ಪುಟ:ಬಾಳ ನಿಯಮ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾಳ ನಿಯಮ ಟ್ರಾವಿಸ್ ಡಿಕನ್ಸನನ ಭುಜದ ಕಡೆ ನೋಡಿ ಬೆಚ್ಚು ಬಿದ್ದವಳಂತೆ ಚೀತ್ಕರಿ ಸಿದಳು. ಡಿಕನ್ಸನ್ ಹಿಂತಿರುಗಿ ನೋಡಿ ತಾನೂ ಬೆಚ್ಚಿದನು. ಇಂಬರ್ ದಾರಿಯನ್ನು ದಾಟಿ ಅಲ್ಲಿ ಬಂದು ನಿಂತಿದ್ದನು ! ವಿಷಣ್ಣ ನಾಗಿಯೂ, ಹಸಿವಿ ನಿಂದ ಬೆಂಡಾದ ಛಾಯೆಯಂತೆಯೂ ಕಾಣುತಿದ್ದನು. ಅವನ ದೃಷ್ಟಿ ಹುಡು ಗಿಯ ಕಡೆ ತಿರುಗಿತು. “ನಿನಗೇನು ಬೇಕು ?” ಎಂದು ಕಿರಿಯ ಡಿಕನ್ಸನ್ ನಡುಗುತ್ತಾ ತಟಕ್ಕನೆ ಕೇಳಿದನು. ಇಂಬರ್ ಗುರುಗುಟ್ಟುತ್ತಾ ಗಂಭೀರವಾಗಿ ಎಮಿಲಿ ಟ್ರಾವಿಸಳ ಬಳಿ ನಿಂತನು. ಅವಳನ್ನು ಕಾಲಿನಿಂದ ಹಿಡಿದು ತಲೆಯ ತನಕ ಸೂಕ್ಷ್ಮವಾಗಿ ಗಮನಿಸಿದನು. ಅವಳ ರೇಷ್ಮೆಯಂಥ ಕಂದು ಬಣ್ಣದ ಕೂದಲು ಮತ್ತು ನುಣುಪಾದ ಕೆನ್ನೆಯು ಇಂಬರ್‌ನಲ್ಲಿ ವಿಶೇಷ ಆಸಕ್ತಿಯನ್ನು ಕೆರಳಿಸಿತು. ನಿಜವಾಗಿಯೂ ಕೆನ್ನೆಗೆಂಪು ಸೂಕ್ಷ್ಮವಾಗಿ ಚಿಮುಕಿಸಿದಂತಿತ್ತು. ಪತಂಗದ ಮೃದುವಾದ ರೆಕ್ಕೆಯ ಹೊಳಪಿನಂತಿತ್ತು. ದೋಣಿ ಅಥವಾ ಕುದುರೆ ಯಾವ ರೀತಿ ಇದೆ ಎಂದು ಲೆಕ್ಕಾಚಾರಹಾಕುವವನಂತೆ, ಇಂಬರ್ ಅವಳ ಸುತ್ತ ತಿರುಗಿದನು. ಪಶ್ಚಿಮಾಭಿಮುಖವಾಗಿ ಇಳಿಯುತಿದ್ದ ಸೂರ್ಯನ ಕಾಂತಿ ಎಮಿಲಿ ಟ್ರಾವಿಸಳ ಕಿವಿಯಲ್ಲಿದ್ದ ಕಡುಗೆಂಪಿನ ಹರಳಿನ ಮೂಲಕ ಹಾದು ಬರುತಿತ್ತು; ಅದನ್ನೇ ನೋಡುತ್ತ ಇಂಬರ್‌ ಯೋಚಿಸತೊಡಗಿದನು. ಮತ್ತೆ ಅವಳ ನೀಲಿಯ ಕಣ್ಣುಗಳನ್ನು ಶ್ರದ್ಧಾಪೂರ್ವಕವಾಗಿ ನೋಡಿದನು....ಏನನ್ನೋ ಗೊಣಗುಟ್ಟುತ್ತಾ ತನ್ನ ಕೈಯನ್ನು ಅವಳ ಕೈ ಮೇಲಿಟ್ಟನು. ಮತ್ತೊಂದು ಕೈಯಲ್ಲಿ ಅವಳ ಹಸ್ತವನ್ನು ಮೇಲೆತ್ತಿ ಹಿಂದಕ್ಕೆ ಬಗ್ಗಿಸಿದನು. ತಕ್ಷಣ ತಿರಸ್ಕಾರವನ್ನು ಸೂಚಿಸುವಂತೆ ಗಂಟಲಿನಲ್ಲೇ ಮಾತನಾಡುತ್ತಾ, ಅವಳ ಕೈ ಬಿಟ್ಟು ಬಿಟ್ಟನು. ಅವನ ಮುಖದಲ್ಲಿ ಬೇಸರ ಮತ್ತು ಆಶ್ಚರ್ಯ ಭಾವಗಳಿ ದ್ದವು. ಡಿಕನ್ಸನ್ ಕಡೆ ತಿರುಗಿ, ಸಂಬೋಧಿಸಿದನು. * ಗಂಟಲಿನೊಳಗೇ ಮಾತನಾಡುತಿದ್ದ ಇಂಬ‌ನ ಭಾಷೆ ಡಿಕನ್ಸನ್‌ಗೆ ಅರ್ಥವಾಗಲಿಲ್ಲ. ಎಮಿಲಿ ಟ್ರಾವಿಸ್ ನಕ್ಕಳು. ಇಂಬರ್ ಸಿಂಡರಿಸಿಕೊಂಡು ಇಬ್ಬರ ಮುಖಗಳನ್ನೂ ನೋಡಿದನು. ಇನ್ನೇನು ಹೊರಡುವುದರಲ್ಲಿದ್ದನು. ಆಗ ಎಮಿಲಿ ಟ್ರಾವಿಸ್ ಜಿಮ್ಮಿಯನ್ನು ನೋಡಿ, “ಓ ಜಿಮ್ಮಿ, ಇಲ್ಲಿ ಬಾ” ಎಂದಳು. ಜಿಮ್ಮಿ ಎದುರು ವಾರಿಯಿಂದ ಬಂದನು. ಅವನೊಬ್ಬ ದೊಡ್ಡದಾಗಿ