ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ವಾಗಿತ್ತು. ಹೇಗೋ ದಾರಿಮಾಡುತ್ತಿದ್ದವರನ್ನೇ ಟಾಮ್ ಕಿಂಗ್ ಹಿಂಬಾಲಿಸಿ ನಡೆದನು. ಡ್ರೆಸಿಂಗ್ ರೂಮನ್ನು ಬಿಟ್ಟು ಹೊರಬಂದಾಗ, ಒಬ್ಬ ಯುವಕ, ಟಾಮ್ ಕಿಂಗ್‌ನನ್ನು ಮಾತನಾಡಿಸಿದನು : “ನಿನ್ನ ಕೈಯಲ್ಲೇ ಸಿಕ್ಕಾಗ ಅವನನ್ನು ಏಕೆ ಹಿಡಿಯಲಿಲ್ಲ ? ಸುಖವಾಗಿ ಗೆಲ್ಲಬಹುದಿತ್ತು!” “ಬಿಡಯ್ಯ, ಹಾಳಾಗಿ ಹೋಗಲಿ !” ಎಂದು ಟಾಂಕಿಗ್ ಮೆಟ್ಟಿಲಿಳಿದು ಕಾಲುಹಾದಿಗೆ ಬಂದನು. ಸಾರ್ವಜನಿಕ ಭವನದ ಬಾಗಿಲುಗಳು ಪೂರ್ಣತೆರೆಯಲ್ಪಟ್ಟಿದ್ದವು. ದೀಪ ಉರಿಯುತಿತ್ತು. ಮದ್ಯವನ್ನು ಸರಬರಾಯಿಮಾಡುತ್ತ ಹುಸಿನಗೆಯ ಹೆಂಗಸರು ಓಡಾಡುತಿದ್ದರು. ಕಾದಾಟದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಅನೇಕ ಧ್ವನಿಗಳನ್ನು ಕಿಂಗ್ ಆಲಿಸಿದನು. ಮೇಜಿನ ಮೇಲೆ ನಾಣ್ಯಗಳು ಝಣ ಝಣ ಶಬ್ದ ಮಾಡುತ್ತಿದ್ದವು. ಯಾರೋ ಒಬ್ಬರು ಪಾನೀಯ ತೆಗೆದು ಕೊಳ್ಳಲು ಟಾಂಕಿಂಗ್‌ನನ್ನೂ ಕರೆದರು. ಕಿಂಗ್ ತಲೆಯಲ್ಲಾಡಿಸಿ ಬೇಡ ವೆಂದು ತನ್ನ ದಾರಿ ತಾನು ಹಿಡಿದನು. ಅವನ ಜೇಬಿನಲ್ಲಿ ಒಂದು ಪೆನ್ನಿ ಯೂ ಇರಲಿಲ್ಲ. ಎರಡು ಮೈಲಿಗಳ ಮನೆಯ ಕಡೆ ಪ್ರಯಾಣ ಬಹು ದೂರವಿದ್ದಂತೆ ಕಂಡಿತು. ಅವನು ನಿಜ ವಾಗಿಯೂ ವೃದ್ಧನಾಗುತ್ತಿದ್ದಾನೆ. ಸ್ಥಳ ದಾಟ ಇದ್ದಕ್ಕಿದ್ದಂತೆ ಒಂದು ಬೆಂಚಿನ ಮೇಲೆ ಕುಳಿತನು. ಕಾದಾಟದ ಫಲಿತಾಂಶವನ್ನು ತಿಳಿಯಲು ಕಾತರಳಾಗಿಯೂ ಮತ್ತು ತನಗಾಗಿ ಕಾದು ಕುಳಿತೂ ಇರುವ ಹೆಂಡತಿಯ ನೆನಪಾಯಿತು. ಆ ಯೋಚನೆ ಅವನ ಎದೆಗುಂದಿಸಿತು ; ಇದು ಎಲ್ಲ ಸೋಲಿ ಗಿಂತಲೂ ಕಷ್ಟ ತರವಾದುದು ; ಎದುರಿಸಲು ಸಾಧ್ಯವೇ ಇಲ್ಲ. ಅವನು ದುರ್ಬಲನಾಗಿ, ಮುಟ್ಟಿದರೆ ನೋಯುವವನಂತೆ ಕಂಡನು. ಜಜ್ಜಿಹೋಗಿದ್ದ ಗೆಣ್ಣುಗಳಿಂದ ನರಳಾಡುತಿದ್ದುದನ್ನು ನೋಡಿದರೆ, ಅವನಿಂದ ಮುಂದೆ ಯಾವ ಕೆಲಸವೂ ನಡೆಯಲಾರದು. ನೌಕಾದಳದಲ್ಲಿ ಉದ್ಯೋಗ ದೊರಕಿದರೂ, ಮುಷ್ಟಿಯ ಬಿಗಿ ತಪ್ಪಿಹೋಗಿದೆ ; ಆಯುಧಗಳನ್ನು ಹಿಡಿಯ ಬೇಕಾದರೆ ಒಂದು ವಾರವಾದರೂ ಬೇಕು. ಹೊಟ್ಟೆ ತೊಳಸಿ ಬರುತಿದ್ದ ಹಸಿವು ಅವನಿಗೆ ಜುಗುಪ್ಪೆ ಹುಟ್ಟಿಸಿತು. ದಾರಿದ್ರದ ಒತ್ತಡ ತಡೆಯ ಲಾರದೆ, ಕಣ್ಣಲ್ಲಿ ನೀರು ಹರಿಯಿತು. ಇದು ಅವನ ಜಾಯಮಾನಕ್ಕೆ ವಿರೋಧ ವಾಗಿತ್ತು. ಹಾಗಿದ್ದರೂ ಕಣ್ಣೀರು ಹಾಕುವುದೆಂದರೆ ಎಂಥ ದೌರ್ಜನ್ಯದ