ಪುಟ:ಬಾಳ ನಿಯಮ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ೪t ಮುಗಿಸಲು ತನಗೆ ಹದಿನೈದು ನಿಮಿಷವೂ ಬೇಕಾಗುತ್ತಿರಲಿಲ್ಲ. ಆದರೆ ಚೇತ ರಿಸಿಕೊಳ್ಳಲು ತನಗೆ ಸಾಧ್ಯವಿಲ್ಲ. ಪ್ರತಿ ಗೌಂಡಿನ ಮಧ್ಯದಲ್ಲಿ ಸಿಗುತ್ತಿದ್ದ ಬಿಡುವಿನಲ್ಲಿ, ಶಕ್ತಿ ಸಂಪಾದನೆ ಆಗುವುದಿಲ್ಲ. ಮೊದಲೇ ಉಬ್ಬಿದ್ದ ರಕ್ತನಾಳ ಗಳೂ ಮತ್ತು ಕಷ್ಟ ಸಂಕೋಲೆಗಳಿಂದ ಹುಣ್ಣಾದ ಹೃದಯವೂ ಶಕ್ತಿಮಾರ್ಗ ದಲ್ಲಿ ಅಡಚಣೆಗಳಾಗಿದ್ದವು. ಮತ್ತೆ ಪ್ರಾರಂಭದಲ್ಲೇ ತನ್ನಲ್ಲಿ ಸಾಕಷ್ಟು ಸತ್ಯ ವಿರಲಿಲ್ಲ. ತನಗೆ ಕಾಲಿನ ಭಾರವೇ ಜಾಸ್ತಿಯಾಗಿ ಹಿಡಿದುಕೊಂಡಂತಿತ್ತು. ಎರಡು ಮೈಲಿಗಳ ದೂರ ನಡೆದುಕೊಂಡು ಬರಬಾರದಿತ್ತು. ಆದರೆ ತುಂಡು ಮಾಂಸ! ಬೆಳಗಿನಿಂದಲೂ ಅದಕ್ಕಾಗಿಯೆ ಹಾತೊರೆಯುತ್ತಿರುವುದು. ಮಾಂಸದ ವ್ಯಾಪಾರಿಗಳನ್ನು ಕಂಡರೆ ದೋಷ ಉಕ್ಕೇರಿಬರುತ್ತದೆ; ತನಗೆ ಅವರು ಸಾಲ ಕೊಡಲು ನಿರಾಕರಿಸಿದರು. ತಿನ್ನಲು ಕೂಳಿಲ್ಲದ ಮುದುಕ ಕಾದಾಟಕ್ಕೆ ಬರುವು ದೆಂದರೆ ಕಷ್ಟವೇ ಸರಿ. ತುಂಡುಮಾಂಸವೇನೊ ಅತಿ ಸಣ್ಣ ಪದಾರ್ಥ; ಹೆಚ್ಚೆಂದರೆ ಕೆಲವು ಪೆನ್ನಿಗಳಾಗಬಹುದು; ಆದರೆ ತನಗೆ ಅದು ಮೂವತ್ತು ಪೌಂಡಿನ ಹಣದಲ್ಲಿ ಅಡಕವಾಗಿದೆ !.... ಗಂಟೆಯ ಸದ್ದಿ ನಿಂದ ಹನ್ನೊಂದನೇ ರೌಂಡಿಗೆ ಆಹ್ವಾನ ಬಂತು. ನವಶಕ್ತಿ ಮುನ್ನುಗ್ಗುವಂತೆ ಸ್ಯಾಂಡಲ್ ನಟಿಸಿದನು. ಅವನಲ್ಲಿ ಯಾವ ಹೊಸ ಹುರುಪೂ ಇಲ್ಲದ ವಿಷಯ ಕಿಂಗಿಗೆ ತಿಳಿದಿತ್ತು; ಎಷ್ಟಾದರೂ ಮೋಸಗೊಳಿಸುವ ಆ ನಟನೆ ಪಂದ್ಯದಷ್ಟೇ ಹಳೆಯದಲ್ಲವೇ ? ಅಂದಮೇಲೆ ಕಿಂಗಿಗೆ ತಿಳಿಯದೆ ಇಲ್ಲ. ಆದರೂ ಕಿಂಗ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸ್ಟೇಟ್ಟಿಯಾಗಿ ಓಡಾ ಡುತ್ತಾ ಸ್ಯಾಂಡಲ್‌ನು ಚೇತರಿಸಿಕೊಳ್ಳಲು ಅವಕಾಶಕೊಟ್ಟನು. ಕಿಂಗಿಗೆ ಬೇಕಾದುದೇ ಅದು. ತನ್ನ ಎಡಗೈನಿಂದ ಅವನನ್ನು ಚುಚ್ಚಿ ಪ್ರತಿಯಾಗಿ ತಲೆ ತಗ್ಗಿಸುವಂತೆ ಮಾಡಿದನು. ಮೇಲೆ ನೆಗೆದು ಮೊಣಕೈ ಬಾಗಿನಿಂದ ತಿವಿಯಲಾರಂಭಿಸಿದನು. ಅರ್ಧಹೆಜ್ಜೆ ಹಿಂದಕ್ಕೆ ಹೋಗಿ ಮುಖದ ನೇರಕ್ಕೆ ಮುಷ್ಟಾಮುಷ್ಟಿ ನಡೆಸಿದನು. ಸ್ಯಾಂಡಲ್ ರಂಗದ ಮೇಲೆ ಕುಸಿದುಬಿದ್ದನು. ಅದಾದ ಮೇಲೆ ಕಿಂಗ್ ಮತ್ತಷ್ಟು ಜೋರಾದನು. ಎದುರಾಳಿಗೆ ವಿಶ್ರಾಂತಿ ಗಾಗಿ ಕಾಲವಿಳಂಬ ಮಾಡದೆ, ತನ್ನ ಮಟ್ಟಿಗೆ ಶಿಕ್ಷೆಯನ್ನೂ ಅನುಭವಿಸಿದನು. ಅದಕ್ಕಿಂತಲೂ ಹೆಚ್ಚಾಗಿ ಎದುರಾಳಿಯನ್ನು ಗಾಯಗೊಳಿಸುತ್ತಿದ್ದನು. ಸ್ಯಾಂಡಲ್ ನನ್ನು ಹಗ್ಗಗಳ ತನಕ ಓಡಿಸಿಕೊಂಡು ಎಲ್ಲ ರೀತಿಯ ಗುದ್ದು ಗಳಿಂದ ಅಪ್ಪಳಿಸಿದನು. ಮೈ ಅಡಗಿಸಿಕೊಂಡರೆ ಹಿಡಿದೆಳೆಯುತಿದ್ದನು. ಕೆಳಕ್ಕೆ ಬೀಳುವ ಸಂದರ್ಭ ಬಂದರೆ, ಒಂದು ಕೈಯಿಂದ ಮೇಲೆತ್ತಿ, ತಕ್ಷಣ ಇನ್ನೊಂದು