ಪುಟ:ಬಾಳ ನಿಯಮ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಳಕ ಮಂಡಳಿ

ಪ್ರಸಂಗವಿರಬೇಕು ! ತಕ್ಷಣ ಕೈಗಳಿಂದ ಮುಖ ಮುಚ್ಚಿಕೊಂಡನು. ಅಳುತ್ತಿ ದ್ದಾಗ ಸೃಷರ್‌ಬಿಲ್‌ನ ಜ್ಞಾಪಕವಾಯಿತು. ಆ ರಾತ್ರಿ : ಬಹುವರ್ಷಗಳ ಹಿಂದಿನ ರಾತ್ರಿಯಲ್ಲಿ ತಾನು ಅವನನ್ನು ಹೊಡೆದಿರಲಿಲ್ಲವೇ? ಪಾಪ ; ಮುದಿ ಸ್ಪೆಷರ್‌ಬಿಲ್! ಆತ ಡ್ರೆಸಿಂಗ್ ರೂಮಿನಲ್ಲಿ ಅಂದು ಏಕೆ ಅತ್ತನೆಂಬುದು ಇಂದು ತಿಳಿಯಿತು..... ಮುದುಕರ ಮಂಡಲಿ ದಂಡಿನ ಪಾಳಯದಲ್ಲಿ ವ್ಯಕ್ತಿಯೊಬ್ಬನ ಜೀವನಕ್ಕೆ ಸಂಬಂಧಿಸಿದ ವಿಚಾರಣೆ ನಡೆದಿತ್ತು. ವೈಟ್ ಫಿಶ್ ನದೀ ಪ್ರದೇಶದ ಮುದುಕನೇ ಈ ಅಪ ರಾಧಿ, ವೈಟ್ ಫಿಶ್ ನದಿ ಲೀ ಬಾರ್‌ ಸರೋವರದ ಹತ್ತಿರ ಯೂಕಾನ್‌ಗೆ ಸೇರುತ್ತದೆ.....ಇಡೀ ಡಾಸನ್ ನಗರವೇ ಮುದುಕನ ವಿಷಯದಲ್ಲಿ ತಲೆಕೆಡಿಸಿ ಕೊಂಡಿತ್ತು. ಅಷ್ಟೇ ಅಲ್ಲ; ಸಾವಿರಾರು ಮೈಲಿಗಳ ಯೋಕಾನ್ ನಿವಾಸಿ ಗಳೂ ಮುದುಕನ ಬಗ್ಗೆ ಕುತೂಹಲಿಗಳಾಗಿದ್ದರು: ಭೂಮಿಯನ್ನು ವಶ ಪಡಿಸಿಕೊಳ್ಳುವ ಮತ್ತು ಸಮುದ್ರದ ಮೇಲೆ ಕಳ್ಳತನಮಾಡುವ ಆಂಗ್ಲೋಸ್ಯಾಕ್ಷನರ ಪದ್ಧತಿಯಂತೆ ಕಾನೂನಿನ ಅಧಿಕಾರ ಗೆದ್ದ ಜನಾಂಗಕ್ಕೆ ಮಾಸಲು ; ಬಹು ವೇಳೆ ಆ ನ್ಯಾಯ ವಿಧಾನಗಳು ಕ್ರೂರವಾಗಿರುತಿದ್ದವು. ಆದರೆ ಇಂಬರ್‌ನ ಬಗ್ಗೆ ಕಾನೂನು ಅಪರಿಪೂರ್ಣವೂ ದುರ್ಬಲವೂ ಆಗಿದ್ದಂತೆ ಕಂಡಿತು. ಲೆಕ್ಕ ಹಾಕಿ ನೋಡುವುದಾದರೆ, ಅವನಿಗೆ ವಿಧಿಸಲಿರುವ ಶಿಕ್ಷೆ ಯಲ್ಲಿ ಯಾವ ಬುದ್ದಿವಂತಿಕೆಯ ಕಾಣದು. ಅವನು ಅಪರಾಧಿ ಎಂಬ ಸಮರ್ಥನೆಯೂ ಅದಕ್ಕೆ ತಕ್ಕ ಶಿಕ್ಷೆಯೂ ಮೊದಲೇ ತೀರ್ಮಾನವಾಗಿತ್ತು. ಅದರಲ್ಲಿ ಯಾವ ಸಂಶಯವೂ ಇರಲಿಲ್ಲ. ಅದು ಮರಣ ದಂಡನೆಯಾಗಿ ದ್ದರೂ, ಇಂಬರ್‌ನಿಗೆ ಇದ್ದುದು ಒಂದು ಜೀವ ಮಾತ್ರ ! ಆದರೆ ಅವನ ಬಗ್ಗೆ ಪ್ರಚಲಿತವಿದ್ದ ಕಥೆಗಳು ನೂರಾರು..... ನಿಜವಾಗಿಯೂ ಅವನ ಕೈ ತುಂಬ ಬಹು ಜನರ ರಕ್ತದ ಕಲೆಗಳು ! ಜನ ಹೇಳುವಂತೆ ಆತ ನಡೆಸಿದ ಕೊಲೆಗಳು ಎಷ್ಟೊಂದು ಸರಿಯಾಗಿ ಹೇಳಲು ಸಾಧ್ಯವಿಲ್ಲ. ದಾರಿಯ ಪಕ್ಕದಲ್ಲಿ ಧೂಮಪಾನ ಮಾಡುವವರನ್ನೋ, ಸೌವ್ ಸುತ್ತ ಕುಳಿತು ಹರಟೆಹೊಡೆಯುವವರನ್ನೇ ಕೇಳಿದರೆ ಇಂಬರ್‌ನ ಕೈಯಲ್ಲಿ