ಪುಟ:ಬಾಳ ನಿಯಮ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ೩೭ ಕಾಲ ; ಕಾದಾಟಕ್ಕೆ ಮಿತಿಯುಂಟು ಎಂದು ಹೇಳುವವರನ್ನು ನಗೆಪಾಟಲು ಮಾಡುತ್ತಿದ್ದ ಕಾಲ. ನಿಜ ; ಯೌವನ ಪ್ರತೀಕಾರ ಬುದ್ದಿಯಿಂದ ಮುಂದು ವರಿದಿತ್ತು. ಅದು ಮುದುಕರನ್ನು ನಿರ್ದಾಕ್ಷಿಣ್ಯವಾಗಿ ನಾಶಪಡಿಸಿತ್ತು. ಆದರೆ ಆ ರೀತಿ ಮಾಡುವಲ್ಲಿ ತನ್ನನ್ನು ತಾನೇ ಬಡಿದು ನಾಶಗೊಂಡಿತ್ತು! ಯೌವನದ ಬಿಸಿ ರಕ್ತ ಉಬ್ಬಿ ಹರಿಯಿತು ; ಗೆಣ್ಣು ಗಳಿಂದ ಒಂದೇ ಸಮನೆ ಗುದ್ದಾಟ ನಡೆ ಯಿತು ; ಆದರೆ ವಯಸ್ಸು ಬಂದ ಮೇಲೆ ಪುನಃ ಯೌವನದ ಕೈಗೆ ಸಿಕ್ಕಿ ನುಚ್ಚು ನೂರಾಯಿತು. ಇಷ್ಟೇ ತಾನೆ! ಹೌದು ; ಯೌವನ ಯಾವಾಗಲೂ ಉತ್ಸಾಹ ಜನಕವಾಗಿಯೇ ಇರುತ್ತದೆ ! ವೃದ್ಧಾಪ್ಯವೆನ್ನುವುದು ವಯಸ್ಸಿಗೆ ಮಾತ್ರ ಅಂಟಿ ಕೊಂಡಿರುವ ಜಾಡ್ಯ....

ಕ್ಯಾಸಲ್ ರೀಗ್ ರಸ್ತೆಯನ್ನು ಸೇರಿದನು. ಎಡಕ್ಕೆ ತಿರುಗಿ, ಮೂರು ವಠಾರಗಳನ್ನು ದಾಟಿದ ಮೇಲೆ ಗೆರಟೆಕ್ತ ಬ್ ಸಿಕ್ಕಿತು. * ಬಾಗಿಲ ಹೊರಗೆ ಆಟವಾಡುತ್ತಿದ್ದ ಬೀದಿ ಪುಂಡರು ಮತ್ಯಾದೆಯಿಂದ ದಾರಿಬಿಟ್ಟರು. ಅವರಲ್ಲಿ ಒಬ್ಬ ಇನ್ನೊಬ್ಬನಿಗೆ ಹೇಳುತ್ತಿದ್ದನು : “ಅವನೇ ಇವನು! ಇವನೇ ಟಾಮ್ ಕಿಂಗ್ !” ಆ ಮಾತು ಟಾಮ್ ಕಿಂಗ್ನ ಕಿವಿಗೂ ಬಿತ್ತು. ಒಳಕ್ಕೆ ಹೊರಟನು. ಡ್ರೆಸ್ಸಿಂಗ್ ರೂಮಿಗೆ ಹೋಗುತ್ತಿದ್ದಾಗ ಕಾರ್ಯ ದರ್ಶಿಯನ್ನು ಸಂಧಿಸಿದನು. ಚುರುಕು ಸ್ವಭಾವದ ಕಾರ್ಯದರ್ಶಿ ಕೈ ಕುಲುಕಿದನು. “ಹೇಗಿದ್ದೀಯಾ , ಟಾಮ್ ??? “ಆರೋಗ್ಯವಾಗಿದ್ದೇನೆ....” ಎಂದು ಟಾಮ್ ಉತ್ತರಕೊಟ್ಟನು. ಅ ಸತ್ಯವನ್ನು ಹೇಳುತಿದ್ದೇನೆಂದು ಅವನಿಗೆ ಗೊತ್ತಿರದೆ ಇರಲಿಲ್ಲ. ತನ್ನಲ್ಲಿ ಸ್ವಲ್ಪ ಹಣವಿದ್ದಿದ್ದರೆ, ಆ ಸ್ಥಿತಿಯಲ್ಲಿ ಒಂದು ತುಂಡು ಮಾಂಸಕ್ಕಾಗಿ ತಕ್ಷಣ ವಿನಿ ಮಯ ಮಾಡಿಕೊಳ್ಳುತ್ತಿದ್ದನು ! ಡ್ರೆಸಿಂಗ್ ರೂಮಿನಿಂದ ಹೊರಕ್ಕೆ ಬಂದನು. ತನ್ನ ಸಹಾಯಕರು ಹಿಂದೆ ಬರುತ್ತಿದ್ದರು. ಆಸನ ಸಾಲುಗಳ ನಡುವೆ ದಾರಿಮಾಡಿಕೊಂಡು ಹಜಾರದ ಮಧ್ಯದಲ್ಲಿದ್ದ ಚೌಕಾಕಾರದ ರಂಗಸ್ಥಳದ ಬಳಿ ನಿಂತನು. ಕಾಯು ತಿದ್ದ ಜನ ಸಮುದಾಯ ಸಂತೋಷದಿಂದ ಹಿಗ್ಗಿ ಶುಭಾಶಯ ಕೋರಿತು. ಚಪ್ಪಾಳೆಯಂತೂ ಗಗನ ಭೇಧಿಸುವಂತೆ ಶಬ್ದ ಮಾಡಿತು. ಎಡ ಬಲ ದಿಕ್ಕು ಗಳಿಂದ ಬಂದ ಅಭಿನಂದನೆಗಳನ್ನು ಸ್ವೀಕರಿಸಿದನು; ಆದರೆ ಅವನಿಗೆ ಪರಿಚಿತ