ಪುಟ:ಬಾಳ ನಿಯಮ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ಬಾಳ ನಿಯಮ ತಂತ್ರದಿಂದ ಮಾತ್ರ ಗೆಲ್ಲಬೇಕು....ಸ್ಯಾಂಡಲ್ ರಭಸದಿಂದ ಅಳ್ಳಾಡಿ ಹೊರಕ್ಕೆ ಬಂದನು, ಉಳಿವು ಅಳಿವುಗಳ ಮಧ್ಯೆ ತೂರಾಡುತ್ತಿದ್ದನು. 'ಈಗ ಒಳ್ಳೆಯ ಗುದ್ದು ಹೊಡೆದರೆ ಸಾಕು ! ಅವನನ್ನು ಕೆಳಕ್ಕೆ ಬೀಳಿಸಿ ಹೊರಕ್ಕೆಸೆಯಬಹುದು. ನಿಜ ವಾಗಿಯೂ ಆ ಗುದ್ದಿನ ಹಿಂದೆ ತುಂಡುಮಾಂಸ ಕಾದಿದೆ ! ಎಂದು ಟಾವು ಕಿಂಗ್ ಮನೋಧಕ ಸ್ಥಿತಿಯಲ್ಲಿ ಯೋಚಿಸಿದನು. ಅದಕ್ಕಾಗಿ ಸಿದ್ದ ನಾದನು. ನರವ್ಯೂಹ ಬಿಗಿಯಾಯಿತು. ಅದರೆ ಅದು ವೇಗವಾಗಿಯೂ ಜೋರಾಗಿಯೂ ಬೀಳಲಿಲ್ಲ. ಸ್ಯಾಂಡಲ್ ತೂರಾಡಿದರೂ ಕೆಳಕ್ಕೆ ಬೀಳಲಿಲ್ಲ ; ಹಗ್ಗ ಹಿಡಿದೇ ಇದ್ದನು. ಕಿಂಗ್ ಅವನ ಕಡೆ ಮತ್ತೆ ತಿರುಗಿಬಿದ್ದನು. ಥಟ್ಟ ನೆಯ ತೀವ್ರ ಮನೋಯಾತನೆಯಿಂದ ಮತ್ತೊಂದು ಗುದ್ದು ಕೊಟ್ಟನು. ಆದರೇನು ? ಅವನ ದೇಹವೇ ಅವನಿಗೆ ಅನ್ಯಾಯಮಾಡಿತು. ಅವನಲ್ಲಿ ಉಳಿದಿರುವುದು ಕೇವಲ ಕಾದಾಟದ ಬುದ್ದಿವಂತಿಕೆ ಮಾತ್ರ; ಅದೂ ಕೂಡ ಸುಸ್ತಿನಿಂದ ಮರೆಯಾಗಿ ಮಂಕಾಗಿತ್ತು. ದವಡೆಗೆಂದು ಗುರಿಯಿಟ್ಟು ಹೊಡೆದ ಗುದ್ದು ಭುಜದ ಮೇಲಕ್ಕೆ ಹೋಗಲಿಲ್ಲ! ಮನಸ್ಸರ್ಯವಿತ್ತು; ಆದರೆ ಬೇಸರ ಗೊಂಡ ಮಾಂಸಖಂಡಗಳು ವಿಧೇಯವಾಗಿರಲಿಲ್ಲ. ಗುದ್ದಿನ ರಭಸದಿಂದ ಟಾಮ್ ಕಿಂಗ್ ತಾನೇ ಹಿಂದಕ್ಕೆ ತತ್ತರಿಸಿ ಇನ್ನೇನು ಬೀಳುವುದರಲ್ಲಿದ್ದನು. ಮತ್ತೆ ಸ್ಪರ್ಧಿಸಿದನು. ಈ ಬಾರಿಯಂತೂ ಸಂಪೂರ್ಣ ನಿಶ್ಯಕ್ತಿಯಿಂದ ಸ್ಯಾಂಡಲ್‌ನ ಮೇಲೆ ಬಿದ್ದನು; ನೆಲಕ್ಕೆ ಬೀಳದಂತೆ ಅವನನ್ನೇ ಹಿಡಿದಿದ್ದನು. ಜೀವ ಉಳಿಸಿಕೊಳ್ಳಲು ಪ್ರಾರ್ಥಿಸುತಿದ್ದನೋ ಏನೋ ! ಕಿಂಗ್ ಸಿಡಿಲಿನಂತೆ ತನ್ನ ಕೆಲಸವನ್ನೇನೊ ಮಾಡಿದನು. ಅವನ ಕಥೆ ಇನ್ನು ಮುಗಿಯಿತು. ಯಾವನದ ಸೇವೆ ನಡೆಯಬೇಕು. ತನ್ನ ಹಿಡಿತದಲ್ಲಿ ದ್ದರೂ ಸ್ಟಾಂಡಲ್ ಕ್ಷಣಕ್ಷಣಕ್ಕೂ ಶಕ್ತಿವಂತನಾಗುತಿದ್ದ ಪ್ರಭಾವವನ್ನು ಕಿಂಗ್ ಅನುಭವಿಸಿದನು. ರೆಫರಿ ಇಬ್ಬರನ್ನೂ ತಳ್ಳಿದಾಗ ತನ್ನ ಕಣ್ಣೆದುರಿಗೇ ಯೌವನ ಮತ್ತೆ ಚೇತರಿಸಿಕೊಳ್ಳುತಿತ್ತು! ಬರಬರುತ್ತಾ ಸ್ಯಾಂಡಲ್ ನ ಗುದ್ದು ಗಳು ಶಕ್ತಿಯುತವಾಗಿ ಖಚಿತವಾಗಿದ್ದವು. ಟಾಮಕಿಂಗ್‌ನ ದೃಷ್ಟಿ ಮಬ್ಬಾಯಿತು. ಮುಷ್ಟಿಯ ಕೈಗವಸು ತನ್ನ ದವಡೆಗೆ ಬೀಸಲು ಬರುತಿದ್ದಂತೆ ಕಂಡಿತು. ಅದನ್ನು ತಪ್ಪಿಸಿಕೊಳ್ಳಲು ಕೈ ಮೇಲೆತ್ತಲು ಮನಸ್ಸು ಮಾಡಿದನು....ಅಪಾಯದ ದರ್ಶನವಾಯಿತು; ಮುಂದಿನ ಕಾರ್ಯವೇನೆಂದು ಮನಸ್ಸು ನಿರ್ಧರಿಸಿತು; ಆದರೆ ತೋಳು ತುಂಬ ಭಾರವಾಗಿತ್ತು. ಅದು ಮೇಲೇಳಲು ಸಾಧ್ಯವಿಲ್ಲ. ತನ್ನ ಆತ್ಮವನ್ನೇ ಕಲಕಿ