ಪುಟ:ಬಾಳ ನಿಯಮ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯನು ಕಂತೂ ಕೊನೆಯಿಲ್ಲದಂತೆ ಮಾಂಸವನ್ನು ತಾನೇ ತುರುಕುತಿದ್ದನು. ಆಗಿನ ಕಾಲದಲ್ಲಿ ಬರ್ಕ್ ಇದ್ದಿದ್ದರೆ, ಬೇಕಾದಷ್ಟು ಮಾಂಸದ ತುಂಡುಗಳನ್ನು ತನಗೆ ಸಾಲವನ್ನಾಗಿ ಕೊಡುತಿದ್ದನು ! ಆದರೆ ಕಾಲ ಬದಲಾಯಿಸಿದೆ. ಟಾಮ್ ಕಿಂಗ್ ಮುದುಕನಾಗುತಿದ್ದಾನೆ. ಎರಡನೆ ದರ್ಜೆಯ ಕ್ಲಬ್ಬುಗಳಲ್ಲಿ ಹೋರಾ ಡುವ ಮುದುಕರು, ವ್ಯಾಪಾರಸ್ಥರಿಂದ ಹೆಚ್ಚು ಹಣ ಸಂಪಾದಿಸುವ ನಿರೀಕ್ಷೆ ಯನ್ನು ಊಹಿಸುವುದೂ ಅನಾಧ್ಯ. ಬೆಳಿಗ್ಗೆ ಎದ್ದಾಗಿನಿಂದಲೂ ಮಾಂಸದ ತುಣಿಕಿಗಾಗಿ ಹಂಬಲಿಸುತ್ತಿದ್ದನು. ಇನ್ನೂ ಅದು ಕಡಿಮೆಯಾಗಿಲ್ಲ. ಅಂದಿನ ಹೋರಾಟಕ್ಕೆ ಸಾಕಷ್ಟು ಅಭ್ಯಾಸ ವಿಲ್ಲವೆಂಬ ಅಂಶ ಅವನಿಗೆ ತಿಳಿದಿತ್ತು. ಆಗ ಆಸ್ಟ್ರೇಲಿಯದಲ್ಲಿ ಮಳೆಯಿಲ್ಲದ ನೀರಸ ವಾತಾವರಣ, ಬರಗಾಲ ಬಂದಿತ್ತು. ಜವಾಬ್ದಾರಿಯಿಲ್ಲದ ಕೆಲಸಗಳು ಸಿಗುವುದು ಕಷ್ಟವಾಗಿತ್ತು. ಮುಷ್ಟಿಯುದ್ಧ ಮಾಡಲು ಸರಿಯಾದ ಜೊತೆ ಗಾರನಿರಲಿಲ್ಲ. ಆಹಾರವಂತೂ ಹೊಲಸು. ಅಲ್ಲದೆ ಸಾಕಷ್ಟು ಸಿಗುತ್ತಿರಲಿಲ್ಲ. ಆಗಾಗ ನೌಕಾದಳದಲ್ಲಿ ಕೆಲ ದಿನಗಳ ಮಟ್ಟಿಗೆ ಕೆಲಸ ಸಿಗುತಿತ್ತು. ಬೆಳಗಿನ ಜಾವ ಓಡಿ ಕಾಲು ಸರಿಪಡಿಸಿಕೊಳ್ಳುತಿದ್ದನು. ಆದರೆ ಜೊತೆಗಾರರಿಲ್ಲದ ಅಭ್ಯಾಸ ಕಷ್ಟವಾಗಿ ತೋರುತ್ತದೆ. ಅದರಲ್ಲ, ಆಹಾರಕ್ಕಾಗಿ ಕಾದಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದರೆ ಹೇಳತೀರದು. ಸ್ಯಾಂಡಲ್‌ನ ಜೋಡಿ ಯಾದ್ದರಿಂದ, ಟಾಮ್ ಕಿಂಗ್ಗೆ ವ್ಯಾಪಾರಸ್ಥರು ಸ್ವಲ್ಪ ಮಟ್ಟಿಗೆ ಸಾಲದ ಸೌಲಭ್ಯ ಒದಗಿಸಿದ್ದರು. ಗಯಟೆ ಕ್ಲಬ್ಬಿನ ಕಾರ್ಯದರ್ಶಿ ಮೂರು ಪೌಂಡು ಗಳನ್ನು ಮುಂಗಡವಾಗಿಯೆ ಕೊಟ್ಟಿದ್ದನು. ಹೇಗಾದರೂ ಅದು ಸೋತವನಿಗೆ ದೊರಕುವ ಹಣ. ಅದಕ್ಕಿಂತ ಹೆಚ್ಚು ಕೊಡಲು ಅವನು ಹಿಂಜರಿದನು. ಆಗಾಗ ಟಾಮ್ ಕಿಂಗ್ ತನ್ನ ವೃದ್ದ ಜೊತೆಗಾರರಿಂದ ಹೇಗಾದರೂ ಮಾಡಿ ಕೆಲವು ಷಿಲಿಂಗುಗಳ ಸಾಲವನ್ನಾದರೂ ತೆಗೆದುಕೊಳ್ಳುತಿದ್ದನು. ಆ ನೀರಸ ವರ್ಷದಲ್ಲಿ ಎಲ್ಲರಿಗೂ ಕಷ್ಟವಾಗಿತ್ತು; ಇಲ್ಲದಿದ್ದರೆ ಅವನಿಗೆ ಸ್ವಲ್ಪ ಮಟ್ಟಿಗೆ. ಹೆಚ್ಚು ಸಾಲ ದೊರಕುತಿತ್ತು.....ಮುಚ್ಚು ಮರೆಯಿಲ್ಲದೆ ಒಂದು ಮಾತಿನಲ್ಲಿ ಹೇಳುವುದಾದರೆ, ಅವನ ಅಭ್ಯಾಸ ನಿಜವಾಗಿಯೂ ತೃಪ್ತಿಕರವಾಗಿರಲಿಲ್ಲ. ಅವನಿಗೆ ತೊಂದರೆಯಿಲ್ಲದಂತೆ ಮಾಡಿ, ಒಳ್ಳೆಯ ಆಹಾರ ಕೊಟ್ಟಿದ್ದರೆ ಚೆನ್ನಾ ಗಿತ್ತು. ಅದೂ ಅಲ್ಲದೆ ನಲುವತ್ತು ವರ್ಷದ ಮನುಷ್ಯ ಇಪ್ಪತ್ತರ ಹುಡುಗ ನಂತೆ ತಕ್ಷಣ ಸಹಜ ಸ್ಥಿತಿಗೆ ಬರಲು ಸಾಧ್ಯವಿಲ್ಲ. “ಏಷ್ಟು ಗಂಟೆ, ಲಿಸಿ ?” ಎಂದು ಟಾಂಕಿಂಗ್ ಕೇಳಿದನು.