ಪುಟ:ಬಾಳ ನಿಯಮ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ರಕ್ತಚಲನೆಯ ಒತ್ತಡ ಕೊನೆ ಮುಟ್ಟಿತ್ತು. ಅದರೊಡನೆ ತನ್ನ ಸಹನ ಶೀಲವೂ ಹೋಗಿತ್ತು. ಈಗ ಅವನಿಗೆ ಬೇಗನೆ ಆಯಾಸವಾಗುತ್ತದೆ. ಹಿಂದೆ ಇಪ್ಪತ್ತು ರೌಂಡುಗಳ ರಭಸದ ಹೋರಾಟ ಸುಲಭವಾಗಿತ್ತು. ಇಕ್ಕುಳದ ಮಧ್ಯದಲ್ಲಿ ಸಿಕ್ಕಿಕೊಂಡಂತೆ, ಎಚ್ಚರಿಕೆಯ ಗಂಟೆಯನ್ನೂ ಲೆಕ್ಕಿಸದೆ, ಮತ್ತೆ ಮತ್ತೆ ಕಾಳ ಗಕ್ಕೆ ತೊಡಗುತ್ತಿದ್ದನು. ಒಂದರಮೇಲೊಂದು ಭಯಂಕರ ಆಟ ನಡೆಸಿದ್ದನು. ತಾನು ಒಮ್ಮೆ ಹಿಮ್ಮೆಟ್ಟಿದರೆ, ಎದುರಾಳಿಯನ್ನು ಅದೇ ಜಿದ್ದಿನಿಂದ ಸಿಗಿದು ಹಗ್ಗದ ಮೇಲೆ ಬೀಳುವಂತೆ ಮಾಡುತಿದ್ದನು. ಒದೆತಗಳು ಮುಖ್ಯಿಗೆ ಮುಯ್ಯ ತೀರಿಸುತಿದ್ದವು. ಕಡೆಯ ಇಪ್ಪತ್ತನೆ ಕೌಂಡಿನಲ್ಲಂತೂ ಜನರ ಕುತೂಹಲ ಹೇಳತೀರದು. ಅಷ್ಟೇ ಕುತೂಹಲದಿಂದ ತನ್ನ ರಕ್ತವೂ ಚಲಿಸುತಿತ್ತು. ಆ ಸಮಯದಲ್ಲಿ ಉಬ್ಬುತ್ತಿದ್ದ ರಕ್ತನಾಳಗಳು ಮತ್ತೆ ಇಳಿಯುತಿದ್ದುವು. ಆದರೂ ತಿಳಿಯದ ಹಾಗೆ ಸ್ವಲ್ಪ ಸ್ವಲ್ಪವಾಗಿ ವಿಕಾರಹೊಂದುತಿತ್ತು. ಬೆನ್ನಿ ಜೋನ್ಸ್'ನ ತಲೆಯ ಮೇಲೆ ಮೊದಲ ಗೆಣ್ಣಿನಿಂದ ಹೊಡೆದಾಗ, ತಾನು ಯುವಕನಾಗಿದ್ದನು. ಕೈಗಳು ಶಕ್ತಿಯುತವಾಗಿದ್ದುವು. ಬೆನ್ನಿ ಜೋನ್ಸ್ ಎಂಬುವನೇ ಮುಂದೆ “ವೆಲ್ಸ್ ಟೆರರ್' ಎಂದು ಪ್ರಸಿದ್ಧನಾದವನು. ಹಸಿವಿನ ಬಾಧೆ ಮತ್ತೆ ಮರುಕಳಿಸಿತು.

  • ಬಿ ಮಿ, ಮಾಂಸದ ಚೂರೂ ಇಲ್ಲವೇ ! ” ಎಂದು ಕೂಗುತ್ತ ಮುಷಿ, ಬಿಗಿಹಿಡಿದನು. ಒಳಗಿದ್ದ ಮಾತನ್ನು ತಡೆಯಲು ಸಾಧ್ಯವಾಗಲಿಲ್ಲ.

ತಪ್ಪು ಒಪ್ಪಿಕೊಳ್ಳುವವಳಂತೆ ಅವನ ಹೆಂಡತಿ ಹೇಳಿದಳು. “ ಬರ್ಕ್ ನಾಲೇ ಇಬ್ಬರನ್ನೂ ಕೇಳಿಯಾಯಿತು.” “ ಅವರು ಕೊಡಲಿಲ್ಲವೇ ? ” ಎಂದು ಟಾಮ್ ಕಿಂಗ್ ಒತ್ತಾಯಪಡಿಸಿ ದನು. - “ ಅರ್ಧಪೆನ್ನಿಯಷ್ಟೂ ಇಲ್ಲವಂತೆ. ಬರ್ಕ್ ಹೇಳಿದ” ಅವಳು ತಡ ವರಿಸಿದಳು, “ ಹೇಳು ! ಇನ್ನೇನು ಹೇಳಿದ ?”

  • ಹಿಂದಿನಂತೆ, ಇವತ್ತು ರಾತ್ರಿ ನೀನು ಸ್ಯಾಂಡಲ್‌ನನ್ನು ಹೇಗೆ ಮಾರಿಸ ಬಲ್ಲೆ ಎಂದು ಯೋಚಿಸುತಿದ್ದಾನೆ....”

ಟಾಮ್‌ಕಿಂಗ್ ಏನೋ ಗೊಣಗುತ್ತಾ ಯಾವ ಉತ್ತರವನ್ನೂ ಕೊಡ ಲಿಲ್ಲ. ತಲೆಯ ತುಂಬ ಹಿಂದಿನ ಯೋಚನೆ ಆವರಿಸಿತ್ತು. ತನ್ನ ಚಿಕ್ಕ ವಯ ಸ್ಸಿನಲ್ಲಿ ಟೆರಿಯರ್‌ ಜಾತಿಯ ಗೂಳಿನಾಯಿಗಳನ್ನು ಸಾಕಿರಲಿಲ್ಲವೇ ? ಅದ