________________
೫೬ ಬಾಳ ನಿಯಮ Y ಎಷ್ಟು ಜನ ಸತ್ತಿರಬಹುದೆಂಬ ಸಾಮಾನ್ಯ ಲೆಕ್ಕಾಚಾರ ತಿಳಿಯಬಹು ದಾಗಿತ್ತು. ಕೊಲೆಗೀಡಾದವರೆಲ್ಲ ಬಿಳಿಯ ಜನಾಂಗದವರು ; ಒಬ್ಬಂಟಿಗರಾಗಿ ಅಥವಾ ಜೊತೆಗಾರರೊಡನೆ ಅಥವಾ ತಂಡಗಳಲ್ಲಿ ಆ ಬಡ ಜೀವಿಗಳು ಕೊಲೆ ಗೀಡಾಗಿದ್ದರು. ಈ ಚೆಲ್ಲಾಟದ, ಉದ್ದೇಶಪೂರಿತ ಕೊಲೆಗಳು ಬಹುಕಾಲ ದಿಂದ ಪೋಲೀಸು ಸವಾರರಿಗೆ ಬಿಡಿಸಲಾರದ ಸಮಸ್ಯೆಯಾಗಿತ್ತು. ಮುಂದೆ ಕ್ಯಾ ಪ್ರನ್‌ಗಳ ಕಾಲದಲ್ಲೂ ಹಾಗೆಯೇ ಇತ್ತು. ಇತ್ತೀಚಿನ ನದಿಯ ಕವಲು ಗಳು ತಿಳಿದಂತೆ, ಆ ಭೂಮಿಯ ಮೇಲ್ವಿಚಾರಕರಾಗಿ ಗವರ್ನರ್ ಸಾಹೇಬರು ಬಂದರು. ಆಗಲೂ ಇಂಬರ್‌ನ ರಹಸ್ಯ ತಿಳಿಯಲಿಲ್ಲ. ಎಲ್ಲಕ್ಕಿಂತಲೂ ಆಶ್ಚರ್ಯಕರವಾದ ವಿಷಯವೆಂದರೆ, ಇಂಬರ್ ತಾನಾಗಿಯೆ ಡಾನನ್ ಪ್ರದೇಶಕ್ಕೆ ಬಂದು ತಪ್ಪುಗಳನ್ನು ಒಪ್ಪಿಕೊಂಡದ್ದು. ವಸಂತಕಾಲದ ಕೊನೆಯಲ್ಲಿ ಅವನು ಪ್ರಯಾಣ ಬೆಳೆಸಿದ್ದನು. ಯೂಕಾನ್ ನದಿ ಮಂಜುಗಡ್ಡೆಗಳ ಕೆಳಗೆ ಪ್ರವಹಿಸುತ್ತಿತ್ತು. ಆಗ ಮುದುಕನಾದ ಇಂಡಿಯನ್ ಕಷ್ಟದಿಂದ ನದಿಮಾರ್ಗದ ಏರು ನೆಲಗಳನ್ನು ಹತ್ತಿ, ಕಡೆಗೆ ದೊಡ್ಡ ರಸ್ತೆಯನ್ನು ಸೇರಿದ್ದನು. ಅಲ್ಲಿ ನಿಂತು ಮಿಕಿ ಮಿಕಿ ನೋಡುತ್ತಿದ್ದನು. ಅವನು ನಡೆಯುತ್ತಿದ್ದ ರೀತಿಯನ್ನು ಗಮನಿಸಿದವರು ಆತನು ದುರ್ಬಲನಾಗಿ ತೂರಾಡುತ್ತಿದ್ದಾನೆಂದು ತಿಳಿದರು. ಹಾಗೆಯೇ ಯಾವುದೋ ಕಟ್ಟಡಕ್ಕಾಗಿ ರಾಶಿಹಾಕಿದ ಮರದ ದಿಮ್ಮಿಗಳ ರಾಶಿಯ ಮೇಲೆ ಕುಳಿತನು. ಅನಂತ ಪ್ರವಾಹದೋಪಾದಿಯಲ್ಲಿ ಓಡಾಡುತಿದ್ದ ಬಿಳಿಯ ಜನರನ್ನು ದಿಟ್ಟಿಸಿ ನೋಡುತ್ತಾ ಆ ದಿನವನ್ನೆಲ್ಲ ಕಳೆದನು. ಅವನ ವಿಚಿತ್ರ ಮುಖಭಾವ ಅನೇಕರನ್ನು ಆ ಕಡೆ ಸೆಳೆಯಿತು. ಅಂತೆಯೆ ಅವನ ಬಗ್ಗೆ ಅನೇಕ ಟೀಕೆಗಳು ಹೊರಟಿದ್ದುವು. ಇಂಬರನು ಸ್ವತಃ ಅನಾಧಾರಣ ವ್ಯಕ್ತಿಯಾಗಿದ್ದ ವಿಷಯವನ್ನು ಜನ ಮರೆ ತಿದ್ದರು ; ಏಕೆಂದರೆ ಸ್ವಲ್ಪ ಕಾಲಾನಂತರ ಅವನನ್ನು ತಾನೇ ಕಂಡುಹಿಡಿದವ ರಂತೆ ತನ್ನ ಸೂಕ್ಷ್ಮಗ್ರಹಣ ಶಕ್ತಿಯನ್ನು ಹೊಗಳಿಕೊಂಡರು. ಈ ಸನ್ನಿವೇಶದಲ್ಲಿ ಧೈರ್ಯದಿಂದ ವರ್ತಿಸಲು ಕಿರಿಯ ಡಿಕನ್ಸನ್‌ಗೆ ಅವಕಾಶ ಸಿಕ್ಕಿತು. ಡಿಕನ್ಸನ್ ಇಲ್ಲಿಗೆ ಮೊದಲು ನೆಲಸಲು ಬಂದಾಗ ಅವ ನಲ್ಲಿ ಸ್ವಲ್ಪ ಹಣವಿತ್ತು. ಅಂತೆಯೇ ಎಷ್ಟೋ ಕನಸು ಕಟ್ಟಿದ್ದನು. ಆದರೆ ಹಣ ಪೋಲಾದಂತೆ ಅವನ ಆಶೆಗಳೆಲ್ಲವೂ ದೂರ ಸರಿದವು. ಪುನಃ ದೇಶಕ್ಕಾದರೂ ಹಿಂದಿರುಗಿ ಹೋಗುವ ಉದ್ದೇಶದಿಂದ, ಆತ ' ಹಾಲ್ ಬೂಕ್ ಆಂಡ್ ಮ್ಯಾಸನ್ ' ಎಂಬ ದಳ್ಳಾಳಿಗಳ ಸಂಸ್ಥೆಯಲ್ಲಿ ಗುಮಾಸ್ತೆಯಾಗಿದ್ದನು. ಆ