ಪುಟ:ಬಾಳ ನಿಯಮ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ 44 ಆತನ ಹೆಂಡತಿ ತೊಟ್ಟಿಯಾಚೆ ಹೋಗಿಬಂದು, “ಎಂಟು ಗಂಟೆಗೆ ಹದಿ ನೈದು ನಿಮಿಷಗಳಿವೆ....” ಎಂದಳು. * *ಕೆಲವೇ ನಿಮಿಷಗಳಲ್ಲಿ ಮೊದಲ ಸುತ್ತು ಪ್ರಾರಂಭವಾಗುತ್ತದೆ. ಅದೇನೋ ಕೇವಲ ವ್ಯಾಯಾಮದ ಪ್ರದರ್ಶನ. ಆಮೇಲೆ ಡೀಲರ್ ವೇಲ್ಸ್ ಮತ್ತು ಗ್ರಿಢಿ ಇವರ ಮಧ್ಯೆ ಮುಷ್ಟಿಯುದ್ಧಕ್ಕೆ ಪೂರ್ವಭಾವಿಯಾಗಿ ಆತ್ಮ ರಕ್ಷಣೆಯ ನಾಲ್ಕು ವರಿಸೆಗಳು, ಮತ್ತು ಸ್ಟಾರ್‌ ಲೈಟ್ ಯಾವನೋ ಒಬ್ಬ ನಾವಿಕನೊಡನೆ ಮತ್ತು ಕೌ೦ಡಿನ ಬಿರುಸಿನ ಆಟ ಆಡುತ್ತಾನೆ. ನಾನು ಒಂದು ಘಂಟೆಗಿಂತಲೂ ಹೆಚ್ಚು ಕಾಲ ಇರಬೇಕಾಗುತ್ತದೆ ..” ಹತ್ತು ನಿಮಿಷಗಳು ನಿಶ್ಯಬ್ಬನಾಗಿದ್ದನು. ಆಮೇಲೆ ಎದ್ದು, “ಲಿಸಿ, ಸತ್ಯವನ್ನು ಹೇಳುವುದಾದರೆ, ನನಗೆ ಸರಿಯಾದ ಅಭ್ಯಾಸ ದೊರಕಿಲ್ಲ....” ಎಂದನು. ಪ್ರಾಟನು ಹುಡುಕಿ ತೆಗೆದುಕೊಂಡು ಬಾಗಿಲ ಹತ್ತಿರ ಹೊರಟನು. ತಾನಾಗಿಯೆ ಅವಳನ್ನು ಚುಂಬಿಸಲಿಲ್ಲ. ಹಿಂದಿನಿಂದಲೂ ಹೊರಕ್ಕೆ ಹೋಗು ತಿದಾ ಗ ಆ ಪದ್ದತಿಯಿರಲಿಲ್ಲ. ಆದರೆ ಈ ರಾತ್ರಿ ಲಿಸಿ ತಾನಾಗಿಯೆ ಕೈ ಬೀಸಿ ಗಂಡನ ಮುಖವನ್ನು ಹತ್ತಿರ ಸೆಳೆದುಕೊಂಡಳು. ಆಜಾನುಬಾಹುವಿನ ಎದುರು ತಾನು ಅತಿ ಸಣ್ಣವಳಂತೆ ಕಂಡಳು. “ನಿನಗೆ ಒಳ್ಳೆಯದಾಗಲಿ, ಟಾಮ್. ಅವನನ್ನು ನೀನು ಗೆಲ್ಲುತ್ತೀಯೆ? ಎಂದಳು. “ಹೌದು ; ನಾನು ಹಾಗೆಯೇ ಮಾಡುತ್ತೇನೆ' ಎಂದು ಬಾಮ್ ಒಪ್ಪಿಗೆ ಯನ್ನು ಸೂಚಿಸಿದನು. ಆನಂದಾತಿರೇಕದಿಂದ ಆಕೆಯನ್ನು ನೋಡಿ ನಕ್ಕನು. ಹೆಂಡತಿಯ ಬಾಹುಬಂಧನದಲ್ಲಿದ್ದರೂ, ತನ್ನ ದೃಷ್ಟಿಯನ್ನು ಮಾತ್ರ ಶೂನ್ಯ ಕೊಠಡಿಯ ಕಡೆ ಹೊರಳಿಸಿದನು. ಅದೊಂದೇ ಅವನಿಗೆ ಪ್ರಪಂಚದಲ್ಲಿದ್ದ ವಸ್ತು; ಬಾಡಿಗೆಯನ್ನು ಮಾತ್ರ ಬಹು ದಿನಗಳಿಂದ ಕೊಟ್ಟಿರಲಿಲ್ಲ. ಉಳಿದ ಹತ್ತಿರದ ಜೀವಿಗಳೆಂದರೆ ತನ್ನ ಹೆಂಡತಿ ಮತ್ತು ಚಿಕ್ಕ ಮಕ್ಕಳು. ಆ ರಾತ್ರಿ ಎಲ್ಲವನ್ನೂ ಬಿಟ್ಟು ಹೆಂಡತಿ ಮಕ್ಕಳಿಗೆ ಮಾಂಸ ತರಲು ಹೊರಡಬೇಕಿತ್ತು. ಅವನು ನವೀನ ಕಾಲದ ಕೆಲಸ ಗಾರನಂತೆ ಯಂತ್ರದ ಬಳಿ ನಿಂತು ಸಂಪಾದನೆ ಮಾಡುವಂತಿಲ್ಲ. ಅವನ ಮಾರ್ಗ ಹಳೆಯದು; ಹಾಗೆಯೇ ಅನಾಗರಿಕವಾದುದು. ಒಟ್ಟಿನಲ್ಲಿ ಪ್ರಾಣಿ ಯಂತೆ ಹೊಡೆದಾಡಿ ಮಾಂಸದ ಸಂಪಾದನೆ ಮಾಡಬೇಕು !