ನ ಹಿರಿಮೆಗಾಗಿಯೇ ಮುಕ್ತಹಸ್ಯನಾಗಿ ಖರ್ಚುಮಾಡುತಿದ್ದನು. ಅವನು ಯಾರ ಮೇಲೂ ದ್ವೇಷ ಸಾಧಿಸಿವವನಲ್ಲ. ಅಂತೆಯೆ ದ್ವೇಷಿಗಳು ಅತ್ಯಲ್ಪ. ಹೊಡೆದಾಡುವುದೊಂದೇ ಅವನ ಉದ್ಯಮ ವಾಗಿತ್ತು. ರಂಗದಲ್ಲಿ ಗಾಯಗೊಳಿಸುವುದು, ಅಥವಾ ಅಂಗಹೀನಗೊಳಿಸುವುದು ಸಾಮಾನ್ಯವಾಗಿತ್ತು. ಅದರಲ್ಲಿ ದ್ವೇಷೋದ್ರೇಕವಿರಲಿಲ್ಲ. ಒಬ್ಬನನ್ನು ಮತ್ತೊಬ್ಬ ಹೊಡೆದು ಬಿಸಾಡುವುದನ್ನು ನೋಡಲು ಜನ ದುಡ್ಡು ಕೊಟ್ಟು ಸೇರುತಿದ್ದರು. ಗೆದ್ದವನು ಹಣದ ಚೀಲವನ್ನು ಒಯ್ಯುತ್ತಿದ್ದನು. ಟಾಂಕಿಂಗ್ ಇಪ್ಪತ್ತು ವರ್ಷದ ಹಿಂದೆ ಗೌಜರ್‌ನನ್ನು ಎದುರಿಸಿದ್ದನು-ನ್ಯೂಕ್ಯಾಸಲ್ ಪಂದ್ಯದಲ್ಲಿ ಗೌಜರ್‌ನ ಹಲ್ಲುಮುರಿದು ನಾಲ್ಕು ತಿಂಗಳ ಹಿಂದೆ ಸರಿಯಾಗಿದ್ದ ವಿಷಯ, ಟಾಂಕಿಂಗ್ ತಿಳಿದಿದ್ದನು. ಆ ಹಲ್ಲಿಗೇ ಗಮನವಿಟ್ಟು ಒಂಬತ್ತನೇ ರೌಂಡಿನಲ್ಲಿ ಮತ್ತೆ ಮುರಿದನು. ಹಾಗೆ ಮಾಡಿದ್ದು ಪಂದ್ಯದ ಹಣಗಳಿಸುವುದಕ್ಕೇ ಹೊರತು, ಗೌಜರ್‌ ಮೇಲಿನ ದ್ವೇಷದಿಂದಲ್ಲ. ಅದು ಇಬ್ಬರೂ ತಿಳಿದು ಆಡಿದ ಕಾದಾಟ. ಟಾಂಕಿಂಗ್ ಮಿತಭಾಷಿಯಾಗಿದ್ದನು. ವ್ಯಾಕುಲಿತನಾಗಿ ತನ್ನ ಕೈಗಳನ್ನೇ ನೋಡಿಕೊಳ್ಳುತ್ತ ಕಿಟಕಿಯ ಹತ್ತಿರ ಕುಳಿತಿದ್ದನು. ಕೈಗಳಲ್ಲಿ ರಕ್ತನಾಳಗಳು ಉಬ್ಬಿದ್ದವು. ಗೆಣ್ಣುಗಳು ಜಜ್ಜಿ ಹೋಗಿ ವಿಕಾರಗೊಂಡಿದ್ದವು. ಅದರಿಂದಲೇ ಅವು ಯಾವುದಕ್ಕೆ ಸಾಧನವಾಗಿತ್ತೆಂದು ತಿಳಿಯಬಹುದಾಗಿತ್ತು. ಅವುಗಳ ಮಹತ್ವವನ್ನೂ ತಿಳಿದಿದ್ದನು. ತನ್ನ ಹೃದಯ ಹೆಚ್ಚು ರಕ್ತವನ್ನು ಅಭಿದಮನಿ ಗಳ ಮೂಲಕ ಜೋರಾದ ಒತ್ತಡದಲ್ಲಿ ಚೆಲ್ಲಿತ್ತು. ಇನ್ನು ಮೇಲೆ ಆ ರೀತಿ ಆಗದು.