ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮುಖಗಳು ಅತ್ಯಲ್ಪ. ಎದುರಿಗಿದ್ದ ಎಷ್ಟೋ ಮಕ್ಕಳು ತಾನು ರಂಗದಲ್ಲಿ ಮೊದಲ ಜಯಭೇರಿ ಹೊಡೆದಾಗ ಹುಟ್ಟಿಯೇ ಇರಲಿಲ್ಲ. ಮೈ ಹಗುರ ಮಾಡಿಕೊಂಡು ಮೇಲ್ಮಟ್ಟದ ವೇದಿಕೆಗೆ ನೆಗೆದನು. ತಲೆ ತಗ್ಗಿಸಿ ಹಗ್ಗವನ್ನು ಹಾದು ತನ್ನ ಮೂಲೆಯಲ್ಲಿ ಕುಳಿತನು. ಅದು ಮಡಿಸಬಹುದಾದ ಕುರ್ಚಿ. ಜ್ಯಾಕ್ ಬಾಲ್ ಎಂಬ ರೆಫರಿ ಅಲ್ಲಿಗೆ ಬಂದು ಕೈ ಕುಲುಕಿದನು. ಒಂದು ಕಾಲದಲ್ಲಿ ಬಾಲ್ ಜೆಟ್ಟಿಯಾಗಿದ್ದನು ; ಇಂದು ಅವನು ಮುರಿದು ಬಿದ್ದ ಮಹಾಮಲ್ಲ ; ಹತ್ತು ವರ್ಷಗಳಿಗೂ ಮೇಲ್ಪಟ್ಟು ಮಲ್ಲರಂಗಕ್ಕೆ ಇಳಿದಿರಲಿಲ್ಲ. ಅಂಥವನು ರೆಫರಿಯಾಗಿರುವುದನ್ನು ನೋಡಿ ಟಾಮ್ ಕಿಂಗ್ ಸಂತೋಷ ಪಟ್ಟನು. ತಾವಿಬ್ಬರೂ ಮುದುಕರ ಗುಂಪಿಗೆ ಸೇರಿದವರು. ತಾನು ಸ್ಯಾಂಡಲ್ ನನ್ನು ನೀಡುವಾಗ ಸ್ವಲ್ಪ ಕಾನೂನು ಮಾರಿದರೂ ಪರವಾಗಿಲ್ಲ ; ಅದನ್ನು ರಾದ್ಧಾಂತ ಮಾಡದೇ ಮುಚ್ಚಿ ಬಿಡುವ ಪ್ರವೃತ್ತಿ 'ಬಾಲ್'ನಲ್ಲಿರುವುದು ತನಗೆ ಗೊತ್ತುಂಟು..... ಒಬ್ಬೊಬ್ಬರಾಗಿ ಉತ್ಸಾಹಿ ಯುವಕರು ರಂಗದ ಸುತ್ತಮುತ್ತ ನೆರೆದರು. ಅವರೆಲ್ಲರೂ ಭಾರವನ್ನೆತ್ತುವ ದೊಡ್ಡ ಆಳುಗಳು, ರೆಫರಿ ಬಾಲ್, ಜನ ಸಮುದಾಯಕ್ಕೆ ಅವರ ಪರಿಚಯಮಾಡಿಕೊಟ್ಟನು. ಮತ್ತು ಅವರವರ ದ್ವಂದ್ವ ಯುದ್ಧದ ಆಹ್ವಾನಗಳನ್ನು ಘೋಷಿಸಿದನು. - “ಐವತ್ತು ಪೌಂಡಿನ ಪಂದ್ಯದಲ್ಲಿ ಗೆದ್ದವನನ್ನು, ಉತ್ತರ ಸಿಡ್ನಿಯ ಯುವಕ ಪೊನ್ನೋ ಆಹ್ವಾನಿಸುತ್ತಾನೆ....” ಎಂದು ಬಿಲ್ ಪ್ರಕಟಿಸಿದನು. ಜನ ಚಪ್ಪಾಳೆತಟ್ಟಿದರು....ಸ್ಯಾಂಡಲ್ ಹಗ್ಗದ ಮೇಲೆ ನೆಗೆದು ತನ್ನ ಮೂಲೆಯಲ್ಲಿ ಕುಳಿತಾಗ ಮತ್ತೆ ಚಪ್ಪಾಳೆಯಾಯಿತು. ಟಾಮ್ ಕಿಂಗ್ ಅಖಾಡದ ಆ ಕಡೆ ಕುತೂಹಲದಿಂದ ನೋಡಿದನು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ತಾವಿಬ್ಬರೂ ಕರುಣರಹಿತ ಯುದ್ಧಕ್ಕೆ ಮೈಂಡ್ಡ ಬೇಕು ; ಇಬ್ಬರೂ ತಮ್ಮಲ್ಲಿರುವ ಶಕ್ತಿಯನ್ನೆಲ್ಲ ಸಂಗ್ರಹಿಸಿ, ಯಾರನ್ನಾದರೂ ಜ್ಞಾನ ತಪ್ಪುವಂತೆ ಹೊಡೆಯಲೇಬೇಕು ; ಸ್ಯಾಂಡಲ್ ತನ್ನಂತೆಯೇ ಕುಸ್ತಿಯಾಟದ ಉಡುಪಿನ ಮೇಲೆ ಸೈಟರ್ ಮತ್ತು ಷರಾಯಿ ಧರಿಸಿದ್ದನು ; ಇದರಿಂದ ಅವನ ದೇಹಕಾಂತಿ ಸಂಪೂರ್ಣ ಹೊರಸೂಸಲು ಅವಕಾಶವಿರಲಿಲ್ಲ. ಅವನ ಮುಖ ವೇನೊ ಸುಂದರವಾಗಿತ್ತು. ಗುಂಗುರು ಹಳದಿ ಕೂದಲು ತಲೆಯ ತುಂಬ ದಟ್ಟವಾಗಿ ಬೆಳೆದಿತ್ತು. ಮಾಂಸಪುಷ್ಟಿಯುಳ್ಳ ದಪ್ಪನೆಯ ಕತ್ತು ಮಾತ್ರ ಆತನ ದೈಹಿಕ ಶಕ್ತಿಯನ್ನು ಸೂಚಿಸುವಂತಿತ್ತು.