ಪುಟ:ಬಾಳ ನಿಯಮ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಯುವಕ ಪೊನ್ನೊ ಒಳಕ್ಕೆ ಬಂದು, ಅನೇಕ ಹೋರಾಳುಗಳ ಕೈ ಕುಲುಕಿ ರಂಗದ ಹೊರಕ್ಕೆ ಬಂದನು. ದ್ವಂದ್ವ ಯುದ್ದದ ಆಹ್ವಾನಗಳು ಮಾತ್ರ ಮುಂದುವರಿಯುತ್ತಲೇ ಇದ್ದವು. ಸುತ್ತುವರಿದ ಹಗ್ಗದ ಮೇಲೆ ಯುವಕರ ತಂಡ ನೆಗೆಯುತಿತ್ತು ; ಅತೃಪ್ರಿಯ ಅಪರಿಚಿತ ಯುವಕರು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಗೆದ್ದವರ ಸಾಲಿನಲ್ಲಿ ಅರ್ಹತೆಯನ್ನು ಸಂಪಾದಿಸಿ ಕೊಳ್ಳುತ್ತಿದ್ದರು. ತಾನು ಅಜೇಯನಾಗಿದ್ದ ಕಾಲದಲ್ಲಿ ಟಾಮ್ ಕಿಂಗ್‌ಗೆ ಇಂಥ ಪ್ರಯೋ ಗದ ಹೋರಾಟಗಳಿಂದ ಸಂತೋಷವೋ ಬೇಸರವೊ ಬರುತಿತ್ತು. ಆದರೆ ಯುವಕರ ಸೊಬಗಿನಿಂದ ಆಕರ್ಷಿತನಾಗಿ ಟಾಮ್ ಕಿಂಗ್ ಈಗ ಮುಗ್ಧನಂತೆ ಕುಳಿತಿದ್ದನು.....ಯಾವಾಗಲೂ ಮುಷ್ಟಿ ಕಾಳಗದಲ್ಲಿ ಉದ್ಧಟ ಯುವಕರದೇ ಮೇಲು ಕೆ. ಹಾಗೆಯೇ ಪ್ರತಿ ಸಲವೂ ಅವರು ಕೆಳಗೆ ಬಿದ ಮುದುಕರನ್ನು ಮೆಟ್ಟಿ ನಿಲ್ಲುತ್ತಾರೆ. ಮತ್ತೆ ಇಂದಿನ ಯುವಕರು ನಾಳಿನ ಮುದುಕರಾಗಿ ಅದೇ ಜಾಡು ಹಿಡಿಯುತ್ತಾರೆ. ಆದರೆ ಯೌವನದ ಪ್ರತಿನಿಧಿಗಳಿಗೆ ಅಭಾವ ವಿಲ್ಲ. ಹೊಸ ಮಕ್ಕಳು ಬಹು ಬೇಗ ಬೆಳೆದು ದೊಡ್ಡವರನ್ನು ಹಿಡಿದೆಳೆಯು ತ್ತಾರೆ. ಹಿಂದೆಯೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಾಲಚಕ್ರ ವಿರುವ ತನಕ ಮೇಲೇರಿಬರುತ್ತಾರೆ. ಅಂತೂ ಶಾಶ್ವತವಾಗಿರುವ ಯೌವನ ತನ್ನ ಹಟ ಸಾಧಿಸದೆ ಬಿಡುವುದಿಲ್ಲ..... ಕಿಂಗ್ ಒಂದು ಕ್ಷಣ ಕಾಲ ಪತ್ರಿಕೆಯ ವರದಿಗಾರರು ಕುಳಿತಿದ್ದ ಜಾಗ ವನ್ನು ನೋಡಿದನು. ಅಲ್ಲಿ 'ಸ್ಪೋರ್ಟ್ಸ್ ಮನ್' ಪತ್ರಿಕೆಯ ಮಾರ್ಗನ್, ರೆಫರಿ' ಪತ್ರಿಕೆಯ ಕಾರ್‌ಬೆಟ್ ಕುಳಿತಿದ್ದರು. ಅವರಿಗೆ ವಂದನೆ ಸೂಚಿಸಲು ತಲೆದೂಗಿದನು....ಇನ್ನು ಆಟದ ಕಡೆ ಗಮನ. ಕೈ ಚಾಚಿದರು ; ಆಗ ಸಿಡ್ ಸುಲಿವಾನ್ ಮತ್ತು ಚಾರ್ಲೆ ಬೇಮ್ಸ್ ಎಂಬ ತನ್ನ ಕಡೆಯ ಸಹಾಯಕರು ತನಗೆ ಕೈಗವಸು ಹಾಕಿ ಗಟ್ಟಿಯಾಗಿ ಕಟ್ಟಿದರು. ಸ್ಯಾಂಡಲ್ ಕಡೆಯ ಸಣಾ ಯಕರು ಅದನ್ನೇ ಸೂಕ್ಷ್ಮವಾಗಿ ನೋಡುತಿದ್ದರು ; ಟಾಮ್ ಕಿಂಗ್‌ನ ಗೆಣ್ಣು ಗಳ ಮೇಲೆ ಕಟ್ಟಿದ್ದ ಟೇಪನ್ನು ಪರೀಕ್ಷಿಸಿದರು. ಸ್ಯಾಂಡಲ್‌ನನ್ನು ವಿಚಾರಿಸಿ ಕೊಳ್ಳಲು ಆ ಕಡೆ ಹೊರಟರು. ಅವನ ಷರಾಯಿ ಮತ್ತು ಸೈಟರ್‌ ತೆಗೆಯಲ್ಪ ಔತು. ಈಗ ಸ್ಯಾಂಡಲ್‌ನ ಸುಕುಮಾರ ದೇಹ ಹೊಳೆಯುತಿತ್ತು. ಟಾಮ್ ಕಿಂಗ್ ಆಶ್ಚರ್ಯಪಟ್ಟನು-ನಿಜವಾಗಿಯೂ ಸ್ಯಾಂಡಲ್ ಮೌವನದ ಅಪ ರಾವತಾರ ; ಆತನ ಮಾಂಸಖಂಡಗಳಂತೂ ರೇಷ್ಮೆಯಂಥ ಚರ್ಮದ ಹಿಂಬದಿ