ಪುಟ:ಬಾಳ ನಿಯಮ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಪ್ರಯತ್ನ ಪಟ್ಟನು. ಅಷ್ಟು ಹೊತ್ತಿಗೆ ಆ ಮುಷ್ಟಿಯ ಕೈಗವಸು ಜೋರಾಗಿ ಬಿತ್ತು. ವಾಕಿಂಗಿಗೆ ವಿದ್ಯುತ್ತಿನ ಕಿಡಿ ಫಕ್ಕನೆ ಹೊಡೆದಂತಾಯಿತು. ತಕ್ಷಣ ಕತ್ತಲ ತೆರೆ ಅವನನ್ನು ಆವರಿಸಿತು. ಪುನಃ ಕಣ್ಣು ತೆರೆದಾಗ ಅವನು ತನ್ನ ಮೂಲೆಯಲ್ಲಿ ಕುಳಿತಿದ್ದನು. ಬಾಂಡಿ ಬೀಚಿನಲ್ಲಿ ಅಲೆಗಳು ಬಡಿದಾಡುವಂತೆ ಸಭಿಕರು ಕೂಗುತಿದ್ದುದು ಕಿಂಗಿಗೆ ಕೇಳಿಸಿತು. ಒದ್ದೆಯಾಗಿದ್ದ ಸ್ಪಂಜನ್ನು ಮೆದುಳಿನ ಭಾಗಕ್ಕೆ ಒತ್ತ ಲಾಯಿತು. ಅವನ ಮುಖಕ್ಕೆ ಮತ್ತು ಎದೆಗೆ ಸ್ಪೇ ಮೂಲಕ ಸಿಡಿಸುಲಿವಾನ್ ತಣ್ಣನೆಯ ನೀರನ್ನು ಚಿಮುಕಿಸುತಿದ್ದನು. ಕೈಗವಸುಗಳನ್ನು ಆಗಲೇ ತೆಗೆಯ ಲಾಗಿತ್ತು. ಸ್ಯಾಂಡಲ್ ಅವನ ಕಡೆ ಬಗ್ಗಿ ಕೈ ಕುಲುಕುತಿದ್ದನು. ತನ್ನನ್ನು ಕೆಡವಿದ ಮನುಷ್ಯನ ಬಗ್ಗೆ ಕಿಂಗಿಗೆ ಯಾವ ದ್ವೇಷವೂ ಇಲ್ಲ. ಹೃತೂರ್ವಕವಾಗಿ ಅವನ ಕೈಗಳನ್ನು ಹಿಡಿದು ಬೀಳ್ಕೊಟ್ಟನು.” * ಸ್ಯಾಂಡಲ್ ರಂಗದ ಮಧ್ಯ ಭಾಗಕ್ಕೆ ಬಂದು ನಿಂತನು. ಸಭಿಕರಲ್ಲಿ ಹುಯಿಲೋ ಹುಯಿಲು; ಅವರೆಲ್ಲರೂ ಸ್ಯಾಂಡಲ್‌ನ ಹತ್ತಿರ ಓಡುತ್ತಿದ್ದರು. ಯುವಕ ಪ್ರೊನ್ನೊ ಮತ್ತೆ ದ್ವಂದ್ವಯುದ್ಧಕ್ಕೆ ಆಹ್ವಾನಿಸಿ ಪಂದ್ಯದ ಹಣವನ್ನು ನೂರು ಪೌಂಡುಗಳಿಗೆ ಏರಿಸಿದನು; ಅದನ್ನು ಸ್ಯಾಂಡಲ್ ಒಪ್ಪಿಕೊಂಡದ್ದಕ್ಕಾಗಿ ಜನ ಮತ್ತಷ್ಟು ಗೆಲುವಿನಿಂದ ಕೂಗಾಡಿದರು. * ಟಾಮ್ ಕಿಂಗ್ ನಿರುತ್ಸಾಹದಿಂದ ನೋಡುತಿದ್ದನು; ಆತನ ಸಹಾಯ ಕರು ಮೈ ಮೇಲೆ ನಿಂತಿದ್ದ ನೀರನ್ನು ಒರೆಸಿ, ಮುಖವನ್ನು ಸರಿಪಡಿಸಿದರು. ರಂಗದಿಂದ ಹೊರಡಿಸಲು ಪ್ರಯತ್ನ ಪಟ್ಟರು.....ಟಾಮ್ ಕಿಂಗಿಗೆ ಹಸಿವಿನ ತೀಕಯಾತನೆ ಉಂಟಾಗಿತ್ತು. ಅದು ಸಾಮಾನ್ಯ ಬಾಯಿ ಚಪಲದ ಪರಿಣಾಮವಲ್ಲ. ಹೊಟ್ಟೆಯನ್ನೆ ಕಲಕಿ ಬಂದ ಹಸಿವಿನಿಂದ ಇಡೀ ದೇಹ ಮೂರ್ಛಹೋದಂತಿತ್ತು. ಸ್ವಲ್ಪ ಕಾಲದ ಹಿಂದೆ ತಾನು ಸ್ಯಾಂಡಲ್‌ನನ್ನು ಸೋಲಿನ ಇಕ್ಕುಳದಲ್ಲಿ ಸಿಕ್ಕಿಸಿದ್ದ ಜ್ಞಾಪಕವಾಯಿತು. ಓ, ಮಾಂಸದ ತುಂಡೊಂದು ಇದ್ದಿದ್ದರೆ ಕೆಲಸ ಮಾಡುತಿತ್ತು ! ಕಡೆಯ ನಿರ್ಧಾರಕ ಹೊಡೆತ ಗುರಿತಪ್ಪಲು ತುಂಡು ಮಾಂಸದ ಅಭಾವವೇ ಕಾರಣ. ಎಲ್ಲಕ್ಕೂ ತುಂಡು ಮಾಂಸ, ತುಂಡುಮಾಂಸ! ಹಗ್ಗಗಳ ಮೂಲಕ ಈಚೆಗೆ ಬರಲು ಯಾರೋ ಸಹಾಯಮಾಡಿದರು. ಆದರೂ ಟಾಮ್ ಕಿಂಗ್ ಸಹಾಯವನ್ನು ಅಪೇಕ್ಷಿಸಲಿಲ್ಲ. ಸ್ವತಂತ್ರವಾಗಿ ಹಾದು ನೆಲದ ಮೇಲೆ ನೆಗೆದನು. ಮಧ್ಯ ಹಜಾರದಲ್ಲಿ ಜನಜಂಗುಳಿ ವಿಪರೀತ