ಪುಟ:ಬಾಳ ನಿಯಮ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಜೋರಾದ ಹೊಡೆತಗಳಲ್ಲ. ಆದರೂ ಮಂಕುಗವಿದು ದುರ್ಬಲನಾಗಿದ್ದ ಸ್ಯಾಂಡಲ್ ತಡೆಯಲಾಗದೆ ಕೆಳಕ್ಕೆ ಬಿದ್ದು ನಡುಗಿದನು. ರೆಫರಿ ಬಂದು ಅವನ ಕಿವಿಗಳಲ್ಲಿ ನಿರ್ಧಾರಕ ಸೆಕೆಂಡುಗಳನ್ನು ಎಣಿಸುತ್ತಿದ್ದನು. ಹತ್ತು ಸೆಕೆಂಡುಗಳಲ್ಲಿ ಏಳದಿದ್ದರೆ ಸೋಲು ! ಸಭೆ ಸದ್ದಿಲ್ಲದೆ ಕಾಯುತಿತ್ತು. ಕಂಪಿ ಸುತಿದ್ದ ಕಾಲುಗಳ ಮೇಲೆ ಕಿಂಗ್ ನಿಂತಿದ್ದನು. ಮರಣೋನ್ಮುಖನಾದವ ನಂತೆ ದಿಗ್ಧಮಗೊಂಡನು. ತನ್ನ ಕಣ್ಣ ಮುಂದೆ ಜನರ ಅಸಂಖ್ಯಾತ ಮುಖಗಳು ಸಮುದ್ರದ ಅಲೆಗಳಂತೆ ತೂಗಾಡುತಿತ್ತು. ತನ್ನ ಕಿವಿಗೆ ಎಲ್ಲೋ ದೂರದಿಂದ ಬಂದ ಶಬ ದಂತೆ ರೇಫರಿ ಹೇಳುತಿದ್ದ ಎಣಿಕೆಗಳು ಕೇಳಿಸು ತಿದ್ದವು. ಆದರೂ ಪಂದ್ಯ ತನ್ನ ಕಡೆಯೇ ಆಗುವಂತೆ ಭಾವಿಸಿದನು ; ಅಷ್ಟು ಶಿಕ್ಷೆಗೊಳಗಾದ ಮನುಷ್ಯ ಪುನಃ ಏಳುವುದು ಅಸಂಭವ. ಆದರೆ ಯುವಕರು ಮಾತ್ರ ಏಳಬಲ್ಲರು; ಸ್ಯಾಂಡಲ್ ಎದ್ದನು! ನಾಲ್ಕನೇ ಸೆಕೆಂಡಿಗೆ ಮುಖವಡಿಯಾಗಿ ಹೊರಳಿದನು. ಕತ್ತಲೆಯಲ್ಲಿ ಹುಡುಕುವವ ನಂತೆ ಹಗ್ಗಗಳಿಗಾಗಿ ತಡಕಾಡಿದನು. ಏಳನೇ ಸೆಕೆಂಡಿಗೆ ತನ್ನನ್ನು ತಾನು ಮೊಣಕಾಲ ಮೇಲೆ ಎಳೆದುಕೊಂಡನು. ತಲೆ ಸ್ಥಿರವಾಗಿ ನಿಲ್ಲದೆ ಭುಜದ ಮೇಲೆ ವಾಲುತಿತ್ತು. ಹಾಗೆಂತು ವಿಶ್ರಾಂತಿ ಪಡೆದನು, ರೆಫರಿ ಒಂಬತ್ತು!? ಎಂದು ಕೂಗಿದಾಗ ಸ್ಯಾಂಡಲ್ ಎದ್ದು ನಿಂತನು. ಎಡತೋಳಿನಿಂದ ಮುಖ ವನ್ನೂ ಬಲತೋಳಿನಿಂದ ಹೊಟ್ಟೆಯನ್ನೂ ಮುಚ್ಚಿಕೊಂಡನು. ಆ ರೀತಿ ಅಪಾಯ ಸ್ಥಳಗಳನ್ನು ಕಾದುಕೊಂಡನು. ಥಟ್ಟನೆ ಮುಂದಕ್ಕೆ ತತ್ತರಿಸಿದನು. ಕಿಂಗ್‌ನನ್ನು ಹಿಮ್ಮೆಟ್ಟಿಸಿದರೆ ತನಗೆ ಹೆಚ್ಚು ಕಾಲಾವಕಾಶ ಸಿಗುತ್ತೆಂಬ ಭರವಸೆ ಅವನಿಗಿತ್ತು. ಸ್ಯಾಂಡಲ್ ಎದ್ದ ತಕ್ಷಣ ಕಿಂಗ್ ಅವನ ಕಡೆ ಹೊರಟನು. ಆದರೆ ಅವನು ಕೊಟ್ಟ ಎರಡು ಗುದ್ದು ಗಳು ಅಸ್ಥಿರವಾಗಿದ್ದ ಭುಜಗಳಲ್ಲಿ ನಾಟಲಿಲ್ಲ. ಮರುಕ್ಷಣ ಸ್ಯಾಂಡಲ್, ಕಿಂಗ್‌ನನ್ನು ಹತ್ತಿರ ಸೆಳೆದುಕೊಂಡು ಹುಚ್ಚನಂತೆ ಹಿಡಿದನು. ಇಬ್ಬರನ್ನೂ ಬೇರ್ಪಡಿಸಲು ರೆಫರಿ ಕಷ್ಟ ಪಡಬೇಕಾಯಿತು. ಬಿಡಿಸಿ ಕೊಂಡು ಬರಲು ಕಿಂಗ್ ಆತುರನಾಗಿದ್ದನು. ಯುವಕರು ಎಷ್ಟು ಬೇಗ ಚೇತ ರಿಸಿಕೊಳ್ಳಬಲ್ಲರು ಎಂಬ ಅಂಶ ಅವನಿಗೆ ತಿಳಿದಿತ್ತು. ಅದನ್ನು ತಪ್ಪಿಸಿದರೆ ಮಾತ್ರ ಸ್ಯಾಂಡಲ್ ತನ್ನವನಾಗಬಲ್ಲ. ಜೋರಾದ ಮತ್ತು ಧೃಡವಾದ ಮುಷ್ಟಿಯ ಹೊಡೆತವೊಂದು ಆ ಕೆಲಸ ಮಾಡಬಲ್ಲದು. ಸ್ಯಾಂಡಲ್ ತನ್ನ ವನು, ನಿಸ್ಸಂದೇಹವಾಗಿ ತನ್ನವನು. ಅವನನ್ನು ತಾನು ಮಿತಿಮಾರಿದ ಯುದ್ದ