ಪುಟ:ಬಾಳ ನಿಯಮ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಬಾಳ ನಿಯಮ ಕೈಯಿಂದ ಬಿಗಿಯುತಿದ್ದನು. ಬೀಳಲು ಆಸ್ಪದ ಕೊಡದೆ ಹಗ್ಗದ ಕಡೆಯೇ ಕಾದಾಡುತಿದ್ದನು. ಇಷ್ಟು ಹೊತ್ತಿಗೆ ಸಭಿಕರು ಹುಚ್ಚರಂತಾದರು. ಇಡೀ ಸಭೆ ಟಾ ಕಿಂಗ್‌ನ ಸರ ಕೂಗಾಡಿತು. ಮುಂದೆ ಹೋಗು, ಟಾಮ ! ” “ಅವನನ್ನು ಹಿಡಿ ! ಹಿಡಿ ಅವನನ್ನು ! ” “ನಿನ್ನ ಕೈಗೆ ಸಿಕ್ಕಿದ್ದಾನೆ, ಟಾರ್ಮ! ಸಿಕ್ಕ ಬಿದ್ದ!” ಇನ್ನೇನು ಸುಂಟರಗಾಳಿಯಂತೆ ಕೊನೆಗೊಳ್ಳಬೇಕು; ಹಣಕೊಟ್ಟು ಕುಸ್ತಿ ಯನ್ನು ನೋಡಲು ಬಂದ ಜನರ ಉದ್ದೇಶವೂ ಅದೇ ಅಲ್ಲವೇ ? ಅರ್ಧಗಂಟೆಯ ಕಾಲ ಶಕ್ತಿ ಹಿಡಿದಿದ್ದ ಟಾಕಿಂಗ್, ತನಗೆ ಗೊತ್ತಿದ್ದ ಅತ್ಯಂತ ಮಹತ್ವಪೂರ್ಣ ಪ್ರಯತ್ನವೊಂದರಲ್ಲಿ ತೊಡಗಿದನು. ಈಗ ಆದರೆ ಆದಹಾಗೆ; ಇಲ್ಲದಿದ್ದರೆ ಇಲ್ಲವೇ ಇಲ್ಲ. ತಾನು ಗುದ್ದು ಗಳನ್ನು ಹೊಡಿಯು ತಿದ್ದಂತೆ, ಅದರ ಹಿನ್ನೆಲೆಯಲ್ಲಿ ಅಡಗಿದ್ದ ತೂಕ ಮತ್ತು ಅಪಾಯಗಳನ್ನು ಎಣಿಕೆ ಹಾಕಿದನು-ಸ್ಯಾಂಡಲ್ ಎಂಥ ದೃಡಕಾಯನೆಂದು ತಿಳಿದಿತ್ತು. ಅವನನ್ನು ಸಂಪೂರ್ಣ ಕೆಡವಿಹಾಕುವುದು ಸಾಮಾನ್ಯವಲ್ಲ. ಅವನ ಹೊಸ ಪ್ರಾಯದ ತಾಕತ್ತು ಹಾಗೂ ಸಹನೆಯನ್ನು ಹೇಳತೀರದು. ಸ್ಯಾಂಡಲ್ ನಿಜ ವಾಗಿಯೂ ಮುಂದೆ ಬರುವ ಮನುಷ್ಯ, ಆ ಭವಿಷ್ಯ ಅವನಲ್ಲಿ ಅಡಗಿದೆ. ಅಂಥ ಒರಟು ನಾರಿನಿಂದಲೇ ಯಶಸ್ವೀ ಹೋರಾಳುಗಳು ಸಿದ್ದರಾಗುವರು. ಸ್ಯಾಂಡಲ್ ತಲೆತಿರುಗಿ ತೂರಾಡುತ್ತಿದ್ದನು. ಟಾಮ್‌ಕಿಂಗ್ನ ಕಾಲು ಗಳಾದರೋ ಸುಕ್ಕಾಗಿ ಕುಸಿದುಬಿದ್ದವು ; ಆದರೂ ಕಿಂಗ್ ಮನಸ್ಸು ಗಟ್ಟಿ ಮಾಡಿಕೊಂಡು ಭಯಂಕರ ಗುದ್ದುಗಳನ್ನು ಕೊಡುತ್ತಲೇ ಇದ್ದನು. ಏನು ಮಾಡುವುದು ? ಪ್ರತಿಯೊಂದೂ ನೊಂದ ಕೈಗಳಿಗೆ ಮತ್ತಷ್ಟು ಯಾತನೆ ತರು ತಿತ್ತು. ಪ್ರತಿಹೊಡೆತವಿಲ್ಲದಿದ್ದರೂ ಎದುರಾಳಿಯಂತೆ ತನ್ನಲ್ಲಿ ತಾನೇ ಬಹು ಬೇಗ ದ.ರ್ಬಲನಾಗುತ್ತ ಬಂದನು. ಉಗ್ರ ಮನಸ್ಸರ್ಯದ ಗುದ್ದುಗಳು ನಿರರ್ಥಕವಾದವು. ಹಿಂದಿನಂತೆ ತೂಕವಿಲ್ಲದೆ ಹಗುರವಾಗಿದ್ದವು. ಕೆಳಗೆ ಎಳೆದಾಡುತಿದ ಕಾಲುಗಳು ಸೀಸದಂತಿದ್ದವು. ಇಂಥ ರೋಗದ ಲಕ್ಷಣ ಗಳನ್ನು ಕಂಡ ನ್ಯಾಂಡಲ್‌ನ ಪಕ್ಷಪಾತಿಗಳು ತಮ್ಮ ಮನುಷ್ಯನನ್ನು ಪ್ರೋತ್ಸಾ ಹಿಸಲು ಪ್ರಾರಂಭಿಸಿದರು. ಕಿಂಗ್ ಇದ್ದಕ್ಕಿದ್ದಂತೆ ಪ್ರಚೋದನೆಗೊಂಡು ಒಂದಾದ ಮೇಲೊಂದು ಎರಡು ಗುದ್ದುಗಳನ್ನು ಕೊಟ್ಟನು. ಒಂದು ಹೊಟ್ಟೆಯ ಕುಳಿಯಲ್ಲಿಯ ನರ ಗಳ ಜಾಲವನ್ನು ಬಿಡಿಸಿತು; ಮತ್ತೊಂದು ದವಡೆಗೆ ತಾಕಿತು. ಅವು