ಪುಟ:ಬಾಳ ನಿಯಮ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಯ ಆಗ ಎದುರಾಳಿಯನ್ನು ಹಗ್ಗದ ನೇರಕ್ಕೆ ನಿಲ್ಲಿಸಿ ಬಡಿಯಲಾರಂಭಿಸಿದನು.. ಒಂದು ನಿಮಿಷವೂ ವಿಶ್ರಾಂತಿಗಾಗಲಿ ಅಥವಾ ಮುನ್ನುಗ್ಗುವುದಕ್ಕಾಗಲಿ ಅವಕಾಶಕೊಡಲಿಲ್ಲ. ಒಂದರ ಮೇಲೊಂದು ಏಟುಗಳ ಸುರಿಮಳೆಯಾಯಿತು. ಕಡೆಗೆ ಇಡೀ ಸಭೆ ಉತ್ಸಾಹದಿಂದ ವಾತಾವರಣವನ್ನೇ ಕಲಕಿಬಿಟ್ಟಿತು. ಮೆಚ್ಚಿಗೆಯ ಮಾತುಗಳಿಗೆ ಮಿತಿಯೇ ಇರಲಿಲ್ಲ. ಅಷ್ಟಾದರೂ ಸ್ಯಾಂಡಲ್ ಕಾಲ ಮೇಲೆಯೇ ನಿಂತಿದ್ದನು. ಗುರು ಗಳು ಮಾತ್ರ ನಿಲ್ಲಲೇ ಇಲ್ಲ. ಹಾಗೆ ಬಿಟ್ಟಿದ್ದರೆ, ಅವು ಮನುಷ್ಯನನ್ನು ಕೆಡವಿಬಿಡುವುದರಲ್ಲಿ ಸಂಶಯವಿಲ್ಲ. ಇಂಥ ಭಯಂಕರ ಶಿಕ್ಷೆಯನ್ನು ನೋಡಿ ಪೋಲೀಸ್ ಕ್ಯಾಪ್ಟನ್ ಗಾಬರಿಗೊಂಡನು ; ತಕ್ಷಣ ಕಾದಾಟ ನಿಲ್ಲಿಸಲು ರಂಗದ ಕಡೆ ಎದೋಡಿಬಂದನು. ರೌಂಡಿನ ಮುಕ್ಕಾಲು ಸೂಚಿಸಲು ಎಚ್ಚರಿಕೆಯ ಗಂಟೆಯನ್ನು ಹೊಡೆ ಯಲಾಯಿತು. ಸ್ಯಾಂಡಲ್ ತತ್ತರಿಸುತ್ತ ಮೂಲೆಗೆ ಹೋದನು ; ತನಗೆ ಏನೂ ಆಗಿರಲಿಲ್ಲವೆಂದು ಕ್ಯಾಪ್ಟನ್ನಿಗೆ ದಬಾಯಿಸಿದನು. ಸಮರ್ಥನೆಗಾಗಿ, ಎರಡು ಗಾಳಿಯ ಎಗುರುವಟ್ಟಿಗಳನ್ನು ಹಿಂದಕ್ಕೆಸೆದು ತೋರಿಸಿದನು. ಟಾಮಕಿಂಗ್ ಕಷ್ಟದಿಂದ ಉಸಿರೆಳೆಯುತ್ತಾ, ದೇಹವನ್ನೂ ವಾಲಿಸಿ ತನ್ನ ಮೂಲೆಯಲ್ಲಿ ಕುಳಿತಿದ್ದನು. ಅವನ ನಿರೀಕ್ಷಣೆ ಸಫಲವಾಗದೆ ಹತಾಶ ನಾಗಿದ್ದನು. ಗಲಾಟೆಯಿಲ್ಲದಿದ್ದರೆ ರೆಫರಿ ತನ್ನ ಕಡೆಯೇ ತೀರ್ಪು ಹೇಳು ತಿದ್ದನೋ ಏನೊ! ಆಗ ಹಣದ ಥೈಲಿ ತನ್ನದಾಗುತ್ತಿತ್ತು ! ಸ್ಯಾಂಡಲ್‌ನಂತೆ ತಾನು ಕೀರ್ತಿಗಾಗಲಿ ಅಥವಾ ವ್ಯಕ್ತಿಯ ಘನತೆಗಾಗಲಿ ಹೊಡೆದಾಡುವವನಲ್ಲ. ಆದರೆ ತನಗೆ ಬೇಕಾಗಿರುವುದು ಮೂವತ್ತು ಪೌಂಡು ಹೌಣ....ಈಗ ಸ್ಯಾಂಡಲ್ ಒಂದು ಕ್ಷಣ ಮಾತ್ರದಲ್ಲಿ ಚೇತರಿಸಿಕೊಳ್ಳುತ್ತಾನೆ !.... ಯವನ ಉಪಚಾರಮಾಡಲು ಎಲ್ಲರೂ ಬರುತ್ತಾರೆ.ಈ ಭಾವ ಕಿಂಗ್‌ನ ತಲೆಯಲ್ಲಿ ಮಿಂಚಿತು. ಮೊದಲಬಾರಿ ಇದನ್ನು ತಾನು ಕೇಳಿದ್ದು ಯುವಕನಾಗಿದ್ದಾಗ....ಅಂದು ರಾತ್ರಿ ಅವನು ಸ್ಟೇಷ‌ ಬಿಲ್‌ನನ್ನು ಸೋಲಿ ಸಿದ್ದನು. ಕಾದಾಟವಾದ ಮೇಲೆ ಒಬ್ಬ ನೀಟುಗಾರ ಭುಜತಟ್ಟಿ, ತನಗಾಗಿ ಮದ್ಯವನ್ನು ತಂದಾಗ, ಈ ಮಾತುಗಳನ್ನು ಹೇಳಿದನು: ಯವನಕ್ಕೆ ನನ್ನಿಂದ ಸೇವೆ ನಡೆಯಲಿ: ಆ ನೀಟುಗಾರ ಹೇಳಿದ್ದು ಸರಿ. ಬಹು ವರ್ಷಗಳ ಹಿಂದಿನ ಆ ರಾತ್ರಿಯಲ್ಲಿ ಜಾನಕಿಂಗ್ ಯುವಕನಾಗಿದ್ದನು. ಆದರೆ ಇಂದಿನ ರಾತ್ರಿ ಯೌವನ ಎದುರುಮೂಲೆಯಲ್ಲಿ ಕುಳಿತಿದೆ !....ಅರ್ಧಗಂಟೆಯಿಂದಲೂ ಕಾದಾಟ ನಡೆಯುತ್ತಿದೆ. ತಾನು ಮುದುಕ. ಸ್ಯಾಂಡಲ್‌ನಂತೆ ಹೋರಾಡಿದ್ದರೆ, ಆಟ